ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ ದೇವಾಲಯವು ಬೆಂಗಳೂರು ನಗರ, ಮಹಾಲಕ್ಷ್ಮೀಪುರದಲ್ಲಿ ಒಂದು ಎತ್ತರವಾದ ಗುಡ್ಡದ ಮೇಲೆ ಇರುತ್ತದೆ. ಈ ದೇವಾಲಯವು ಸರ್ಕಾರದ ಆದೇಶದಂತೆ ಘೋಷಿತ ಸಂಸ್ಥೆಯಾಗಿರುತ್ತದೆ. ಸದರಿ ದೇವಾಲಯವನ್ನು 1973ರಲ್ಲಿ ಏಕಶಿಲೆಯ ಮೇಲೆ ತೈಲವರ್ಣದ ಮಾರುತಿಯ ಚಿತ್ರವನ್ನು ಬರೆಯಿಸಿ ಪೂಜಾದಿಗಳನ್ನು ನಡೆಸಿ ಹಾಗೂ ಶ್ರೀ ರಾಮನವಮಿಯಂದು ಪೂಜೆಯನ್ನು ಸಹ ಸಲ್ಲಿಸಿ ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ ಇರುವುದನ್ನು ಗುರುತಿಸಿ ಶ್ರೀ ಆಂಜನೇಯಸ್ವಾಮಿಯ ವಿಗ್ರಹ ಕೆತ್ತನೆಯ ಕಾರ್ಯವನ್ನು ಪ್ರಾರಂಭಿಸಿ 1976ನೇ ಸಾಲಿನ ಜೂನ್ 7 ರಂದು ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಈ ಎಲ್ಲಾ ಕಾರ್ಯಗಳು ಭಕ್ತಾದಿಗಳು/ಸಾರ್ವಜನಿಕರಿಂದಲೇ ನಡೆಸಿದ್ದು,...