ಮಲ್ಲೇಶ್ವರಂ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಪುರಾತನವಾದ ದೇವಾಲಯವಾಗಿದ್ದು, ಹಿಂದೆ 1669 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಸಹೋದರರಾದ ಎಕ್ಕೋಜಿರಾವ್ (ವೆಂಕೋಜಿರಾವ್) ರವರು ಬೆಂಗಳೂರಿಗೆ ಆಗಮಿಸಿದರು. ಅಂದು ಈ ಪ್ರದೇಶವನ್ನು ಮೇದರನಿಂಗನಹಳ್ಳಿ ಎಂದು ಕರೆಯಲಾಗುತ್ತಿತ್ತು. “ಶಾಶ್ವತಂ ಶಿವಂ ಅಚ್ಛುತಂ” ಎಂಬ ವೇದೋಕ್ತಿಯಂತೆ ಎಕ್ಕೋಜಿಯವರಿಗೆ ಇಲ್ಲಿ ಪರಮೇಶ್ವರ ಹಾಗೂ ನರಸಿಂಹ ಸ್ವಾಮಿಯ ಇರುವಿಕೆ ಗೋಚರವಾಯಿತು. ಆಗ ಈಶ್ವರನಿಗೂ ಅಚ್ಛುತನಿಗೂ ಒಂದೊಂದು ಮಂಟಪ ಕಟ್ಟಿಸಿ ಈ ಸ್ಥಳವನ್ನೆಲ್ಲಾ ದೇವಾಲಯಕ್ಕೆ ಮಾನ್ಯ ನೀಡಿ ತಮ್ಮ ಪ್ರಯಾಣ ಮುಂದುವರೆಸಿದರು. ಕಾಲಕ್ರಮೇಣ ಈಶ್ವರ ಗುಡಿಯು ಕಾಡುಮಲ್ಲೇಶ್ವರ ಗುಡಿ ಎಂದು ಅದರ...