Screen Reader Access                 A-  A  A+ 
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡ್ಕೂರು, Karkal - 576121, ಉಡುಪಿ .
Sri Durgaparameshwari Temple, Mundkuru, Udupi - 576121, Udupi District [TM000171]
×
Temple History

ಇತಿಹಾಸ

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಶಾಂಭವಿ ನದಿಯ ದಡದಲ್ಲಿ ಒಂದು ಸುಂದರವಾದ ದೇವಸ್ಥಾನವಿರುವ ಸ್ಥಳ .ಇದು ಕಾರ್ಕಳ ತಾಲೂಕಿನ ,ಉಡುಪಿ ಜಿಲ್ಲೆಯಲ್ಲಿದೆ ಮುಂಡ್ಕೂರು ದೇವಸ್ಥಾನವು ಶ್ರೀ ದುರ್ಗಾಪರಮೇಶ್ವರಿಯ ದೇವಸ್ಥಾನವಾಗಿದ್ದು ಇದಕ್ಕೆ 1300 ವರ್ಷಗಳಷ್ಟು ಇತಿಹಾಸವಿದೆ . ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿಯು ಮಹಿಷಮರ್ಧಿನಿಯ ರೂಪದಲ್ಲಿದ್ದು ತ್ರಿಶೂಲಧಾರಿಯಾಗಿ ಮಹಿಷನನ್ನು ಮರ್ಧಿಸುವ ರೂಪದಲ್ಲಿದೆ. ಮುಂಡಾಸುರನನ್ನು ಶ್ರೀ ದುರ್ಗಾಪರಮೇಶ್ವರಿ ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡ್ಕೂರು ಎಂದು ಪ್ರಸಿದ್ಧಿ ಪಡೆದಿದೆ. ಸ್ಥಳ ಪುರಾಣ ಅರಿತ ಭಾರ್ಗವ ಋಷಿಗಳು ಸುರಥ ರಾಜನಿಂದ ಈ ಪುಣ್ಯ ಸ್ಥಳದಲ್ಲಿ ಮಹಿಷಮರ್ಧಿನಿ ದೇವಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರು. ಕಾಲಕ್ರಮೇಣ ಜೈನ ವಂಶದ ವೀರವರ್ಮ ಎಂಬ ರಾಜನ ಆಳ್ವಿಕೆಯ ಸಂಧರ್ಭದಲ್ಲಿ ಮಂಜಪ್ಪ ಅಜ್ರಿ ಎಂಬ ದುಷ್ಟ ಮಂತ್ರಿಯ ದುರುಪದೇಶ ರಾಜ್ಯಾದ್ಯಂತ ಅನ್ಯಾಯ, ಅಕ್ರಮ, ಅರಾಜಕತೆಗಳು ತಾಂಡವವಾಡ ತೊಡಗಿದವು. ಶಾಂಭವಿ...