ಶ್ರೀ ಮಾರಿಕಾಂಬಾ ದೇವಸ್ಥಾನ, ಶಿರಸಿ, ಉತ್ತರ ಕನ್ನಡ - 581401, ಉತ್ತರ ಕನ್ನಡ .
Sri Marikamba Temple, Sirsi, Uttara Kannada - 581401, Uttara Kannada District [TM000106]
×
Temple History
ಇತಿಹಾಸ
ಶಿರಸಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿಯ ಪ್ರಮುಖ ಪಟ್ಟಣ. ಶಿರಸಿಯಲ್ಲಿ ನೆಲೆನಿಂತಿರುವ ಶ್ರೀ ಮಾರಿಕಾಂಬಾ ದೇವಿ ಅತ್ಯಂತರ ಜಾಗೃತ ಶಕ್ತಿ ದೇವತೆಯೆಂದು ಪ್ರಸಿಧ್ದಳು. ಕರ್ನಾಟಕದಲ್ಲಿರುವ ದೇವಿಯ ಪವಿತ್ರ ಪೀಠಗಳಲ್ಲಿ ಶಿರಸಿಯ ಶ್ರೀ ಮಾರಿಕಾಂಬೆಯೂ ಒಂದು. ಕರ್ನಾಟಕದಲ್ಲಿ ಅಷ್ಟೇ ಅಲ್ಲ, ನೆರೆ ರಾಜ್ಯಗಳಾದ ಕೇರಳ, ಆಂಧ್ರ, ತಮಿಳುನಾಡು, ಗೋವಾ, ಮಹಾರಾಷ್ಟ್ರಗಳಲ್ಲಿ ಶಿರಸಿಯ ಶ್ರೀ ಮಾರಿಕಾಂಬೆಯ ಭಕ್ತರು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಅದರಲ್ಲಿಯೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನರಿಗಂತೂ ಶ್ರೀ ಮಾರಿಕಾಂಬೆ ಮುಖ್ಯ ಆರಾಧ್ಯ ದೇವತೆ.
ಶಿರಸಿಯ ಶ್ರೀ ಮಾರಿಕಾಂಬೆ ಮಾರಿಯಾಗಿ, ಮಾರೆಮ್ಮಳಾಗಿ, ಮಹಾಕಾಳಿಯಾಗಿ, ಮಹಾಲಕ್ಷ್ಮೀಯಾಗಿ, ಮಹಾಸರಸ್ವತಿಯಾಗಿ ಸಕಲರನ್ನೂ ಕಾಯುವ ಮಹಾಶಕ್ತಿಯಾಗಿ...ಶಿರಸಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿಯ ಪ್ರಮುಖ ಪಟ್ಟಣ. ಶಿರಸಿಯಲ್ಲಿ ನೆಲೆನಿಂತಿರುವ ಶ್ರೀ ಮಾರಿಕಾಂಬಾ ದೇವಿ ಅತ್ಯಂತರ ಜಾಗೃತ ಶಕ್ತಿ ದೇವತೆಯೆಂದು ಪ್ರಸಿಧ್ದಳು. ಕರ್ನಾಟಕದಲ್ಲಿರುವ ದೇವಿಯ ಪವಿತ್ರ ಪೀಠಗಳಲ್ಲಿ ಶಿರಸಿಯ ಶ್ರೀ ಮಾರಿಕಾಂಬೆಯೂ ಒಂದು. ಕರ್ನಾಟಕದಲ್ಲಿ ಅಷ್ಟೇ ಅಲ್ಲ, ನೆರೆ ರಾಜ್ಯಗಳಾದ ಕೇರಳ, ಆಂಧ್ರ, ತಮಿಳುನಾಡು, ಗೋವಾ, ಮಹಾರಾಷ್ಟ್ರಗಳಲ್ಲಿ ಶಿರಸಿಯ ಶ್ರೀ ಮಾರಿಕಾಂಬೆಯ ಭಕ್ತರು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಅದರಲ್ಲಿಯೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನರಿಗಂತೂ ಶ್ರೀ ಮಾರಿಕಾಂಬೆ ಮುಖ್ಯ ಆರಾಧ್ಯ ದೇವತೆ.
