ಶ್ರೀ ಕಾಶೀವಿಶ್ವೇಸ್ವರಸ್ವಾಮಿ ದೇವಾಲಯ ಅಂತರಗಂಗೆ, ಕೋಲಾರ - 563101, ಕೋಲಾರ .
Sri Kasivishveshwaraswamy Temple Antharagange, Kolar - 563101, Kolar District [TM000183]
×
Temple History
ಇತಿಹಾಸ
ಸತ್ಯಯುಗದಲ್ಲಿ ಮುಚಕುಂದದ ರಾಜನು ದೇವಾಸುರನ ಯುದ್ಧದಲ್ಲಿ ದೇವತೆಗಳ ವಿರುದ್ಧ ಯುದ್ಧ ಮಾಡಿ, ಅವನನ್ನು ಭೂಮಿಗೆ ಕಳುಹಿಸಿದಾಗ, ಅವನು ಸುಮಾರು ಒಂದು ವರ್ಷ ಸ್ವರ್ಗದಲ್ಲಿದ್ದನು, ಇಂದ್ರನು ಮುಚಕುಂಡನಿಗೆ ಹೇಳಿದನು, ಇದನ್ನು ಮಾಡಿದವನು ಎಂದು ಹೇಳಲಾಗುತ್ತದೆ. ಅವನು ಇಷ್ಟಪಟ್ಟಂತೆ ಜಗತ್ತಿನಲ್ಲಿ ವಾಸಿಸಲು ಅವನ ನಿದ್ರೆ, ವರವನ್ನು ಪಡೆದು ಸತ್ತನು.
ನಂತರ ದ್ವಾಪರ ಯುಗದಲ್ಲಿ, ಶ್ರೀ ಕೃಷ್ಣನು ರಾಕ್ಷಸ ಕಾಲಯವನದಿಂದ ತಪ್ಪಿಸಿಕೊಳ್ಳಲು ಅದೇ ಸತ್ಯಗಂಗಾ ಪರ್ವತಕ್ಕೆ ಬಂದನು ಮತ್ತು ಮುಚಕುಂಡಕ್ಕಂನ ಸಿಂಹಾಸನವನ್ನು ಏರಿದನು, ಮುಖಕುಂಡಸ್ ಕಣ್ಣುಗಳು ತೆರೆದಂತೆ, ಶ್ರೀಕೃಷ್ಣನು ಸುಟ್ಟುಹೋದನು. ಕಲಿಯುಗದ ಆರಂಭದಲ್ಲಿ, ಯುಗದ ಅರುಣೋದಯದ ಅಂತ್ಯದಲ್ಲಿ, ಶಿವನು ಶಿವಲಿಂಗವನ್ನು ಸ್ಥಾಪಿಸಿದನು ಮತ್ತು ಅದಕ್ಕೆ ಕಾಶಿವಿಶ್ವೇಶ್ವರ ಎಂದು ಹೆಸರಿಸಿದನು. ಮುಚ್ಕುಂದ ಮಹರ್ಷಿಗಳು ಕಾಶಿಯಿಂದ ಗಂಜಿಯನ್ನು ತಂದು ದೇವರಿಗೆ ಅಭಿಷೇಕ ಮಾಡಿದಾಗ, ನಾನು ಕಾಶಿಯಿಂದ ದೇವಸ್ಥಾನಕ್ಕೆ ಬರುತ್ತಿದ್ದೇನೆ ಎಂದು ಗಂಗಾ...ಸತ್ಯಯುಗದಲ್ಲಿ ಮುಚಕುಂದದ ರಾಜನು ದೇವಾಸುರನ ಯುದ್ಧದಲ್ಲಿ ದೇವತೆಗಳ ವಿರುದ್ಧ ಯುದ್ಧ ಮಾಡಿ, ಅವನನ್ನು ಭೂಮಿಗೆ ಕಳುಹಿಸಿದಾಗ, ಅವನು ಸುಮಾರು ಒಂದು ವರ್ಷ ಸ್ವರ್ಗದಲ್ಲಿದ್ದನು, ಇಂದ್ರನು ಮುಚಕುಂಡನಿಗೆ ಹೇಳಿದನು, ಇದನ್ನು ಮಾಡಿದವನು ಎಂದು ಹೇಳಲಾಗುತ್ತದೆ. ಅವನು ಇಷ್ಟಪಟ್ಟಂತೆ ಜಗತ್ತಿನಲ್ಲಿ ವಾಸಿಸಲು ಅವನ ನಿದ್ರೆ, ವರವನ್ನು ಪಡೆದು ಸತ್ತನು.
