ಶ್ರೀ ಸೋಮೇಶ್ವರಸ್ವಾಮಿ ದೇವಾಲಯ, ಮಡಿವಾಳ, ಬೆಂಗಳೂರು ನಗರ - 560068, ಬೆಂಗಳೂರು .
Sri Someshwara Swamy Temple, Madivala, Bengaluru Urban - 560068, Bengaluru Urban District [TM000207]
×
Temple History
ಸ್ಥಳ ಪುರಾಣ
ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯವು 12ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿರುತ್ತದೆ. ಇದ್ದೊಂದು ಪುರಾತನ ದೇವಾಲಯವಾಗಿದ್ದು ಇದು ಜೋಳರ ಕಾಲದ ದೇವಾಲಯವಾಗಿರುತ್ತದೆ.
ಮಡಿವಾಳದಲ್ಲಿರುವ ಸೋಮೇಶ್ವರ ದೇವಸ್ಥಾನವು ಬೆಂಗಳೂರಿನ ಅತ್ಯಂತ ಹಳೆಯದಾಗಿದೆ, ಇದು ಚೋಳರ ಕಾಲಕ್ಕೆ ಹಿಂದಿನದು. ದೇವಾಲಯದ ಹೊರ ಗೋಡೆಗಳ ಮೇಲೆ ಹಲವಾರು ತಮಿಳು ಮತ್ತು ಗ್ರಂಥ ಶಾಸನಗಳಿವೆ. ಈ ಶಾಸನಗಳಲ್ಲಿ ಅತ್ಯಂತ ಹಳೆಯದು ಕ್ರಿ.ಶ. 1247 ರ ದಿನಾಂಕವನ್ನು ವೆಪ್ಪೂರ್ (ಆಧುನಿಕ ಬೇಗೂರು) ನಿವಾಸಿಯೊಬ್ಬರು ವೆಂಗಲೂರ್ ದೊಡ್ಡ ತೊಟ್ಟಿಯ ಕೆಳಗೆ ಭೂದಾನದ ಬಗ್ಗೆ ಮಾತನಾಡುತ್ತಾರೆ. ಇತರ ಶಾಸನಗಳು ಬಲ್ಲಾಳ III ಮತ್ತು ರಾಜೇಂದ್ರ ಚೋಳರ ಆಳ್ವಿಕೆಯಲ್ಲಿ ಮಾಡಿದಂತಹ ಇತರ ಭೂದಾನಗಳ ಬಗ್ಗೆಯೂ ಹೇಳುತ್ತವೆ. 1365 ರ ದಿನಾಂಕದ ಮತ್ತೊಂದು ಶಾಸನವು ತಾಮರೈಕ್ಕಿರೈ (ತಮಿಳಿನಲ್ಲಿ ಲೋಟಸ್ ಕೊಳದ ದಂಡೆ ಎಂದು...ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯವು 12ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿರುತ್ತದೆ. ಇದ್ದೊಂದು ಪುರಾತನ ದೇವಾಲಯವಾಗಿದ್ದು ಇದು ಜೋಳರ ಕಾಲದ ದೇವಾಲಯವಾಗಿರುತ್ತದೆ.