ಶಿರಸಿಯ ಶ್ರೀ ಮಾರಿಕಾಂಬೆ ಮಾರಿಯಾಗಿ, ಮಾರೆಮ್ಮಳಾಗಿ, ಮಹಾಕಾಳಿಯಾಗಿ, ಮಹಾಲಕ್ಷ್ಮೀಯಾಗಿ, ಮಹಾಸರಸ್ವತಿಯಾಗಿ ಸಕಲರನ್ನೂ ಕಾಯುವ ಮಹಾಶಕ್ತಿಯಾಗಿ ನೆಲೆಸಿರುವಳು. ಮನುಕುಲದ ಮಾತೃಭಕ್ತಿಗೆ ಸರಿಸಾಟಿಯಾದುದು ಬೇರೆ ಯಾವುದೂ ಇಲ್ಲ. ನಮಗೆ ತಾಯಿಯೇ ದೇವರು. ದೇವರೇ ತಾಯಿ. ತಾಯಿ ದೇವರೆಂದು ಪೂಜಿಸುವುದು ಪ್ರಾಚೀನ ಕಾಲದಿಂದಲೂ ಬಂದಿರುವ ಸಂಪ್ರದಾಯ. ತನ್ನ ಮಕ್ಕಳ ರೋಗ-ರುಜಿನಗಳನ್ನು ದೂರಮಾಡಿ , ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿ , ಸಕಲರಿಗೂ ಬಾಳುವೆಯ ಬೆಳಕು ನೀಡಿ ಆಯುರಾರೋಗ್ಯ ಭಾಗ್ಯ ಕರುಣಿಸಿ ಕಾಪಾಡುವ ಮಾರಿಕಾಂಬೆ ನೆರೆ ನಂಬಿದವರ ತಾಯಿಯೇ ಸರಿ.
ಕಳೆದ 332 ವರ್ಷಗಳಿಗೂ ಹಿಂದೆ ಶಿರಸಿಯಂತಹ ಪುಟ್ಟ ಊರಿನಲ್ಲಿ ಗಾಳಿಮಾರಿಯಾಗಿ ಬಂದು ನೆಲೆಸಿ ಜನರ ಭಾವ ಭಕ್ತಿಗೊಂದಿಗೆ ಮುಪ್ಪುರಿಗೊಂಡು ಬೆಳೆದು ಶಿರಸಿಯನ್ನೂ, ತನ್ನನ್ನೂ ನಂಬಿದ ಭಕ್ತ ಸಮುದಾಯವನ್ನು ಬೆಳೆಸಿ ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಮುಖ ಶಕ್ತಿ ಪೀಠಾಧೀಶ್ವರಿಯಾಗಿ ಖ್ಯಾತಳಾಗಿರುವುದು ಸಾಮಾನ್ಯವಲ್ಲ. ಆ ಪ್ರಖರ ದೈವೀ ಶಕ್ತಿಗೆ ಸಾವಿರ ಸಾವಿರ ಪ್ರಣಾಮ.
ಮಾರಿಕಾಂಬಾ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ಸೇವೆ ಕೈಂಕರ್ಯಗಳು ನಡೆಯುತ್ತವೆ. ಕಾರ್ತಿಕದಲ್ಲಿ ನಿತ್ಯ ದೀಪೋತ್ಸವ, ವಿಶೇಷ ದಿನಗಳಲ್ಲಿಯ ಕಣ್ಮನ ಸೆಳೆಯುವ ಪುಷ್ಪಾಲಂಕಾರ, ವಿದ್ಯುತ್ ದೀಪಾಲಂಕಾರ ಅತ್ಯಂತ ಶೋಭಾಯಮಾನ.
