ಶ್ರೀ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನ, ಬೆಳ್ಳಾರೆ, ದಕ್ಷಿಣ ಕನ್ನಡ - 574212, ದಕ್ಷಿಣ ಕನ್ನಡ .
Sri Ajipila Mahalingeshwara Temple, Bellare, Dakshina Kannada - 574212, Dakshina Kannada District [TM000129]
×
Temple History
ಸ್ಥಳ ಪುರಾಣ
ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಅಜಪಿಲ ಎಂಬ ಹೆಸರು ಬರಲು ಕಾರಣ 6 ಹಲಸಿನ ಮರ ಇದ್ದ ಸ್ಥಳ. (ಅಜ ಎಂದರೆ ಪಾಲು ಅಥವಾ ಭಾಗ. ಪಿಲ ಎಂದರೆ ಹಲಸಿನ ಮರ) 800 ವರ್ಷಗಳ ಹಿಂದೆ ಬಲ್ಲಾಳ ಅರಸರ ಈ ದೇವಸ್ಥಾನವನ್ನು ಆಳುತ್ತಿದ್ದರು. ಶ್ರೀ ದೇವಾಲಯದಲ್ಲಿ ಗಣಪತಿ, ಶಾಸ್ತಾರ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾಚವ ಪನೆ ಮಾಡಲಾಗಿದೆ.
ಅಜಪಿಲ ದೇವಾಲಯವು ಸುಂದರವಾಗಿ ನಿರ್ಮಿತವಾದ ಗರ್ಭಗುಡಿ, ಪ್ರಸಾದ ಮಂಟಪ, ಕಾಂಕ್ರೀಟ್ ನೆಲಹಾಸಿನ ವಿಶಾಲ ಒಳಾಂಗಣ, ನಾಲ್ಕು ದಿಕ್ಕುಗಳಲ್ಲಿ ಆವರಿಸಿದ ಸುತ್ತುಪೌಳಿ/ಪ್ರಾಕಾರ, ಶ್ರೀ ಗಣಪತಿ ಮತ್ತು ಶ್ರೀ ಶಾಸ್ತಾರ ಗುಡಿಗಳು ಪೌಳಿಯ ಸುತ್ತ ರಾಜಾಂಗಣ, ಮುಂಭಾಗದಲ್ಲಿ ಧ್ವಜಸ್ಥಂಭ, ವಸಂತ ಮಂಟಪ, ಆಗ್ನೇಯ ದಿಕ್ಕಿಗೆ ಅಶ್ವತ್ಥ ಕಟ್ಟೆ ಮತ್ತು ಶ್ರೀ ಮೂಕಾಂಬಿಕ...ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಅಜಪಿಲ ಎಂಬ ಹೆಸರು ಬರಲು ಕಾರಣ 6 ಹಲಸಿನ ಮರ ಇದ್ದ ಸ್ಥಳ. (ಅಜ ಎಂದರೆ ಪಾಲು ಅಥವಾ ಭಾಗ. ಪಿಲ ಎಂದರೆ ಹಲಸಿನ ಮರ) 800 ವರ್ಷಗಳ ಹಿಂದೆ ಬಲ್ಲಾಳ ಅರಸರ ಈ ದೇವಸ್ಥಾನವನ್ನು ಆಳುತ್ತಿದ್ದರು. ಶ್ರೀ ದೇವಾಲಯದಲ್ಲಿ ಗಣಪತಿ, ಶಾಸ್ತಾರ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾಚವ ಪನೆ ಮಾಡಲಾಗಿದೆ.
ಅಜಪಿಲ ದೇವಾಲಯವು ಸುಂದರವಾಗಿ ನಿರ್ಮಿತವಾದ ಗರ್ಭಗುಡಿ, ಪ್ರಸಾದ ಮಂಟಪ, ಕಾಂಕ್ರೀಟ್ ನೆಲಹಾಸಿನ ವಿಶಾಲ ಒಳಾಂಗಣ, ನಾಲ್ಕು ದಿಕ್ಕುಗಳಲ್ಲಿ ಆವರಿಸಿದ ಸುತ್ತುಪೌಳಿ/ಪ್ರಾಕಾರ, ಶ್ರೀ ಗಣಪತಿ ಮತ್ತು ಶ್ರೀ ಶಾಸ್ತಾರ ಗುಡಿಗಳು ಪೌಳಿಯ ಸುತ್ತ ರಾಜಾಂಗಣ, ಮುಂಭಾಗದಲ್ಲಿ ಧ್ವಜಸ್ಥಂಭ, ವಸಂತ ಮಂಟಪ, ಆಗ್ನೇಯ ದಿಕ್ಕಿಗೆ ಅಶ್ವತ್ಥ ಕಟ್ಟೆ ಮತ್ತು ಶ್ರೀ ಮೂಕಾಂಬಿಕ ಗುಳಿಗನ ಕಟ್ಟೆ, ಈಶಾನ್ಯದಲ್ಲಿ ಜಲಸಮೃದ್ಧ ಪುಷ್ಕರಣಿ ಸುಸಜ್ಜಿತ ಸಭಾಭವನ ಮತ್ತು ಉತ್ಸವಾದಿಗಳಿಗೆ ಅನುಕೂಲವಾದ ಹೊರಂಗಣವಿದೆ ಈ ದೇವಾಲಯವು ಗ್ರಾಮದ ಮಧ್ಯೆ ಸುತ್ತಲೂ ಕೃಷಿ ಭೂಮಿಯನ್ನು ಆವರಿಸಿಕೊಂಡಿರುತ್ತದೆ ಮತ್ತು ದೇವಾಲಯದ ಮೂಲ ಮೂರ್ತಿ ಶಿವಲಿಂಗ ಇದು ಋಷಿವರ್ಯರಿಂದ ಪ್ರತಿಷ್ಠೆಯಾಗಿರುತ್ತದೆ ಎಂಬ ಪ್ರತೀತಿ ಇದೆ.
ಈ ದೇವಾಲಯದಲ್ಲಿ ಭಕ್ತರಿಗೆ ಸರ್ವಾಭೀಷ್ಠಫಲಗಳು ಲಭಿಸುತ್ತದೆ. ಇಲ್ಲಿ ಶ್ರೀ ದೇವರಿಗೆ ಅಭಿಷೇಕವು ಪ್ರಸಿದ್ಧಿಯಾಗಿದೆ. ದೇವಾಲಯದಲ್ಲಿ ವಿಶೇಷ ಪೂಜೆ, ಶತರುದ್ರ, ಸೋಮವಾರ ಪೂಜೆ, ಏಕದಶರುದ್ರ, ಸರ್ವಸೇವೆಗಳು ನಡೆಯುತ್ತವೆ.
ದೇವಾಲಯದಲ್ಲಿ ವರ್ಷದ ಧನುರ್ ಮಾಸದಲ್ಲಿ ಧನುಪೂಜೆ, ವರ್ಷಂಪ್ರತಿ ಶಿವರಾತ್ರಿ ಮತ್ತು ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಇದು ಗ್ರಾಮಾಭಿವೃದ್ಧಿಗೆ ಕಾರಣವಾಗಿರುತ್ತದೆ.
ಮಹಾಲಿಂಗೇಶ್ವರ, ಗಣಪತಿ ಮತ್ತು ಶಾಸ್ತಾರ ದೇವರಿಗೆ ನಿತ್ಯ ತ್ರಿಕಾಲ ಪೂಜೆ ಹಾಗೂ ಸಾಂಪ್ರದಾಯಿಕ ಪೂಜೆ ಜರಗುತ್ತದೆ. ಈ ಎಲ್ಲಾ ವಿಶೇಷತೆಗಳು ನಮ್ಮ ದೇವಾಲಯದಲ್ಲಿ ಕಾಣಸಿಗುತ್ತದೆ.