ಪೌರಾಣಿಕ ಹಿನ್ನೆಲೆ

ಸಾಗರ ನಗರ ಮದ್ಯಭಾಗದಲ್ಲಿ ಕ್ರೀ ಶ 1623 ರಲ್ಲಿ ಕೆಳದಿ ಅರಸರಿಂದ ಶ್ರೀ ಮಹಾಗಣಪತಿ ದೇವಾಲಯವು ನಿರ್ಮಾಣ ಆಗಿರುವ ಬಗ್ಗೆ ಪ್ರತೀತಿ ಇದೆ. ಶ್ರೀ ಮಹಾಗಣಪತಿಯು ದಶಬುಜ (ಹತ್ತು ಕೈಗಳು) ಬಲಮೂರಿ ಸೊಂಡಿಲನ್ನು ಹೊಂದಿರುವ ಎಡ ತೊಡೆಯ ಮೇಲೆ ಸಿದ್ಧಿ ಲಕ್ಷ್ಮೀಯನ್ನು ಕೂರಿಸುಕೊಂಡಿರುವ ವಿಗ್ರಹವು ದೇವಾಲಯದಲ್ಲಿ ಪ್ರತೀಷ್ಠಾಪನೆಯಾಗಿದೆ. ದೇವಾಲಯವ ಜೀರ್ಣೋದ್ಧಾರವನ್ನು ಕೆಳದಿ ಅರಸರ ಕಾಲದಲ್ಲಿ ಮಾಡಿಸಿ, ಸ್ವರ್ಣ ರೇಖಾಂಕಿತ ಲಿಂಗವನ್ನು ಪ್ರತೀಷ್ಠಾಪಿಸಿ ಶ್ರೀ ಮಹಾಗಣಾಧೀಶ್ವರ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಪ್ರತೀತಿ ಇದೆ.