ಶಿರಸಿಗೆ ಶ್ರೀ ಮಾರಿಕಾಂಬಾ ದೇವಿಯ ಆಗಮನ ಒಂದು ವಿಚಿತ್ರಾದ ಸನ್ನಿವೇಶದಲ್ಲಿ ಆಯಿತೆನ್ನಬಹುದು. ಅದಕ್ಕೂ ಮೊದಲು ಶಿರಸಿಯಲ್ಲಿ ಮರ್ಕಿದುರ್ಗಿ ದೇವಿಯರ ಗುಡಿಗಳಿದ್ದವು. ಶೃಧ್ದಾ ಭಕ್ತಿಯಿಂದ ಜನ ಅವುಗಳಿಗೆ ಅಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆ ಸಂದರ್ಭದಲ್ಲಿ ಶಿರಸಿಯಲ್ಲಿ ದಿವ್ಯ ಶಕ್ತಿಯೊಂದರ ಅವತಾರವಾಯಿತೆಂದು ಹೇಳಬಹುದು. ಆದಿಶಕ್ತಿ ಮಹಾತಾಯಿ ಶ್ರೀ ಮಾರಿಕಾಂಬೆಯಾಗಿ, ಭಕ್ತ ಜನರ ಕಣ್ತುಂಬಿ ನಿಂತ ಮಾರೆಮ್ಮ- ಶಿರಸಿಯಲ್ಲಿ ಶ್ರೀ ದೇವಿಯ ಸ್ಥಾಪನೆ ಕುರಿತು ಇರುವ ಹಳೆಯು ದಾಖಲೆಗಳಲ್ಲಿ ಬಸವನು ಪಡಲಿಗೆ ಹೊತ್ತು ತಿರುಗುವಾಗ ಗುತ್ತಿ ಸೀಮೆಯವರು ಆತಂಕ ವ್ಯಕ್ತ ಪಡಿಸಿದರು. ಅದೇ ಕಾಲಕ್ಕೆ ಊರ ಒಂದು ಕೆರೆಯಲ್ಲಿ ದೇವಿಯ ವಿಗ್ರಹ ಸಿಕ್ಕಿತೆಂದೂ ಇದನ್ನು ಇಲ್ಲಿ ಗ್ರಾಮದೇವತೆಯಾಗಿ ಪ್ರತಿಷ್ಠಾಪಿಸುವ ಕುರಿತು ನಂದಿಕೆಶ್ವರ ಮಠದ ಸ್ವಾಮಿಗಳ ಮುಖಾಂತರ ಸೋದೆಯ ಅರಸು ಸದಾಶಿವರಾಯರಲ್ಲಿ ಗ್ರಾಮದ ಸಮಸ್ತರು ಸೇರಿ ವಿನಂತಿಸಿಕೊಳ್ಳಲು ಶಿರಸಿಯಲ್ಲಿ ನಾಗರಗುತ್ತಿ ಸ್ಥಳ ದುರ್ಗಿಸ್ಮಶಾನದ ಭಾಗದಲ್ಲಿ ಪ್ರತಿಷ್ಠೆ ಮಾಡಿಸಲು ದೈವದವರಿಗೆ ಅಪ್ಪಣೆ ದೊರಕಿತು, ಇತ್ಯಾದಿ ಹೇಳಿಕೆ ಇದೆ. ಊರಿನ ಅನೇಕ ಪ್ರಮುಖ ಜನರು ಪ್ರತಿಷ್ಠಾ ಕಾಲಕ್ಕೆ ದೇಣಿಗೆಯಾಗಿ ಕೊಟ್ಟಿದ್ದರಿಂದ ಅವರೆಲ್ಲ ಆನುವಂಶಿಕವಾಗಿ ಈಗಲೂ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಈ ಸಮಯ ಮೊಟ್ಟ ಮೊದಲನೆಯ ಜಾತ್ರೆಯು ಪ್ರತಿಷ್ಠೆಗೆ ಮೊದಲು ಬಿಡಕಿ ಬೈಲಿನ ಗದ್ದುಗೆಯಲ್ಲಿ ಆಯಿತು.
