Screen Reader Access                 A-  A  A+ 
ಶ್ರೀ ಶಂಕರನಾರಾಯಣ ದೇವಸ್ಥಾನ ಶಂಕರನಾರಾಯಣ, ಉಡುಪಿ - 576227, ಉಡುಪಿ .
Sri Shankaranarayana Temple Shankaranarayana, Udupi - 576227, Udupi District [TM000196]
×
Temple History

ಸ್ಥಳ ಪುರಾಣ

ಈ ಪರಶುರಾಮು ಸೃಷ್ಟಿಯಲ್ಲಿರುವ ಸಪ್ತ ಮಹಾ ಕ್ಷೇತ್ರಗಳಲ್ಲಿ ಶ್ರೀ ಶಂಕರನಾರಾಯಣ ದೇವಾಲಯವು ಒಂದಾಗಿರುತ್ತದೆ. ಈ ಸ್ಥಳದ ಸೃಷ್ಟಿ ಸೌಂದರ್ಯವು ಜನರನ್ನು ಆಕರ್ಷಿಸುತ್ತದೆ. ಉನ್ನತವಾದ ಕ್ರೋಡಮುನಿಯು ತಪಸ್ಸು ಮಾಡಿದ ಗುಹೆ, ಪರ್ವತದ ತಪ್ಪಲಲ್ಲಿ ಕೊಳ, ಕೊಳದಲ್ಲಿ ಶ್ರೀ ಶಂಕರನಾರಾಯಣಸ್ವಾಮಿಯ ಲಿಂಗೋದ್ಭವ, ಕಡುಬೇಸಿಗೆ ಮಳೆಗಾಲವೆನ್ನದೇ ಒಂದೇ ಸಮನಾಗಿ ಹರಿಯುವ ನೀರು ಇದು ಈ ಸ್ಥಳದ ವೈಶಿಷ್ಟಗಳಾಗಿವೆ. ಈ ದೇವಾಲಯವು ಪುರಾತನ ಕಾಲದಲ್ಲಿ ವಿಜಯನಗರ, ಇಕ್ಕೇರಿ, ಕೆಳದಿ ಮುಂತಾದ ರಾಜ ಮನೆತನದವರ ಮೇಲ್ಚಿಚಾರಣೆಯಲ್ಲಿ ಕಂಡು ಬಂದಿರುತ್ತದೆ. ಪುರಾಣ ಕಾಲದಲ್ಲಿ ಖರಾಸುರ ಮತ್ತು ರಟ್ಟಾಸುರ ಎನ್ನುವ ರಾಕ್ಷಸರ ಸಂಹಾರಕ್ಕಾಗಿ ಮಹಾ ತೇಜಸ್ವಿಯಾದ ಕ್ರೋಡಮುನಿಯು ಸಹ್ಯಾದ್ರಿ ಗಿರಿ ಶ್ರೇಣಿಯ ತಪ್ಪಲಿನಲ್ಲಿ ಘೋರ ತಪಸ್ಸು ಮಾಡಿ ಹರಿಹರರನ್ನು ಒಲಿಸಿಕೊಂಡರು. ಮುನಿಪುಂಗವರ ಆಚಲ ಭಕ್ತಿಗೆ...