Screen Reader Access     A-AA+
ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯ, 15ನೇ ಅಡ್ಡ ರಸ್ತೆ ಸಂಪಿಗೆ ರಸ್ತೆ, ಮಲ್ಲೇಶ್ವರಂ - 560003, ಬೆಂಗಳೂರು .
Sri Kadu Malleshwara Swamy Temple, 5th Cross Sampige Road, Malleshwaram - 560003, Bengaluru Urban District [TM000020]
×
Temple History

ಸ್ಥಳ ಪುರಾಣ

ಬೆಂಗಳೂರು ನಗರ ಮಲ್ಲೇಶ್ವರಂನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ (ಕಾಡುಮಲ್ಲಿಕಾರ್ಜುನ ಸ್ವಾಮಿ)ಯು ಅತಿ ಪುರಾತನವಾದ ಉದ್ಭವ ಮೂರ್ತಿಯಾಗಿರುತ್ತದೆ. ಕೆಲವು ಶತಮಾನಗಳ ಹಿಂದ ಬಿಜಾಪುರ ರಾಜ್ಯಕ್ಕೆ ಸೇರಿದ ಈ ಬೆಂಗಳೂರು ಗ್ರಾಮವು ಮರಾಠ ಸಂಸ್ಥಾನ ಸ್ಥಾಪಕರಾದ ಶ್ರೀ ಶಿವಾಜಿ ಮಹಾರಾಜರ ತಂದೆ ಷಾಹಜಿ ಯವರಿಗೆ ಜಹಗೀರಾಗಿ (ಕೊಡುಗೆಯಾಗಿ) ಕೊಡಲ್ಪಟ್ಟಿತು. ಷಾಹಜಿ ಯವರ ಆನಂತರ ಕ್ರಿ.ಶ. 1664ನೇ ವರ್ಷದಲ್ಲಿ ಈ ಗ್ರಾಮವು ಶಿವಾಜಿಯವರ ಸಹೋದರರಾದ ಎಕೋಜಿ(ವೆಂಕೋಜಿ) ರಾಯರ ಪಾಲಿಗೆ ಬಂದಿತು. ಇವರು 1669ನೇ ವರ್ಷದಲ್ಲಿ ಚೌತಾಯವನ್ನು(ತೆರಿಗೆ) ವಿಧಿಸುವುದಕ್ಕೆ ಮಂತ್ರಿಗಳಾದ ಬಾಜೀರಾವ್ ಪೇಷ್ಪೆಯವರೊಂದಿಗೆ ಈ ಪ್ರಾಂತ್ಯಕ್ಕೆ ಬಂದರು. ಮಲ್ಲಾಪುರದ ಮಲ್ಲಿಕಾರ್ಜುನ ಸ್ವಾಮಿಯೆಂಬ ಹೆಸರಿನಿಂದ ಪ್ರಖ್ಯಾತವಾಗಿದ್ದ ಶ್ರೀ ಕಾಡುಮಲ್ಲೇಶ್ವರ ಸ್ವಾಮಿಯವರನ್ನು ಕಂಡು ದೇವರನ್ನು ಪೂಜಿಸಿ ತರುವಾಯ ಗ್ರಾಮಸ್ಥರ ಪ್ರಾರ್ಥನೆ ಮೇರೆಗೆ ಮಲ್ಲೇಶ್ವರದ ಬಳಿ ಇದ್ದ ಮೇದರ ನಿಂಗನಹಳ್ಳಿಯೆಂಬ ಗ್ರಾಮವನ್ನು ಈ...