ತಾವು ದೇವರ ಸಂತತಿಯವರೆಂದು ಹೇಳಿಕೊಳ್ಳುವ ಅಸಾದಿಯವರು ಇಂದಿಗೂ ದೇವಾಲಯದಿಂದ ಪರಮೋಚ್ಚ ಗೌರವಾದರ ಪಡೆಯುವವರಾಗಿದ್ದಾರೆ. ದೇವಿಯ ಸ್ಥಾಪನೆಯಲ್ಲಿ ಅವರ ಪಾತ್ರ ಹಿರಿದು. ಅದಾದಿಯೆಂಬುದು ಒಂದು ಜನಾಂಗದ ಹೆಸರು. ಅವರು ದೇವಿಯ ಪಡಲಿಗೆಯನ್ನು (ಹರಿವಾಣ ಬುಟ್ಟಿ) ಹೊತ್ತು ಆಗಾಗ ಗುತ್ತಿ ಸೀಮೆಗೆ ಹೋಗುವುದು ವಾಡಿಕೆ. ಗುತ್ತಿಯ ಅಮ್ಮನವರ ಸೀಮೆಗೂ ಶಿರಸಿಗೂ ಇಂತಹ ದೈವಿಕ ಹಾಗೂ ವ್ಯವಹಾರಿಕ ಸಂಬಂಧಗಳಿದ್ದುದು ಕಂಡು ಬರುವುದು. ಅಸಾದಿಗಳಿಗೆ ಮಾರೆಮ್ಮ ಆರಾಧ್ಯ ದೈವ. ಅವರು ಹೇಳುವ ಮಾರಿಕಾಂಬೆಯ ಹಾಡುಗಳು ಸುಪ್ರಸಿದ್ದ.ನಮ್ಮ ಜಿಲ್ಲೆಯ ಮಾರಿಕಾಂಬೆಯಂತೆ ಹಲವು ಹಳ್ಳಿಗಳ ‘ಅಮ್ಮಾ’ ದೇವತೆಗಳು ಹಲವು ಹೆಸರುಗಳಿಂದ ಪೂಜೆಗೊಳ್ಳುತ್ತಿದ್ದು ಅವು ಮಾರಿಕಾಂಬೆಯ ಅಕ್ಕತಂಗಿಯರೆಂದು ಭಾವಿಸಲಾಗುತ್ತಿದೆ. ಹೀಗೆ ಆದಿ ಶಕ್ತಿಗೆ ಅನೇಕ ರೂಪ. ಸಾವಿರ ಸಾವಿರ ಹೆಸರುಗಳು. ಯಾರು ಯಾರು ಯಾವ ಯಾವ ರೀತಿಯಲ್ಲಿ ಪೂಜಿಸಿದರೂ ಅವರ ಭಕ್ತಿ ಆರಾಧನೆಗಳು ಆ ಮಹಾಶಕ್ತಿಗೆ ಸಲ್ಲುತ್ತವೆ. “ಸತ್ಯವಂತೆ ಸತಿದೇವಿ ಶಿರಸಿಯ ಅಮ್ಮನ” ಕತೆ ಹಾಡಿ ತಿರುಗುವ ಅಸಾದಿಗಳು ಶಿರಸಿಯಲ್ಲಿ ದೇವಿ ಕಂಡು ಬಂದ ಬಗೆಯನ್ನು ಹೇಳುವುದು ಹೀಗೆ.
ಬಸವ ಎಂಬ ಅಸಾದಿ ತನ್ನ ಸಂಗಡಿಗರನ್ನು ಕರೆದುಕೊಂಡು ಪ್ರತಿ ವರ್ಷ ಚಂದ್ರಗುತ್ತಿಗೆ ತೇರಿಗೆ ಹೋಗುತ್ತಿದ್ದ. ಮರ್ಕಿ-ದುರ್ಗಿಯರ ಪರಮ ಭಕ್ತನಾದ ಆತ ಒಂದು ಸಲ ಹೀಗೆ ಪಡಲಿಗೆಯನ್ನು ಹೊತ್ತು ಗುತ್ತಿ ಸೀಮೆಯಲ್ಲಿ ಹೋಗುತ್ತಿದ್ದಾಗ ಅಲ್ಲಿಯ ಜನ ಅವನನ್ನು ತಡೆದು ತೊಂದರೆಯನ್ನುಂಟು ಮಾಡಿದರು. ಇದರಿಂದ ಬಸವನ ಮನಸ್ಸಿಗೆ ತುಂಬಾ ನೋವಾಯಿತಲ್ಲದೇ ಆತನ ಸೀಮೆಯ ಜನ ಕೂಡ ಇದು ತಮಗಾದ ಅವಮಾನವೆಂದೇ ಭಾವಿಸಿ ಕೋಪಗೊಂಡರು. ಅಸಾದಿ ಬಸವ ಮರು ವರುಷ ಗುತ್ತಿ ಜಾತ್ರೆಗೆ ಹೋಗದೇ ಶಿರಸಿಯಲ್ಲಿಯೇ ದೇವರ ಪ್ರಾರ್ಥನೆ ಮಾಡಿಕೊಂಡಿರಲು ಒಂದು ರಾತ್ರಿ ಅವನಿಗೊಂದು ಕನಸು ಬಿತ್ತು. ಕನಸಿನಲ್ಲಿ ಒಂದು ಹೆಣ್ಣು ಧ್ವನಿ ‘ನಾನು ದ್ಯಾಮವ್ವ, ಇಲ್ಲಿ ನಿಮ್ಮೂರ ಕೆರೆಯೊಳಗೆ ಇದ್ದೇನೆ. ತೆಗೆಯಿರಿ” ಎಂದಂತಾಯಿತು. ಭಾವುಕ ಬಸವ ಇದರಿಂದ ಪುಳಕಿತನಾದ. ತುಂಬಾ ಹರ್ಷಗೊಂಡು ಘಟನೆಯನ್ನು ಊರ ಗೌಡರಿಗೆ ತಿಳಿಸಿದ. ಗೌಡರರಿಗೂ ಅಚ್ಚರಿ. ಕುತೂಹಲದಿಂದ ಅವರೆಲ್ಲ ಸೇರಿ ಪರೀಕ್ಷೆಗೆ ನಿಂತರು. ಬಸವನಿಗೋ ಅದು ಸತ್ವ ಪರೀಕ್ಷೆ. ಕೆರೆಯ ದಂಡೆಯ ಮೇಲೆ ಊರಿಗೆ ಊರೇ ಸೇರಿತು. ಕೆರೆಯ ಸುತ್ತ ಮೂರು ಸುತ್ತು ತಿರುಗಿ ಪ್ರಾರ್ಥಿಸಿ “ತಾಯಿ ಎಲ್ಲಿದ್ದರೂ ನಿನ್ನ ಕುರುಹು ತೋರು” ಎಂದು ಆರತಿ ಎತ್ತ್ತುತ್ತಿರುವಾಗ ಕೆರೆಯಲ್ಲಿ ಎದುರುಗಡೆ ಏನೋ ತೇಲುತ್ತಿದ್ದುದು ಕಂಡು ಬಂದಿತು. ಹೋಗಿ ನೋಡಲಾಗಿ ಅದೊಂದು ಪೆಟ್ಟಿಗೆ. ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದರಲ್ಲಿ ದೇವಿಯ ವಿಗ್ರಹದ ಭಾಗಗಳಿರುವುದು ಕಾಣಿಸಿತು. ವಿಗ್ರಹದ ಭಾಗಗಳನ್ನು ಒಂದೆಡೆಗೆ ತಂದು ಜೋಡಿಸಲಾಯಿತು. ಅದು ದೇವಿಯ ಒಂದು ಸುಂದರವಾದ ಮೂರ್ತಿ. ಈ ಪೆಟ್ಟಿಗೆ ಹಾನಗಲ್ಲಿನಿಂದ ಬಂದಿತೆAಬುದರ ಬಗೆಗೆ ಐತಿಹ್ಯಗಳಿವೆ. ಹಾನಗಲ್ಲಿನಲ್ಲಿ ಅಂತಹಪ್ರಭಾವಿಯಾದ ಶಕ್ತಿ ಪೀಠವಿದ್ದುದರ ಕುರಿತು ಮಹಾಭಾರತದಲ್ಲಿಯು ಉಲ್ಲೇಖ ಬರುತ್ತದೆ.
