Screen Reader Access                 A-  A  A+ 
ಶ್ರೀ ಮತ್ತಿ ತಾಳೇಶ್ವರ ದೇವಸ್ಥಾನ, ಕಲ್ಲುವೀರನಹಳ್ಳಿ, ಮಂಡ್ಯ - 571430, ಮಂಡ್ಯ .
Sri Matti Thaleshwara Temple, Kalluveeranahalli, Mandya - 571430, Mandya District [TM000113]
×
Temple History

ಇತಿಹಾಸ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಕಸಬಾ ಹೋಬಳಿ ಕಲ್ಲುವೀರನಹಳ್ಳಿ ಗ್ರಾಮದ ಶ್ರೀಮತ್ತಿತಾಳೇಶ್ವರ ದೇವಸ್ಥಾನವು ಪ್ರಸಿದ್ದ ಯಾತ್ರಾ ಸ್ಥಳವಾಗಿರುತ್ತದೆ.ಈ ದೇವಸ್ಥಾನವಿರುವ ಜಾಗದಲ್ಲಿ ಈ ಹಿಂದೆ ಋಷಿಮುನಿಗಳು ತಪಸ್ಸು ಮಾಡಿ ಇದೇ ಜಾಗದಲ್ಲಿಯೇ ಐಕ್ಯವಾಗಿ ಈ ಮುನಿಯ ಮೇಲೆ ಬೃಹದಾಕಾರದ ಹುತ್ತ ಬೆಳದಿರುವುದರಿಂದ ಈ ಹುತ್ತಕ್ಕೆ ಬಂದು ಹಸುವು ಹಾಲು ಕರೆಯುತ್ತಿದ್ದರಿಂದ ಗ್ರಾಮದ ಭಕ್ತಾಧಿಗಳು ಒಂದು ದಿನ ಹುತ್ತವನ್ನು ಅಗೆದು ನೋಡಿದಾಗ ಅದರಲ್ಲಿ ಒಂದು ಲಿಂಗವು ಮೂಡಿರುವುದು ಗೋಚರವಾಗಿರುತ್ತದೆ. ಈ ಹಿನ್ನಲೆಯಲ್ಲಿ ದೇವರು ಅಲ್ಲಿನ ಭಕ್ತಾಧಿಗಳ ಕನಸಿನಲ್ಲಿ ತಿಳಿಸಿರುವಂತೆ ಪ್ರತಿ ಗುರುವಾರ ಮತ್ತು ಭಾನುವಾರ ದೇವಸ್ಥಾನದ ಪಕ್ಕದ ಕೊಳದಲ್ಲಿ ಸ್ನಾನ ಮಾಡಿ ದೇವಸ್ಥಾನದಲ್ಲಿ ಅಡುಗೆ ಮಾಡಿ ಊಟ ಮಾಡಿದರೆ ರೋಗ ರುಜಿನಗಳು ವಾಸಿಯಾಗುತ್ತೆಂಬ ಪ್ರತೀತಿ ಇದ್ದು ಈ ದೇವರು ಬಹಳ ನಂಬಿಕೆಯುಳ್ಳ ಪುರಾಣ ಪ್ರಸಿದ್ದವಾಗಿದ್ದು ಈಗಲೂ...