ನಂತರ ದ್ವಾಪರ ಯುಗದಲ್ಲಿ, ಶ್ರೀ ಕೃಷ್ಣನು ರಾಕ್ಷಸ ಕಾಲಯವನದಿಂದ ತಪ್ಪಿಸಿಕೊಳ್ಳಲು ಅದೇ ಸತ್ಯಗಂಗಾ ಪರ್ವತಕ್ಕೆ ಬಂದನು ಮತ್ತು ಮುಚಕುಂಡಕ್ಕಂನ ಸಿಂಹಾಸನವನ್ನು ಏರಿದನು, ಮುಖಕುಂಡಸ್ ಕಣ್ಣುಗಳು ತೆರೆದಂತೆ, ಶ್ರೀಕೃಷ್ಣನು ಸುಟ್ಟುಹೋದನು. ಕಲಿಯುಗದ ಆರಂಭದಲ್ಲಿ, ಯುಗದ ಅರುಣೋದಯದ ಅಂತ್ಯದಲ್ಲಿ, ಶಿವನು ಶಿವಲಿಂಗವನ್ನು ಸ್ಥಾಪಿಸಿದನು ಮತ್ತು ಅದಕ್ಕೆ ಕಾಶಿವಿಶ್ವೇಶ್ವರ ಎಂದು ಹೆಸರಿಸಿದನು. ಮುಚ್ಕುಂದ ಮಹರ್ಷಿಗಳು ಕಾಶಿಯಿಂದ ಗಂಜಿಯನ್ನು ತಂದು ದೇವರಿಗೆ ಅಭಿಷೇಕ ಮಾಡಿದಾಗ, ನಾನು ಕಾಶಿಯಿಂದ ದೇವಸ್ಥಾನಕ್ಕೆ ಬರುತ್ತಿದ್ದೇನೆ ಎಂದು ಗಂಗಾ ಮಾತೆ ಹೇಳಿದ್ದಳು. ದೇವಸ್ಥಾನದ ದಕ್ಷಿಣ ಭಾಗದಲ್ಲಿ ಗಂಗೆಯು ಭೂಮಿಯಿಂದ ನಿಂಬೆ ರಸ, ರುದ್ರಾಕ್ಷಿ, ದಂಡಕಮಂಡಲ, ಕಾಶಿಯ ನೀರಿನ ರೂಪದಲ್ಲಿ, ದೇವಾಲಯದ ದಕ್ಷಿಣ ಭಾಗದಲ್ಲಿ ಭಕ್ತರ ಅನುಕೂಲಕ್ಕಾಗಿ ಬಂದಿತು. ಮುಚ್ಕುಂದ ಮಹರ್ಷಿಯು ಎರಡು ಬಸವನ ಪ್ರತಿಮೆಗಳನ್ನು ಮತ್ತು ಕಲ್ಯಾಣಿಯನ್ನು ನಿರ್ಮಿಸಿದನೆಂದು ನಂಬಲಾಗಿದೆ. ಹಾವಿನ ಬಾಯಿಂದ ನೀರು ಹರಿಯುತ್ತಿರುವುದರಿಂದ ಈ ಕ್ಷೇತ್ರಕ್ಕೆ ಈ ಹೆಸರು ಬಂದಿದ್ದು, ನೀರು ಎಲ್ಲಿಂದ ಬರುತ್ತಿದೆ ಎಂಬುದು ನಿಗೂಢವಾಗಿದೆ. ಪುಷ್ಕರಿಯ ದಕ್ಷಿಣ ಭಾಗ ಮತ್ತು ನೀರು ದಕ್ಷಿಣಕ್ಕೆ ಹರಿಯುವುದರಿಂದ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಕ್ಷೇತ್ರ ಎಂದು ಕರೆಯಲಾಗುತ್ತದೆ.
ಕಾರ್ತಿಕಮಾಸ ಶಿವರಾತ್ರಿಯಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಭಕ್ತರ ಇಷ್ಟಾರ್ಥಗಳನ್ನು ದೇವರು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ದೇವಸ್ಥಾನದ ಪಕ್ಕದಲ್ಲಿರುವ ಬಸವಣ್ಣನವರ ಬಾಯಿಂದ ಬರುವ ನೀರಿನಿಂದ ಸ್ನಾನ ಮಾಡಿದರೆ ರೋಗ ನಿವಾರಣೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ಈ ನೀರಿಗೆ ಔಷಧೀಯ ಗುಣವಿದೆ ಎಂಬ ಪ್ರತೀತಿ ಇದೆ.