ಶಿರಸಿಯಲ್ಲಿ ಶ್ರೀ ದೇವಿಯ ವಿಗ್ರಹ ಕಂಡು ಬಂದೊಡನೆಯೇ ಶಿರಸಿಯ ಜನ ಆನಂದದಿAದ ಕುಣಿದಾಡಿದರು. ತಮ್ಮೂರಿಗೆ ದೈವೀಕೃಪೆಯಾಯಿತೆಂದು ಭಾವಿಸಿ ಸಂಭ್ರಮಿಸಿದರು. ಚಂದ್ರಗುತ್ತಿ ಸೀಮೆಯಲ್ಲಿ ಬಸವನಿಗಾದ ಅವಮಾನ ತನ್ಮೂಲಕ ತಮಗೆಲ್ಲರಿಗೆ ಆದ ನೋವಿನ ಸಂದರ್ಭದಲ್ಲಿ ಈ ಬಗೆಯಾಗಿ ದೇವಿಯೇ ತಮ್ಮೂರಿಗೆ ಬಂದು ಅವತರಿಸಿದಳೆಂದು ಹಿರಿ ಹಿರಿ ಹಿಗ್ಗಿದರು. ಅದುವರೆಗೂ ಶಿರಸಿಯಲ್ಲಿ ದೇವಿ ಗುಡಿ ಎಂದರೇ ಮರ್ಕಿ-ದುರ್ಗಿ ದೇವಿಯರ ಗುಡಿ. ಜಾತ್ರೆಎಂದರೆ ಮರ್ಕಿ-ದುರ್ಗಿ ದೇವಿಯ ಜಾತ್ರೆ. ಈ ಶಕ್ತಿ ದೇವತೆಗಳ ಜೊತೆಗೆ ಹೊಸದಾಗಿ ಕಂಡು ಬಂದ ದೇವಿಯ ವಿಗ್ರಹವನ್ನು ಊರಲ್ಲಿ ಸಂಭ್ರಮದಿAದ ಪ್ರತಿಷ್ಠಾಪಿಸುವ ತವಕ ಊರ ಜನರಿಗೆ. ಆ ಶುಭ ಸಮಯ ಸನ್ನಿಹಿತವಾಯಿತು.
