ಶ್ರೀ ಲಕ್ಮೀನರಸಿಂಹ ಸ್ವಾಮಿ ದೇವಾಲಯ, 15ನೇ ಅಡ್ಡರಸ್ತೆ 1ನೇ ದೇವಾಲಯ ರಸ್ತೆ, ಮಲ್ಲೇಶ್ವರಂ - 560003, ಬೆಂಗಳೂರು .
Sri Lakshmi Narasimha Swamy Temple, 15th Cross 1st Temple, Malleshwaram - 560003, Bengaluru Urban District [TM000018]
×
Temple History
ಸಾಹಿತ್ಯದ ಹಿನ್ನೆಲೆ
ಮಲ್ಲೇಶ್ವರಂ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಪುರಾತನವಾದ ದೇವಾಲಯವಾಗಿದ್ದು, ಹಿಂದೆ 1669 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಸಹೋದರರಾದ ಎಕ್ಕೋಜಿರಾವ್ (ವೆಂಕೋಜಿರಾವ್) ರವರು ಬೆಂಗಳೂರಿಗೆ ಆಗಮಿಸಿದರು. ಅಂದು ಈ ಪ್ರದೇಶವನ್ನು ಮೇದರನಿಂಗನಹಳ್ಳಿ ಎಂದು ಕರೆಯಲಾಗುತ್ತಿತ್ತು. “ಶಾಶ್ವತಂ ಶಿವಂ ಅಚ್ಛುತಂ” ಎಂಬ ವೇದೋಕ್ತಿಯಂತೆ ಎಕ್ಕೋಜಿಯವರಿಗೆ ಇಲ್ಲಿ ಪರಮೇಶ್ವರ ಹಾಗೂ ನರಸಿಂಹ ಸ್ವಾಮಿಯ ಇರುವಿಕೆ ಗೋಚರವಾಯಿತು. ಆಗ ಈಶ್ವರನಿಗೂ ಅಚ್ಛುತನಿಗೂ ಒಂದೊಂದು ಮಂಟಪ ಕಟ್ಟಿಸಿ ಈ ಸ್ಥಳವನ್ನೆಲ್ಲಾ ದೇವಾಲಯಕ್ಕೆ ಮಾನ್ಯ ನೀಡಿ ತಮ್ಮ ಪ್ರಯಾಣ ಮುಂದುವರೆಸಿದರು. ಕಾಲಕ್ರಮೇಣ ಈಶ್ವರ ಗುಡಿಯು ಕಾಡುಮಲ್ಲೇಶ್ವರ ಗುಡಿ ಎಂದು ಅದರ ಪಕ್ಕದಲ್ಲಿದ್ದ ನರಸಿಂಹ ಗುಡಿಯು ಹಾಳು ಮಂಟಪವೆಂದು ಕರೆಯಲಾಗುತ್ತಿತ್ತು.
1982 ಫೆಬ್ರವರಿ 04 ಅಂದರೆ ಮಾಘ ಶುದ್ಧ ದಶಮಿ ದಿನದಂದು ದಿವಂಗತ ಶ್ರೀಮತಿ ಎಲ್ಲೂಬಾಯಿ, ದಿವಂಗತ ಶ್ರೀ...ಮಲ್ಲೇಶ್ವರಂ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಪುರಾತನವಾದ ದೇವಾಲಯವಾಗಿದ್ದು, ಹಿಂದೆ 1669 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಸಹೋದರರಾದ ಎಕ್ಕೋಜಿರಾವ್ (ವೆಂಕೋಜಿರಾವ್) ರವರು ಬೆಂಗಳೂರಿಗೆ ಆಗಮಿಸಿದರು. ಅಂದು ಈ ಪ್ರದೇಶವನ್ನು ಮೇದರನಿಂಗನಹಳ್ಳಿ ಎಂದು ಕರೆಯಲಾಗುತ್ತಿತ್ತು. “ಶಾಶ್ವತಂ ಶಿವಂ ಅಚ್ಛುತಂ” ಎಂಬ ವೇದೋಕ್ತಿಯಂತೆ ಎಕ್ಕೋಜಿಯವರಿಗೆ ಇಲ್ಲಿ ಪರಮೇಶ್ವರ ಹಾಗೂ ನರಸಿಂಹ ಸ್ವಾಮಿಯ ಇರುವಿಕೆ ಗೋಚರವಾಯಿತು. ಆಗ ಈಶ್ವರನಿಗೂ ಅಚ್ಛುತನಿಗೂ ಒಂದೊಂದು ಮಂಟಪ ಕಟ್ಟಿಸಿ ಈ ಸ್ಥಳವನ್ನೆಲ್ಲಾ ದೇವಾಲಯಕ್ಕೆ ಮಾನ್ಯ ನೀಡಿ ತಮ್ಮ ಪ್ರಯಾಣ ಮುಂದುವರೆಸಿದರು. ಕಾಲಕ್ರಮೇಣ ಈಶ್ವರ ಗುಡಿಯು ಕಾಡುಮಲ್ಲೇಶ್ವರ ಗುಡಿ ಎಂದು ಅದರ ಪಕ್ಕದಲ್ಲಿದ್ದ ನರಸಿಂಹ ಗುಡಿಯು ಹಾಳು ಮಂಟಪವೆಂದು ಕರೆಯಲಾಗುತ್ತಿತ್ತು.
1982 ಫೆಬ್ರವರಿ 04 ಅಂದರೆ ಮಾಘ ಶುದ್ಧ ದಶಮಿ ದಿನದಂದು ದಿವಂಗತ ಶ್ರೀಮತಿ ಎಲ್ಲೂಬಾಯಿ, ದಿವಂಗತ ಶ್ರೀ ಬಿ.ಆರ್.ಲಕ್ಷ್ಮಣ್ ರಾವ್ ಸಾವಂತ್, ಶ್ರೀಯುತ ಬಿ.ಕೆ.ಹರಿಪ್ರಸಾದ್ ರವರ ನೇತೃತ್ವದಲ್ಲಿ ಭಕ್ತಾಧಿಗಳು ಹಾಗೂ ಮುಜರಾಯಿ ಇಲಾಖೆಯ ಸಹಕಾರದೊಂದಿಗೆ ಹಾಲಿ ಇದ್ದ ಉದ್ಭವ ನರಸಿಂಹ ಸ್ವಾಮಿ ಮೂರ್ತಿಯ ಪಕ್ಕದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಸ್ಥಿರ ಬಿಂಭವನ್ನು ಆಗಮ ವಿದ್ವಾನ್ ಶ್ರೀ ಕೇಶವ ರಂಗನಾಥ ಭಟ್ಟರ್, ಆಗಮ ವಿದ್ವಾನ್ ಶ್ರೀ ಶ್ರೀಧರ ನಾರಾಯಣ ಭಟ್ಟರ್ ಹಾಗೂ ಹಿರಿಯ ಆಗಮ ಪಂಡಿತ್ ವಿದ್ವಾನ್ ಶ್ರೀ ಎಸ್.ಆರ್.ಶೇಷಾದ್ರಿ ಭಟ್ಟರ್ ರವರಿಂದ ಪಾಂಚರಾತ್ರಾಗಮ ರೀತ್ಯಾ ಪ್ರತಿಷ್ಠಾಪಿಸಲಾಯಿತು.
1984 ರಲ್ಲಿ ವಿಮಾನ ಗೋಪುರವನ್ನು ನಿರ್ಮಾಣ ಮಾಡಲಾಯಿತು. 1987 ರಲ್ಲಿ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ, 1990 ರಲ್ಲಿ ರಾಜಗೋಪುರ ಹಾಗೂ ದೇವಾಲಯವನ್ನು ನವೀಕರಿಸಲಾಯಿತು. 1994 ರಲ್ಲಿ ಶ್ರೀ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಹಾಗೂ ಬ್ರಹ್ಮೋತ್ಸವನ್ನು ಪ್ರಾರಂಭಿಸಲಾಯಿತು. 1996 ರಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಸಂಗೀತೋತ್ಸವವನ್ನು ಪ್ರಾರಂಭಿಸಲಾಯಿತು. 2000ನೇ ಇಸವಿಯಲ್ಲಿ ಆಳ್ವಾರ್ ಆಚಾರ್ಯರುಗಳ ಸ್ಥಿರ ಹಾಗೂ ಚಿರಬಿಂಭ ಪ್ರತಿಷ್ಠಾಪನೆ ಮಾಡಲಾಯಿತು. 2003ರಲ್ಲಿ ದೇವಾಲಯದ ಪ್ರಾಕಾರದಲ್ಲಿ ನವನರಸಿಂಹ ನಿರ್ಮಾಣ, 2004ರಲ್ಲಿ ಬೆಳ್ಳಿ ರಥ ಹಾಗೂ ಬೆಳ್ಳಿ ವಾಹನಗಳ ನಿರ್ಮಾಣ, 2005 ರಲ್ಲಿ ವೈಕುಂಠ ದ್ವಾರ ನಿರ್ಮಾಣ, 2006ರಲ್ಲಿ ಪ್ರಥಮ ಭಾರಿಗೆ ತೆಪ್ಪೋತ್ಸವ ನಡೆಸಲಾಯಿತು. 2008 ರಲ್ಲಿ ಸುದರ್ಶನ ಸ್ವಾಮಿ ಪ್ರತಿಷ್ಠಾಪನೆ. 2012ರಲ್ಲಿ ಪ್ರವಚನ ಮಂದಿರ ನಿರ್ಮಿಸಿ, 2014 ರಲ್ಲಿ ಪ್ರಥಮ ಬಾರಿಗೆ ಸಹಸ್ರ ಕಳಶಾಭಿಷೇಕ ಮಾಡಲಾಯಿತು. ಅದೇ ವರ್ಷದಲ್ಲಿ 2ನೇ ಭಾರಿಗೆ ತೆಪ್ಪೋತ್ಸವವನ್ನು ನಡೆಸಲಾಯಿತು. 2014ರಲ್ಲಿ 2ನೇ ಭಾರಿಗೆ ಸಹಸ್ರ ಕಳಶಾಭಿಷೇಕ ಮಾಡಲಾಯಿತು.
ಪ್ರತೀ ವರ್ಷ ಬ್ರಹ್ಮೋತ್ಸವ, ನರಸಿಂಹ ಜಯಂತಿ, ಸರ್ವ ವಾಹನೋತ್ಸವ, ಪವಿತ್ರೋತ್ಸವ, ವೈಕುಂಠ ಏಕಾದಶಿ, ಹನುಮಜಯಂತಿ, ಧನುರ್ಮಾಸ ಪೂಜೆ, ಆಳ್ವಾರ್ ಆಚಾರ್ಯರುಗಳ ತಿರುನಕ್ಷತ್ರ ಹಾಗೂ ಇತರೆ ಕಾರ್ಯಕ್ರಮಗಳು ನಡೆಸಲಾಗುತ್ತದೆ. ಈ ದೇವಾಲಯದಲ್ಲಿ ವಿವಾಹ ಅಪೇಕ್ಷೆಯಿರುವ ವಧು ಅಥವಾ ವರರು ಬಂದು ಕಲ್ಯಾಣೋತ್ಸವದ ಸಮಯದಲ್ಲಿ ದೇವರ ಕಂಕಣವನ್ನು ಧರಿಸಿ ಪ್ರದಕ್ಷಿಣೆ ಮಾಡಿದ ಪಕ್ಷದಲ್ಲಿ ಅವರಿಗೆ ಬೇಗನೆ ವಿವಾಹವಾಗುತ್ತದೆ. ಹಾಗೂ ಇಲ್ಲಿ ವಿಶೇಷವಾಗಿ ಪ್ರದಕ್ಷಣೆಗಳನ್ನು ಹಾಕಿದ ಭಕ್ತಾಧಿಗಳಿಗೆ ಅವರವರ ಇಷ್ಠಾರ್ಥಗಳು ನೆರವೇರುತ್ತದೆ ಎಂಬುದು ಈ ದೇವಾಲಯದ ವಿಶೇಷತೆಯಾಗಿರುತ್ತದೆ.