ಪೌರಾಣಿಕ ಹಿನ್ನೆಲೆ
ಸತ್ಯಯುಗದಲ್ಲಿ ಮುಚಕುಂದ ಎಂಬ ರಾಜನು ದೇವಾಸುರ ಸಂಗ್ರಾಮದಲ್ಲಿ ದೇವತೆಗಳ ಪರ ಯುದ್ಧವನ್ನು ಮಾಡಿ, ಸುಮಾರು ಒಂದು ವರ್ಷಗಳ ಕಾಲ ದೇವಲೋಕದಲ್ಲಿ ಇದ್ದುದರಿಂದ ಮರಳಿ ಭೂಲೋಕಕ್ಕೆ ವಾಪಸ್ಸು ಕಳುಹಿಸಲು ಕೇಳಿದಾಗ, ಇಂದ್ರನು ಮುಚಕುಂದನನ್ನು ಕುರಿತು, ದೇವಲೋಕದ ಒಂದು ವರ್ಷವು ಭೂಲೋಕದಲ್ಲಿ ಸಹಸ್ರಾರು ವರ್ಷಗಳಿಗೆ ಸಮವಾಗಿದೆಯೆಂದು, ಈಗ ನಿನ್ನವರು ಯಾರೂ ಇಲ್ಲವೆಂದು ತಿಳಿಸಿದಾಗ ಈ ಮುಚಕುಂದನು ಬಹಳ ಬೇಸರಗೊಂಡು ನಾನು ಭೂಲೋಕಕ್ಕೆ ಹೋಗಲೇಬೇಕೆಂದು ಕೇಳಿದಾಗ, ಮುಚುಕುಂದನಿಗೆ ವರವನ್ನು ನೀಡಿ ತಾನು ಇಷ್ಟಪಡುವವರೆಗೂ ಭೂಲೋಕದಲ್ಲಿ ನಿದ್ರಿಸಲು ತನ್ನ ನಿದ್ರಾಬಂಗವನ್ನು ಮಾಡಿದ ವ್ಯಕ್ತಿ ಮರಣಿಸಬೇಕೆಂದು ವರವನ್ನು ಪಡೆದು, ಭೂಲೋಕದ ಇದೆ ಶತಶೃಂಗ ಪರ್ವತಕ್ಕೆ ಬಂದು ನೆಲೆಸಿದನೆಂದು ಪ್ರತೀತಿಯಿದೆ.
• ನಂತರ ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಕಾಲಯವನೆಂಬ ರಾಕ್ಷಸನಿಂದ ತಪ್ಪಿಸಿಕೊಳ್ಳಲು ಇದೇ ಶತಶೃಂಗ ಪರ್ವತಕ್ಕೆ ಬಂದು ಶ್ರೀಕೃಷ್ಣನೆಂದು ಅಪಾರ್ಥ ಮಾಡಿಕೊಂಡು ಮುಚಕುಂದನ ನಿದ್ರಾಭಂಗವನ್ನು...ಸತ್ಯಯುಗದಲ್ಲಿ ಮುಚಕುಂದ ಎಂಬ ರಾಜನು ದೇವಾಸುರ ಸಂಗ್ರಾಮದಲ್ಲಿ ದೇವತೆಗಳ ಪರ ಯುದ್ಧವನ್ನು ಮಾಡಿ, ಸುಮಾರು ಒಂದು ವರ್ಷಗಳ ಕಾಲ ದೇವಲೋಕದಲ್ಲಿ ಇದ್ದುದರಿಂದ ಮರಳಿ ಭೂಲೋಕಕ್ಕೆ ವಾಪಸ್ಸು ಕಳುಹಿಸಲು ಕೇಳಿದಾಗ, ಇಂದ್ರನು ಮುಚಕುಂದನನ್ನು ಕುರಿತು, ದೇವಲೋಕದ ಒಂದು ವರ್ಷವು ಭೂಲೋಕದಲ್ಲಿ ಸಹಸ್ರಾರು ವರ್ಷಗಳಿಗೆ ಸಮವಾಗಿದೆಯೆಂದು, ಈಗ ನಿನ್ನವರು ಯಾರೂ ಇಲ್ಲವೆಂದು ತಿಳಿಸಿದಾಗ ಈ ಮುಚಕುಂದನು ಬಹಳ ಬೇಸರಗೊಂಡು ನಾನು ಭೂಲೋಕಕ್ಕೆ ಹೋಗಲೇಬೇಕೆಂದು ಕೇಳಿದಾಗ, ಮುಚುಕುಂದನಿಗೆ ವರವನ್ನು ನೀಡಿ ತಾನು ಇಷ್ಟಪಡುವವರೆಗೂ ಭೂಲೋಕದಲ್ಲಿ ನಿದ್ರಿಸಲು ತನ್ನ ನಿದ್ರಾಬಂಗವನ್ನು ಮಾಡಿದ ವ್ಯಕ್ತಿ ಮರಣಿಸಬೇಕೆಂದು ವರವನ್ನು ಪಡೆದು, ಭೂಲೋಕದ ಇದೆ ಶತಶೃಂಗ ಪರ್ವತಕ್ಕೆ ಬಂದು ನೆಲೆಸಿದನೆಂದು ಪ್ರತೀತಿಯಿದೆ.