ಮಡಿವಾಳದಲ್ಲಿರುವ ಸೋಮೇಶ್ವರ ದೇವಸ್ಥಾನವು ಬೆಂಗಳೂರಿನ ಅತ್ಯಂತ ಹಳೆಯದಾಗಿದೆ, ಇದು ಚೋಳರ ಕಾಲಕ್ಕೆ ಹಿಂದಿನದು. ದೇವಾಲಯದ ಹೊರ ಗೋಡೆಗಳ ಮೇಲೆ ಹಲವಾರು ತಮಿಳು ಮತ್ತು ಗ್ರಂಥ ಶಾಸನಗಳಿವೆ. ಈ ಶಾಸನಗಳಲ್ಲಿ ಅತ್ಯಂತ ಹಳೆಯದು ಕ್ರಿ.ಶ. 1247 ರ ದಿನಾಂಕವನ್ನು ವೆಪ್ಪೂರ್ (ಆಧುನಿಕ ಬೇಗೂರು) ನಿವಾಸಿಯೊಬ್ಬರು ವೆಂಗಲೂರ್ ದೊಡ್ಡ ತೊಟ್ಟಿಯ ಕೆಳಗೆ ಭೂದಾನದ ಬಗ್ಗೆ ಮಾತನಾಡುತ್ತಾರೆ. ಇತರ ಶಾಸನಗಳು ಬಲ್ಲಾಳ III ಮತ್ತು ರಾಜೇಂದ್ರ ಚೋಳರ ಆಳ್ವಿಕೆಯಲ್ಲಿ ಮಾಡಿದಂತಹ ಇತರ ಭೂದಾನಗಳ ಬಗ್ಗೆಯೂ ಹೇಳುತ್ತವೆ. 1365 ರ ದಿನಾಂಕದ ಮತ್ತೊಂದು ಶಾಸನವು ತಾಮರೈಕ್ಕಿರೈ (ತಮಿಳಿನಲ್ಲಿ ಲೋಟಸ್ ಕೊಳದ ದಂಡೆ ಎಂದು ಅನುವಾದಿಸುತ್ತದೆ ಮತ್ತು ಪ್ರಸ್ತುತ ತಾವರೆಕೆರೆ ಉಪನಗರವನ್ನು ಉಲ್ಲೇಖಿಸುತ್ತದೆ
ಮಹಾ ಶಿವರಾತ್ರಿ : ಹಿಂದೂ ಕ್ಯಾಲೆಂಡರ್ನಲ್ಲಿ (ಅಂದರೆ, ಹಿಂದಿನ ಮತ್ತು ದಿನದ ರಾತ್ರಿ) ಮಾಘ (ಶಾಲಿವಾಹನ ಪ್ರಕಾರ) ಅಥವಾ ಫಾಲ್ಗುಣ (ವಿಕ್ರಮದ ಪ್ರಕಾರ) ಮಾಘ ಮಾಸದ ಕೃಷ್ಣ ಪಕ್ಷ (ಕ್ಷೀಣಿಸುತ್ತಿರುವ ಚಂದ್ರ) ನಲ್ಲಿ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಅಮಾವಾಸ್ಯೆ ಈ ದೇವಾಲಯದಲ್ಲಿ ಪ್ರತಿ ವರ್ಷ ಕಾರ್ತಿಕ ಸೋಮವಾರ, ಮಹಾಶಿವರಾತ್ರಿ ಬಹಳ ವಿಜ್ರಂಬಣೆಯಿಂದ ಜರುಗುತ್ತದೆ. ಸ್ವಯಂಬು” ಶಿವಲಿಂಗವನ್ನು ಹೊಂದಿದೆ ಅದರಲ್ಲಿ ಗರ್ಭಗುಡಿಯ ಶಿವಲಿಂಗವು ನೈಸರ್ಗಿಕ ಬಂಡೆಯ ರಚನೆಯಿಂದ ರೂಪಗೊಂಡಿದೆ.
ಪ್ರದೋಷಂ : ಪ್ರತಿ 15 ದಿನಗಳಿಗೊಮ್ಮೆ ಸಂಭವಿಸುತ್ತದೆ ಮತ್ತು ಶೈವರಿಂದ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ, ಇದು ಅಮವಾಸ್ಯೆ (ಕಪ್ಪು ಚಂದ್ರನ) ಅಥವಾ ಪೂರ್ಣಿಮಾ (ಹುಣ್ಣಿಮೆಯ ದಿನ) ಸುಮಾರು 2 ದಿನಗಳ ಮೊದಲು ಸಂಭವಿಸುತ್ತದೆ ಬರುವಂತ ಭಕ್ತಾದಿಗಳು ಅನೇಕ ಕೋರಿಕೆಗಳ ಮೇರೆಗೆ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಅದರಲ್ಲಿ ವಿಶೇಷವಾಗಿ ಇರ್ತಕ್ಕಂತಹ ರುದ್ರಾಭಿಷೇಕವನ್ನು ಅನಾರೋಗ್ಯದ ಕಾರಣ ಅಥವಾ ಸಂತಾನ ಕಂಕಣ ಭಾಗ್ಯ ಹಾಗೂ ಉದ್ಯೋಗ ಪ್ರಾಪ್ತಿಗಾಗಿ ಭಗವಂತನಲ್ಲಿ ರುದ್ರಾಭಿಷೇಕವನ್ನು ನೆರವೇರಿಸಿ ದ್ದರೆ ಅವರ ಇಷ್ಟಾರ್ಥ ನೆರವೇರುತ್ತದೆ