ಕೆಲ ಕಾಲದ ನಂತರ ಮಾರೆಮ್ಮನಿಗೆ ಒಂದು ಸಮಪರ್ಕವಾದ ಸ್ಥಳ ದೊರಕಿಸಬೇಕೆಂದು ಸಮಾಜದ ಪ್ರಮುಖರು ಅವರ ಗುರು ಮಠದ ಅಪ್ಪಣೆಯಂತೆ ಶಿರಸಿಯ ದುರ್ಗದ(ಕೋಟೆಯ) ಪಕ್ಕದಲ್ಲಿ ಸ್ಮಶಾನ ಭೂಮಿಯ ಎದುರು ನಾಗರಗುತ್ತಿನ ಬದಿಯಲ್ಲಿ ಪ್ರಶಸ್ತ ಜಾಗದಲ್ಲಿ ಶ್ರೀ ದೇವಿಯನ್ನು ಕೂಡ್ರಿಸಿ , ಸ್ವಾದಿಯಲ್ಲಿ ಆಗ ಈ ಊರ್ಜಿತ ಮಠವಾಗಿದ್ದ ನಂದಿಕೆಶ್ವರ ಮಠದ ಸ್ವಾಮಿಗಳ ಮುಖಾಂತರ ಶಿರಸಿಯ ವಿವಿಧ ಸಮಾಜಗಳ ಪ್ರಮುಖ ಗೌಡರು, ಗೊಲ್ಲಗೇರಿ , ಬಚಗಾಂವಿ,ಯಸಳೆ, ಲಿಂಗದ ಕೋಣಗಳ ಹಿರಿಯರು , ಶಿರಸಿ ಬಿಡಕಿ ಬೈಲು, ಮೈದುರ್ಗಿ ಮಠದ ದುರದುಂಡಿ ಸ್ವಾಮಿಗಳು ಹಿರಿಯರೆಲ್ಲ ಸೇರಿ ಸ್ವಾದಿಯ ಮಹಾ ಸಂಸ್ಥಾನಕ್ಕೆ ನಿರೂಪ ಕಳಿಸಿ ಅರಸು ಸದಾಶಿವರಾಯರಿಂದ ಅಪ್ಪಣೆ ಪಡೆದುಕೊಂಡರು.
ಶ್ರೀ ಶಾಲಿವಾಹನ ಶಕೆ 1611 ಶುಕ್ಲ ಸಂವತ್ಸರದ ವೈಶಾಖ ಶುಧ್ದ ಅಷ್ಟಮಿ ಮಂಗಳವಾರ(ಕ್ರಿಶ.1689) ಈಗಿರುವ ಮಾರಿಕಾಂಬಾ ದೇವಾಲಯದ ಸ್ಥಳದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಉತ್ಸವದ ಸವಿ ನೆನಪಿಗಾಗಿಯೇ ಈಗಲೂ ವೈಶಾಖ ಶುಧ್ದ ಅಷ್ಟಮಿಯನ್ನು ದೇವಾಲಯದಲ್ಲಿ “ದೇವಿಯ ಜಯಂತಿ” ಉತ್ಸವವನ್ನಾಗಿ ಆಚರಿಸಲಾಗುತ್ತದೆ. ದೇವಿಯ ಪ್ರತಿಷ್ಠೇಗೆ ಮೊದಲು ಜಾತ್ರೆ ನಡೆಯಿತು.
ಶಿರಸಿಯಲ್ಲಿ ಸ್ಥಾಪನೆಗೊಂಡ ಶ್ರೀ ದೇವಿಯ ಮಹಾತ್ಮೆ ದಿನದಿಂದ ದಿನಕ್ಕೆ ಜನರಲ್ಲಿ ಹರಡಗೊಡಗಿತು. ಭಕ್ತರ ಇಷ್ಟಾರ್ಥಗಳು, ಪ್ರಾರ್ಥನೆಗಳು ಸಿಧ್ದಿಸತೊಡಗಿದವು. ಇದೊಂದು ಅತಿ ಜಾಗೃತ ಸ್ಥಳವೆಂದೂ, ಸಿಧ್ದಿ ಸ್ಥಾನವೆಂದೂ ಕರ್ಣೋಪಕರ್ಣವಾಗಿ ಮಾರಿ ದೇವಿಯ ಖ್ಯಾತಿ ಹರಡಗೊಡಗಿತು. ಶ್ರೀ ದೇವಿಯ ಸನ್ನಿಧಿಯಲ್ಲಿ ವಾರ್ಷಿಕವಾಗಿ ವರ್ಧಂತಿ ಉತ್ಸವ, ಶ್ರಾವಣ ಮಾಸ, ನವರಾತ್ರಿ ಉತ್ಸವ, ಕಾರ್ತಿಕ ಉತ್ಸವ, ಆಯಾ ಸಂದರ್ಭಕ್ಕನುಗುಣವಾಗಿ ಇತರೇ ವಿಶೇಷ ಪೂಜೆಗಳು ನೆರವೇರುತ್ತದೆ.