ಶ್ರೀ ಬಲಭೀಮಸೇನ ಸ್ವಾಮಿ ದೇವಾಲಯ ಮೊತಕಪಲ್ಲಿ, ಮೋತಕಪಲ್ಲಿ, ಕಲಬುರಗಿ - 585318, ಕಲಬುರಗಿ .
Sri Balabheemsena Swamy Temple Motakpalli, Kalaburgi - 585318, Kalaburagi District [TM000197]
×
Temple History
ಸ್ಥಳ ಪುರಾಣ
ಶ್ರೀ ಬಲಭೀಮಸೇನೆ ದೇವಸ್ಥಾನವು ಕಲಿಯುಗ ಪ್ರಾರಂಭದಲ್ಲಿ ಸುಮಾರು 5000 ವರ್ಷಗಳ ಪೂರ್ವದಲ್ಲಿ ಸ್ವಯಂ ಉದ್ಭವನಾಗಿ ಮೋತಕಪಲ್ಲಿ ನೆಲೆಸಿದೆ. ಅನೇಕ ಋಷಿಮುನಿಗಳು ಪೂಜಿಸಿ ಮುಕ್ತಿಯನ್ನು ಪಡೆದರು ಸ್ಕಾಂದ ಪುರಾಣ ವಿವರಿಸುತ್ತದೆ. ಸ್ವಾಮಿಯು ಉದ್ಭವನಾದ ಸ್ಥಳದಲ್ಲಿ ರಾಜ ಲಕ್ಷ್ಮಣಪ್ಪ ಕಾಕಲವರ ದೊರೆ ದೇವಸ್ಥಾನವನ್ನು ವಿಮಾನ ಆಕೃತಿಯಲ್ಲಿ ನಿರ್ಮಿಸಿದನು. ದೇವರ ನಿತ್ಯ ಪೂಜೆಗಾಗಿ ಭರದ್ವಾಜ ಗೋತ್ರದ ಬ್ರಾಹ್ಮಣರನ್ನು ನೇಮಿಸಿದನು. ಆಗಿನಿಂದಲು ದ್ವೈತಸಿದ್ದಾಂತ ತಂತ್ರ ಸಾರೋಕ್ತವಾಗಿ ಪೂಜಾ ಕಾರ್ಯಗಳು ನಡೆಯುತ್ತವೆ.
ಪ್ರತಿ ವರ್ಷ ಜಾತ್ರಾ ಮಹೋತ್ಸವು ಮಾರ್ಗಶಿರ ಮಾಸದಲ್ಲಿ ನಡೆಯುತ್ತದೆ. ಜಾತ್ರೋತ್ಸವ ಮರುದಿನ ಹೂವಿನ ತೇರು ಎಂದು ಪ್ರಸಿದ್ದವಾದ ಗಜವಾಹನ ಉತ್ಸವ ನಡೆಯುತ್ತದೆ.
ವರ್ಷದಲ್ಲಿ ರಥಸಪ್ತಮಿಯಂದು ಏಳು ವಾಹನೋತ್ಸವಗಳು ನೆರವೇರುತ್ತವೆ. ಧರ್ಮಾನುಸಾರದಲ್ಲಿ ವಿಶೇಷ ಪೂಜೆ ವೈಶಾಖ ಮಾಸದಲ್ಲಿ ವಸಂತ ಪೂಜೆ, ದಸರಾ ಮತ್ತು ದೀಪಾವಳಿಯಂದು ಗಜವಾಹನೋತ್ಸವ ಪೂಜೆ ನಡೆಯುತ್ತದೆ. ಎಲ್ಲಾ ಪೂಜೆಗಳು...ಶ್ರೀ ಬಲಭೀಮಸೇನೆ ದೇವಸ್ಥಾನವು ಕಲಿಯುಗ ಪ್ರಾರಂಭದಲ್ಲಿ ಸುಮಾರು 5000 ವರ್ಷಗಳ ಪೂರ್ವದಲ್ಲಿ ಸ್ವಯಂ ಉದ್ಭವನಾಗಿ ಮೋತಕಪಲ್ಲಿ ನೆಲೆಸಿದೆ. ಅನೇಕ ಋಷಿಮುನಿಗಳು ಪೂಜಿಸಿ ಮುಕ್ತಿಯನ್ನು ಪಡೆದರು ಸ್ಕಾಂದ ಪುರಾಣ ವಿವರಿಸುತ್ತದೆ. ಸ್ವಾಮಿಯು ಉದ್ಭವನಾದ ಸ್ಥಳದಲ್ಲಿ ರಾಜ ಲಕ್ಷ್ಮಣಪ್ಪ ಕಾಕಲವರ ದೊರೆ ದೇವಸ್ಥಾನವನ್ನು ವಿಮಾನ ಆಕೃತಿಯಲ್ಲಿ ನಿರ್ಮಿಸಿದನು. ದೇವರ ನಿತ್ಯ ಪೂಜೆಗಾಗಿ ಭರದ್ವಾಜ ಗೋತ್ರದ ಬ್ರಾಹ್ಮಣರನ್ನು ನೇಮಿಸಿದನು. ಆಗಿನಿಂದಲು ದ್ವೈತಸಿದ್ದಾಂತ ತಂತ್ರ ಸಾರೋಕ್ತವಾಗಿ ಪೂಜಾ ಕಾರ್ಯಗಳು ನಡೆಯುತ್ತವೆ.
ಪ್ರತಿ ವರ್ಷ ಜಾತ್ರಾ ಮಹೋತ್ಸವು ಮಾರ್ಗಶಿರ ಮಾಸದಲ್ಲಿ ನಡೆಯುತ್ತದೆ. ಜಾತ್ರೋತ್ಸವ ಮರುದಿನ ಹೂವಿನ ತೇರು ಎಂದು ಪ್ರಸಿದ್ದವಾದ ಗಜವಾಹನ ಉತ್ಸವ ನಡೆಯುತ್ತದೆ.
ವರ್ಷದಲ್ಲಿ ರಥಸಪ್ತಮಿಯಂದು ಏಳು ವಾಹನೋತ್ಸವಗಳು ನೆರವೇರುತ್ತವೆ. ಧರ್ಮಾನುಸಾರದಲ್ಲಿ ವಿಶೇಷ ಪೂಜೆ ವೈಶಾಖ ಮಾಸದಲ್ಲಿ ವಸಂತ ಪೂಜೆ, ದಸರಾ ಮತ್ತು ದೀಪಾವಳಿಯಂದು ಗಜವಾಹನೋತ್ಸವ ಪೂಜೆ ನಡೆಯುತ್ತದೆ. ಎಲ್ಲಾ ಪೂಜೆಗಳು ಮಾಧ್ವ ಪರಂಪರೆಯ ಶ್ರೀ ಉತ್ತಾರಾಧಿ ಮಠದ ಸಂಪ್ರದಾಯದಂತೆ ನೆರವೇರಿಸುತ್ತಾರೆ.
ದೇವಸ್ಥಾನಕ್ಕೆ ಪ್ರತಿದಿನ ಸುತ್ತಮುತ್ತಲಿನ ಹಳ್ಳಿಯ ಜನರು ದರ್ಶನಕ್ಕಾಗಿ ಬರುತ್ತಾರೆ. ವಿಶೇಷವಾಗಿ ಶನಿವಾರದಂದು ಸುಮಾರು ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಏಳು ದಿನ ಜಾತ್ರೆಯಲ್ಲಿ ಹೆಚ್ಚಿನ ಭಕ್ತರು ದರ್ಶನಕ್ಕೆ ಬರುತ್ತಾರೆ.