ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವು ಬಹುಶಃ 18ನೇ ಶತಮಾನಕ್ಕೆ ಸೇರಿರುತ್ತದೆ, ಈ ದೇವಸ್ಥಾನ ನಿರ್ಮಾಣವಾಗಿ ಸುಮಾರು 250 ವರ್ಷಗಳಾಗಿರುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಕುರಿತು ಯಾವುದೇ ಶಾಸನ ಗ್ರಂಥಗಳಲ್ಲಿ ಉಲ್ಲೇಖವಿರುವುದಿಲ್ಲ.
ಈ ಸ್ಥಳದಲ್ಲಿ ಅನೇಕ ವರ್ಷಗಳ ಹಿಂದೆ ಒಂದು ದೊಡ್ಡ ಹುತ್ತವಿತ್ತು ಅನೇಕ ಭಕ್ತಾದಿಗಳಿಂದ ಆ ಹುತ್ತಕ್ಕೆ ಪೂಜೆಯು ನಡೆಯುತ್ತಿತ್ತು. ಒಂದಾನೊAದು ದಿನ ರಾಜ ವಂಶಸ್ಥರೊಬ್ಬರು ಮದರಾಸಿಗೆ ಹೋಗುವ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಭಕ್ತಾದಿಗಳನ್ನು ನೋಡಿ ವಿಶೇಷವೇನೆಂದು ಕೇಳಲು ಅಲ್ಲಿಯ ಭಕ್ತಾದಿಗಳು ಹುತ್ತಕ್ಕೆ ಹರಕೆ ಹೊತ್ತು ಪೂಜೆ ಮಾಡುವುದರಿಂದ ನಾಗರಾಜನು ಅವರ...