Screen Reader Access                 A-  A  A+ 
ಶ್ರೀ ಲಕ್ಮೀನರಸಿಂಹ ಸ್ವಾಮಿ ದೇವಾಲಯ, ಬಳೆಪೇಟೆ ಮುಖ್ಯ ರಸ್ತೆ, ಬೆಂಗಳೂರು ಉತ್ತರ - 560053, ಬೆಂಗಳೂರು .
Sri Lakshmi Narasimha Swamy Temple, Balepete Main Road, Bengaluru North - 560053, Bengaluru Urban District [TM000019]
×
Temple History

ಸ್ಥಳ ಪುರಾಣ

ಕರ್ನಾಟಕ ರಾಜ್ಯದ ಬೃಹತ್ ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ ಬಳೇಪೇಟೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು 250 ವರ್ಷಗಳ ಪುರಾತನ ಪ್ರಸಿದ್ಧಿ ಹೊಂದಿದ ದೇವಾಲಯವಾಗಿರುತ್ತದೆ. ದೇವಾಲಯ ಅಕ್ಕಪಕ್ಕ ಭಾಗದಲ್ಲಿ ಹೂ ಮಾರುವವರು ಹೆಚ್ಚಾಗಿ ವಾಸಿಸುತ್ತಿದ್ದು, ಆ ಜನಾಂಗದವರಿಗೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಮನೆಯ ದೇವರು ಆಗಿರುತ್ತದೆ. ಆ ಜನಾಂಗದ ಮುಖಂಡರಾದ ಶ್ರೀ ಘೋರಿ ನರಸಿಂಹಯ್ಯ ಎಂಬುವವರಿಗೆ ಹಿಂದೆ ಸ್ಪಪ್ನದಲ್ಲಿ ಕಾಣಿಸಿಕೊಂಡು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಯು ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವಂತಹ ಬನ್ನೇರುಘಟ್ಟದಲ್ಲಿರುವ ಸುವರ್ಣಮುಖಿ ಕೊಳದಲ್ಲಿ ಇರುವುದಾಗಿ ಗೋಚರಿಸಿತು. ಆಗ ಜನಾಂಗದವರೆಲ್ಲರೂ ಎತ್ತಿನ ಗಾಡಿಯನ್ನು ಕಟ್ಟಿಕೊಂಡು ಹೋಗಿ ನೋಡಿದಾಗ ಅಲ್ಲಿ ಅವರಿಗೆ ಆಶ್ಚರ್ಯವಾಗಿ ಒಂದೇ ರೀತಿಯ ಎರಡು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅವಳಿ-ಜವಳಿ ವಿಗ್ರಹಗಳು ಕಾಣಿಸಿಕೊಂಡು, ಒಂದು ವಿಗ್ರಹವನ್ನು ಬನ್ನೇರುಘಟ್ಟದ ಬೆಟ್ಟದ...