ಮಡಿವಾಳ ಸೋಮೇಶ್ವರ ದೇವಾಲಯವು ಹಲವು ಮೂರ್ತಿಗಳನ್ನು ಹೊಂದಿದೆ ಹೊರಾಂಗಣ ಪ್ರಾಕಾರದಲ್ಲಿ ಪ್ರಥಮ ಪವನ್ ಪ್ರಥಮ ಗಣಪತಿ ದಕ್ಶಿಣಾಮೂರ್ತಿ ಶ್ರೀನಿವಾಸಮೂರ್ತಿ ಚಂಡಿಕೇಶ್ವರ ಚತುರ್ಮುಖ ಬ್ರಹ್ಮ ಮಹೇಶ್ವರಮ್ಮ ಹಾಗೂ ಗರ್ಭಗುಡಿಗಳ ಮಹಾಗಣಪತಿ ಸುಬ್ರಹ್ಮಣ್ಯಸ್ವಾಮಿ ಕಾಲಭೈರವ ಅನ್ನಪೂರ್ಣೇಶ್ವರಿ ಪಾರ್ವತಿ ದೇವಿಯನ್ನು ಒಳಗೊಂಡಿದೆ ಇವುಗಳ ಮಧ್ಯಭಾಗದಲ್ಲಿ ಇರ್ತಕ್ಕಂತಹ ಸಾಸಿವೆ ಗಣಪತಿ
ಕುಕ್ಲಮ್ಮ ಸೂರ್ಯ ನಾರಾಯಣ ಸ್ವಾಮಿಯ ವಿಗ್ರಹಗಳನ್ನು ನೋಡಬಹುದು ಹಾಗೂ ದೇವಾಲಯದ ಹೊರಾಂಗಣದಲ್ಲಿ ಇರ್ತಕ್ಕಂತಹ ಶ್ರೀ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ಹಾಗೂ ನಾಗದೇವತೆಗಳನ್ನು ಪ್ರತಿಷ್ಠಾಪಿಸಲಾಗಿದೆ ವಿಶೇಷವಾಗಿ ಮಹಾಗಣಪತಿ ಕಾಲಭೈರವ ದಕ್ಷಿಣಾಮೂರ್ತಿ ಸುಬ್ರಹ್ಮಣ್ಯಸ್ವಾಮಿ ಹಾಗೂ ಕುಕ್ಕಲಮ್ಮ ದೇವಿ ಮಹಾಗಣಪತಿ ಸಂಕಷ್ಟಹರ ಚತುರ್ಥಿಯಂದು ವಿಘ್ನಗಳ ನಿವಾರಕ ನೆಂದು ಗರಿಕೆಯನ್ನು ಇಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ ಕಾಲಭೈರವನಿಗೆ ಅಷ್ಟಮಿಯಂದು ಅಮಾವಾಸ್ಯೆ ದಿನದಂದು ಬೂದುಗುಂಬಳ ಹಾಗಲಕಾಯಿ ಹಾಗೂ ನಾರಿಕೇಳ ಅಂದರೆ ತೆಂಗಿನ ಕಾಯಿಗಳಿಂದ ವಿವಿಧ ಬಣ್ಣದ ಬತ್ತಿಗಳನ್ನು ಮಾಡಿ ದೀಪ ಬೆಳಗುತ್ತಾರೆ ಇದರಿಂದ ತಮಗೆ ಇರುವಂತಹ ಸಾಲಬಾಧೆ ಶತ್ರು ನಾಶ ಸ್ಥಳದ ತಕರಾರು ಕೋರ್ಟಿನ ತಕರಾರು ಹೀಗೆ ಹಲವಾರು ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುತ್ತಾರೆ.
ದಕ್ಷಿಣಾಮೂರ್ತಿ ದೇವರನ್ನು ನವಗ್ರಹಗಳ ಗುರುಗ್ರಹವೆಂತಲೂ ಗುರುವಾರದಂದು ಕಡಲೆಕಾಳಿನ ಹಾರವನ್ನು ಸ್ವಾಮಿಗೆ ಸಮರ್ಪಿಸಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಕಂಕಣಭಾಗ್ಯ ಉದ್ಯೋಗ ಪ್ರಾಪ್ತಿಗಾಗಿ ಸ್ವಾಮಿಯಲ್ಲಿ ಸಮರ್ಪಿಸುತ್ತಾರೆ
ಕುಕ್ಕಲ ಮಾದೇವಿಯನ್ನು ಮಕ್ಕಳಿಗೆ ಅಥವಾ ಹಿರಿಯರಿಗೆ ದೊಡ್ಡವರಿಗೆ ಮಧ್ಯಮದವರಿಗೆ ಬರತಕ್ಕಂತ ನಾಯಿಕೆಮ್ಮು ಎನ್ನುವ ಕೆಮ್ಮಿನಿಂದ ಆಗುವ ತೊಂದರೆಯನ್ನು ನಿವಾರಿಸಲೆಂದು ಕುಕ್ಕಲು ದೇವಿಗೆ ಪ್ರಾರ್ಥನೆ ಸಲ್ಲಿಸಿ ಅಭಿಷೇಕವನ್ನು ನೆರವೇರಿಸುತ್ತಾರೆ .