• ನಂತರ ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಕಾಲಯವನೆಂಬ ರಾಕ್ಷಸನಿಂದ ತಪ್ಪಿಸಿಕೊಳ್ಳಲು ಇದೇ ಶತಶೃಂಗ ಪರ್ವತಕ್ಕೆ ಬಂದು ಶ್ರೀಕೃಷ್ಣನೆಂದು ಅಪಾರ್ಥ ಮಾಡಿಕೊಂಡು ಮುಚಕುಂದನ ನಿದ್ರಾಭಂಗವನ್ನು ಮಾಡಿದ್ದರಿಂದ ಮುಚುಕುಂದ ಮಹರ್ಷಿ ಕಣ್ಣು ತೆರೆದು ನೋಡಿದ ತಕ್ಷಣ ಕಾಲವನನು ಸುಟ್ಟುಹೋಗುತ್ತಾನೆ ನಂತರ ಶ್ರೀಕೃಷ್ಣ ಪರಮಾತ್ಮರು, ಮುಚಕುಂದ ಋಷಿಗಳಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿ, ನಾವಿಬ್ಬರು ಸಂಧಿಸಿದ್ದಕ್ಕಾಗಿ ಅಥವಾ ಇಲ್ಲಿ ತಪ್ಪಸ್ಸು ಮಾಡಿರುವುದಕ್ಕಾಗಲಿ ಏನಾದರೂ ಒಂದು ಪ್ರತೀತಿ ಇರುವಂತಹ ಕ್ಷೇತ್ರವನ್ನಾಗಿ ಮಾಡು ಎಂದು ಶ್ರೀಕೃಷ್ಣ ಪರಮಾತ್ಮನು ಹೇಳಿ ಅಂತರ್ಧಾನನಾದನು, ಅದರಂತೆ ದ್ವಾಪರಯುಗ ಅಂತ್ಯವಾಗಿ ಕಲಿಯುಗ ಪ್ರಾರಂಭವಾಗುವ ಸಂದರ್ಭದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಕಾಶಿವಿಶ್ವೇಶ್ವರ ಎಂಬುದಾಗಿ ನಾಮಕರಣ ಮಾಡಿ ಪ್ರತಿನಿತ್ಯ ಶ್ರೀ. ಮುಚ್ಕುಂದ ಮಹರ್ಶಿಗಳು ಕಾಶಿಯಿಂದ ಗಂಗೆಯನ್ನು ತಂದು ದೇವರಿಗೆ ಅಭಿಷೇಕ ಮಾಡುತ್ತಿದ್ದರೆಂದು, ಈ ಸಮಯದಲ್ಲಿ ಗಂಗಾ ದೇವಿಯು ಪ್ರತ್ಯಕ್ಷವಾಗಿ ನಾನೇ ಕಾಶಿಯಿಂದ ದೇವಾಲಯದ ಬಳಿ ಬರುವುದಾಗಿ ಶ್ರೀ.ಮುಚ್ಕುಂದ ಮಹರ್ಶಿಗಳಿಗೆ ತಿಳಿಸಿದ್ದರೆಂದು, ಆಗ ಋಷಿಗಳು ನಂಬುವುದಿಲ್ಲ, ಗಂಗೆ ಬೇಕಾದರೂ ಬರುತ್ತೆ, ಆದರೆ ಸ್ವಯಂ ಗಂಗಾಭವಾನಿ ನೀನೆ ಹೇಗೆ ಬರುತ್ತೀಯ ಅಂತ ಕೇಳಿದಾಗ ಕೋಪದಿಂದ ಗಂಗಾಭವಾನಿಯು ಋಷಿಗಳ ಕೈಯಲ್ಲಿದ್ದ ರುದ್ರಾಕ್ಷಿ ದಂಡ, ನಿಂಬೆ ಹಣ್ಣು, ಕಮಂಡಲ ಇದನ್ನು ತೆಗೆದುಕೊಂಡು ಇದರ ಮುಖಾಂತರ ನಾನು ಬರುತ್ತೀನೆಂದು ಹೇಳಿ ವಾಗ್ದಾನ ಕೋರುತ್ತಾಳೆಂದು, ಋಷಿಗಳು ಬಂದು ನೋಡುವಷ್ಟರಲ್ಲಿ ದೇವಾಲಯದ ದಕ್ಷಿಣ ಭಾಗದಲ್ಲಿ ಗಂಗೆಯು ಭೂಮಿಯಿಂದ ನಿಂಬೆಹಣ್ಣು, ರುದ್ರಾಕ್ಷಿ ಮಾಲೆ, ದಂಡಕಮಂಡಲ ಸಮೇತವಾಗಿ ಕಾಶಿಯಿಂದ ಜಲದ ರೂಪದಲ್ಲಿ ಬಂದಳೆಂದು, ಆ ಸ್ಥಳದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಶ್ರೀ. ಮುಚ್ಕುಂದ ಮಹರ್ಶಿಗಳವರೇ ಎರಡು ಬಸವನ ಮೂರ್ತಿಯನ್ನು ಹಾಗೂ ಕಲ್ಯಾಣಿಯನ್ನು ನಿರ್ಮಿಸಿರುತ್ತಾರೆಂದು ಪ್ರತೀತಿ ಇದೆ. ಈ ಬಸವಣ್ಣನ ಮೂರ್ತಿಯ ಬಾಯಿಯಿಂದ ನೀರು ಸದಾಕಾಲ ಹರಿಯುತ್ತಿದ್ದು, ಈ ನೀರು ಎಲ್ಲಿಂದ ಬರುತ್ತಿದೆ ಎಂಬುದರ ಬಗ್ಗೆ ನಿಗೂಡವಾಗಿದ್ದ ಕಾರಣ ಈ ಕ್ಷೇತ್ರಕ್ಕೆ ಅಂತರಗಂಗೆ ಎಂದು ನಾಮಕರಣವಾಗಿರುತ್ತದೆ. ಪುಷ್ಕರಣಿಯು ದಕ್ಷಿಣ ಭಾಗದಲ್ಲಿರುವುದರಿಂದ ಹಾಗೂ ನೀರು ದಕ್ಷಿಣಕ್ಕೆ ಹರಿಯುವುದರಿಂದ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಕ್ಷೇತ್ರವೆಂದು ಕರೆಯುತ್ತಾರೆ.
• ದೇವಾಲಯದಲ್ಲಿ ಕಾರ್ತಿಕಮಾಸ ಶಿವರಾತ್ರಿಗಳಂದು ವಿಶೇಷ ಪೂಜೆ ಪುರಸ್ಕಾರ ನಡೆಯುತ್ತಿರುತ್ತದೆ. ಭಕ್ತಾದಿಗಳು ಕೋರುವ ಇಷ್ಟಾರ್ಥಗಳನ್ನು ದೇವರು ಪೂರೈಸುತ್ತಾನೆಂಬ ಪ್ರತೀತಿ ಇದೆ. ದೇವಾಲಯದ ಪಕ್ಕದಲ್ಲಿರು ಬಸವಣ್ಣನ ಬಾಯಿನಲ್ಲಿ ಬರುವ ನೀರಿನೀಂದ ಸ್ನಾನ ಮಾಡಿದ್ದಲ್ಲಿ, ನೀರು ಕುಡಿದಲ್ಲಿ ರೋಗ ರುಜಿನಗಳು ಬರುವುದಿಲ್ಲವೆಂದು ಪ್ರತೀತಿ ಇದೆ. ಈ ನೀರಿನಲ್ಲಿ ಔಷಧಿ ಗುಣ ಸೇರಿರುತ್ತದೆಂಬ ನಂಬಿಕೆ ಇರುತ್ತದೆ.