Screen Reader Access                 A-  A  A+ 
ಶ್ರೀ ರಾಮ ದೇವಸ್ಥಾನ, ಚುಂಚನಕಟ್ಟೆ, ಮೈಸೂರು - 571617, ಮೈಸೂರು .
Sri Rama Temple, Chunchankatte, Mysuru - 571617, Mysuru District [TM000144]
×
Temple History

ಇತಿಹಾಸ

ಈ ಹಿಂದೆ ಈ ಸ್ಥಳವು ದಟ್ಟವಾದ ದೊಡ್ಡ ಕಾಡಿನ ಪ್ರದೇಶವಾಗಿತ್ತು. ದಂಡಕಾರಣ್ಯವೆಂದು ಹೇಳುತ್ತಾರೆ. ಈ ಜಾಗಕ್ಕೆ ತೃಣಬಿಂಧು ಮಹರ್ಷಿಗಳು ಬಂದಾಗ ಅವರಿಗೆ ಇಲ್ಲಿ ತಪಸ್ಸು ಮಾಡುವ ಇಚ್ಚೆಯಾಗುತ್ತದೆ. ಆದರೆ ಅವರಿಗೆ ಇಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಕಾವೇರಿಯು ಕಾಣುವುದಿಲ್ಲ. ಸ್ನಾನ, ಜಪ, ಅನ್ನಿಕ ಗಳನ್ನು ನೆರೆವೇರಿಸಿಕೊಳ್ಳಲಿಕ್ಕೆ ಅವರಿಗೆ ನದಿ ತೀರ ಬೇಕಾಗಿತ್ತು. ಅದಕ್ಕಾಗಿ ಶ್ರೀಮನ್ ನಾರಾಯಣನನ್ನು ಕುರಿತು ತಪಸ್ಸು ಮಾಡುತ್ತಾರೆ. ಸಾವಿರಾರು ವರ್ಷಗಳ ಕಾಲ ಘೋರವಾದ ತಪ್ಪಸ್ಸಿನ ಫಲವಾಗಿ ಅವರಿಗೆ ಸ್ವಾಮಿ ಶ್ರೀಮನ್ ನಾರಾಯಣರು ಪ್ರತ್ಯೆಕ್ಷ ವಾಗುತ್ತಾರೆ. ಋಷಿಮುನಿಗಳ ಕೋರಿಕೆಯಂತೆ ಗುಪ್ತಗಾಮಿನಿ (ಯಾರಿಗು ಕಾಣದ ನದಿ ತೀರ) ಯನ್ನು ತೋರಿಸುತ್ತಾರೆ. ಹಾಗೆಯೇ ಋಷಿಮುನಿಗಳನ್ನು ಕುರಿತು ಈ ರೀತಿಯಾಗಿ ಹೇಳುತ್ತಾರೆ. ತ್ರೇತಾಯುಗದಲ್ಲಿ ರಾಮನ ಅವತಾರ ಎತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇತ್ಯಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಹೇಳಿ...