Screen Reader Access     A-AA+
ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಾಲಯ, 11ನೇ ಅಡ್ಡರಸ್ತೆ, ಮಲ್ಲೇಶ್ವರಂ - 560003, ಬೆಂಗಳೂರು .
Sri Venugopala Krishna Swamy Temple, 11th Cross Road, Malleshwaram - 560003, Bengaluru Urban District [TM000017]
×
Temple History

ಇತಿಹಾಸ

ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಾಲಯವು, ಉದ್ಯಾನ ನಗರಿಯಾದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿದೆ. 1902ರಲ್ಲಿ ಬೆಂಗಳೂರು ನಗರಾಭಿವೃದ್ಧಿಯಾಗಲು ಈ ದೇವಾಲಯವು ಅದ್ಭುತವಾದ ಸ್ಮಾರಕವಾಗಿ ಬೆಳಗುತ್ತದೆ. ಮಲ್ಲೇಶ್ವರದ ಮಧ್ಯ ಭಾಗದಲ್ಲಿರುವುದು ವಿಶೇಷವೇ ಸರಿ. ಮಲ್ಲೇಶ್ವರ ಪ್ರದೇಶದ ರಚನೆಯಾಗುವ ಕಾಲದಲ್ಲಿ ಅಂದರೆ 20ನೇ ಶತಮಾನದಲ್ಲಿ ವೈದಿಕ ಪಂಡಿತರು, ಗೌರವಾನ್ವಿತ ಮಲ್ಲೇಶ್ವರದ ನಿವಾಸಿಗಳು ಮತ್ತು ಭಕ್ತಾಧಿಗಳಿಂದ ಈ ದೇವಸ್ಥಾನವು ಸ್ಥಾಪಿಸಲ್ಪಟ್ಟಿದೆ. ಈ ದೇವಾಲಯವು ಶ್ರೀ ಪಾಂಚರಾತ್ರಾಗಮದ ಮತ್ತು ವೈಧಿಕ ವಿಧಿ ವಿಧಾನಗಳಿಂದ ಪ್ರತಿಷ್ಠಾಪನೆಗೊಂಡಿದ್ದು, ಇಂದಿಗೂ ಇದೇ ಸಂಪ್ರದಾಯಕ್ಕನುಗುಣವಾಗಿ ಪೂಜಾದಿ ಕೈಂಕರ್ಯಗಳು ನೆರವೇರುತ್ತದೆ. ಈ ದೇವಾಲಯವು ದಿನೇ ದಿನೇ ಖ್ಯಾತಿಯನ್ನು ಪಡೆಯುತ್ತಿದ್ದು, ದಶಕಗಳಿಂದ ಅಸಂಖ್ಯಾತ ಭಕ್ತರ ಆಕರ್ಷಣೀಯ ಸ್ಥಳವಾಗಿರುತ್ತದೆ. ದೇವಾಲಯದಲ್ಲಿ ನಡೆಯುವ ದೈನಂದಿನ ಸೇವೆಗಳು ಮತ್ತು ಸಂವತ್ಸರಕ್ಕೊಮ್ಮೆ ನಡೆಯುವ ವೈಭವದ ಉತ್ಸವಾಧಿಗಳೇ ಇದರ ವಿಶೇಷ. ಮಲ್ಲೇಶ್ವರದ ಕಿರು ಪರಿಚಯವನ್ನು...

ಸ್ಥಳ ಪುರಾಣ

ಶ್ರೀ ಶ್ರೀ ನಾಲ್ವಡಿಕೃಷ್ಣರಾಜ ಒಡೆಯರ್-4 ರವರ ಸಿಂಹಾಸನಾರೋಹಣದ ಜ್ಞಾಪಕಾರ್ಥಕವಾಗಿ ಶ್ರೀ ಮೂರ್ತಿಗಳನ್ನು ಮಲ್ಲೇಶ್ವರಂ ಕ್ಷೇತ್ರದ 1902ನೇ ಇಸವಿಯಲ್ಲಿ ಸಿಂಹ ಮಾಸ ಉತ್ತರಬಾದ್ರ ನಕ್ಷತ್ರದ ಶುಭದಿನದಂದು ಬಹುತೇಕ ವಿದ್ವಾಂಸರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು