Screen Reader Access                 A-  A  A+ 
ಶ್ರೀ ಮರುಳ ಸಿದ್ದೇಶ್ವರಸ್ವಾಮಿ ದೇವಸ್ಥಾನ, ಉಜ್ಜಯಿನಿ, ಬಳ್ಳಾರಿ - 583136, ಬಳ್ಳಾರಿ .
Sri Marula Siddeshwara Swamy Temple, Ujjaini, Ballary - 583136, Ballari District [TM000156]
×
Temple History

ಇತಿಹಾಸ

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ವೀರಶೈವ ಧರ್ಮವು ಜಾತಿ ಪದ್ಧತಿಯನ್ನು ಖಂಡಿಸುತ್ತಲೇ ಸತ್ವಯುತವಾದ ಮಾನವನ ಆಧ್ಯಾತ್ಮಿಕ ಸಾಧನೆಗಾಗಿ ಅನೇಕ ಆಚರಣೆಗಳನ್ನು ವಿಧಿವತ್ತಾಗಿ ನಿರೂಪಿಸಿತು. ವೀರಶೈವ ಧರ್ಮದ ಪ್ರಚಾರ ಕಾರ್ಯವು ಈ ಸರಳ ಆಚರಣೆಗಳ ಮೂಲಕ ನಡೆದು ಭಾರತದ ಹಲ ಕೆಲವು ಪ್ರದೇಶವನ್ನು ವ್ಯಾಪಿಸಿತು. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಉಜ್ಜಯಿನಿ, ಚಿಕ್ಕಮಂಗಳೂರಿನ ಬಾಳೆಹೊನ್ನೂರು, ಆಂಧ್ರಪ್ರದೇಶದ ಶ್ರೀಶೈಲ, ಉತ್ತರ ಪ್ರದೇಶದ ಕೇದಾರ ಮತ್ತು ಕಾಶೀ ಕ್ಷೇತ್ರಗಳಲ್ಲಿ ತನ್ನ ಖಚಿತತೆಯ ಅಸ್ತಿಭಾರವನ್ನು ನೆಲೆಗೊಳಿಸಿಕೊಂಡಿತು. ನಿತ್ಯವೂ ವೀರಶೈವ ಧರ್ಮದ ವಿಧಿ-ವಿಧಾನಗಳನ್ನು ಪರಿಪಾಲಿಸುತ್ತಾ ಜನರ ಅಂತರಂಗ ಮತ್ತು ಬಹಿರಂಗದ ಶುದ್ಧಿಗೆ ಬೋಧಪ್ರದವಾಗಿ ಕೊಡುಗೆ ನೀಡಿರುವ ಶ್ರೀಕ್ಷೇತ್ರ ಉಜ್ಜಯಿನಿ ಐತಿಹಾಸಿಕ ಕೇಂದ್ರ. ವಿಜಯನಗರದ ಅರಸ ಕ್ರಷ್ಣರಾಯರಿಗೆ (ಕೃಷ್ಣದೇವರಾಯ) (ಕರ್ನಾಟಕದ ಕೈಫಿಯತ್ತುಗಳು) ಪಟ್ಟಕಟ್ಟಿದ ನಂತರ ರಾಜ್ಯದಲ್ಲಿನ ಪಾಳೆಗಾರರನ್ನು ಕರೆಯಿಸಿ ಸನ್ಮಾನ ಮಾಡುವಾಗ ಕುಮಾರರಾಮನ ವಂಶಸ್ಥನಾದ ಬೊಮ್ಮಂತರಾಜ...