ಪೂಜೆಗೆ ಸಂಬಂಧಪಟ್ಟಂತೆ ಪ್ರತಿನಿತ್ಯವೂ ಪ್ರಾತ ಕಾಲದಲ್ಲಿ ಸ್ವಾಮಿಗೆ ಫಲಪಂಚಾಮೃತ ಏಕವಾರುದ್ರಾಭಿಷೇಕ ನೆರವೇರುತ್ತದೆ ಹಾಗೂ ವಿಶೇಷ ದಿನಗಳಾದ ಸೋಮವಾರ ಹಾಗೂ ಹದಿನೈದು ದಿವಸಕ್ಕೆ ತರುವಂತಹ ಹುಣ್ಣಿಮೆಯ ದಿನ ಮುಂಚಿತ ಅಮಾವಸ್ಯೆಯ ದಿನ ಮುಂಚಿತ ತ್ರಯೋದಶಿಯಂದು ಪ್ರದೋಷಕಾಲದಲ್ಲಿ ಸ್ವಾಮಿಗೆ ಸಾಯಂಕಾಲದಲ್ಲಿ ಅಂದರೆ ಪ್ರದೋಷ ಸಮಯದಲ್ಲಿ ಸ್ವಾಮಿಗೆ ವಿಶೇಷವಾಗಿ ಮೊದಲಿಗೆ ನಂದಿಗೆ ಕ್ಷೀರಾಭಿಷೇಕ ನೆರವೇರುತ್ತದೆ ತದನಂತರದಲ್ಲಿ ಮೂಲ ವಿರಾಟ್ ಸೋಮೇಶ್ವರಸ್ವಾಮಿಗೆ ಫಲ ಪಂಚಾಮೃತ ಹಾಲು ಮೊಸರು ತುಪ್ಪ ಜೇನುತುಪ್ಪ ಸಕ್ಕರೆ ಇವುಗಳಿಂದ ಪಂಚ ಫಲಗಳಿಂದ ಅಭಿಷೇಕ ನೆರವೇರಿಸಿ ತದನಂತರದಲ್ಲಿ ಏಕವಾರ ರುದ್ರಾಭಿಷೇಕವನ್ನು ನೆರವೇರಿಸಲಾಗುತ್ತದೆ. ನವರಾತ್ರಿಗಳಲ್ಲಿ 9ದಿನಗಳು ಅಥವಾ ಹತ್ತು ದಿನಗಳ ಕಾಲ ಶಿವ ಹಾಗೂ ಪಾರ್ವತಿಯ ಉತ್ಸವಮೂರ್ತಿಗಳನ್ನು ಪಟ್ಟಕ್ಕೆ ಕೂರಿಸಿ ಪ್ರತಿ ದಿನ 9ದಿನ ಹತ್ತು ದಿನಗಳ ಕಾಲ ಪ್ರಾತಕಾಲ ಹಾಗೂ ಸಾಯಂಕಾಲಗಳಲ್ಲಿ ಷೋಡಶೋಪಚಾರ ಪೂಜೆ ನೆರವೇರುತ್ತಿದೆ ಕೊನೆ ದಿನ ಹೊಸದೊಂದು ವಿಜಯದಶಮಿಯಂದು ದೇವಾಲಯದ ಹೊರಾಂಗಣದಲ್ಲಿ ಶಮಿ ಪೂಜೆ ನೆರವೇರಿಸಲಾಗುತ್ತದೆ .ಹಾಗೂ ದಕ್ಷಿಣಾಯಣ ಶರತ್ ಋತು ವಿನಲ್ಲಿ ಬರುವ ಕಾರ್ತಿಕ ಮಾಸದ 1ತಿಂಗಳ ಪೂರ್ತಿ ಸ್ವಾಮಿಗೆ ವಿಶೇಷವಾಗಿ ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ವಿಶೇಷವಾದಂಥ ಪೂಜೆ ಕೈಂಕರ್ಯಗಳು ನೆರವೇರುತ್ತದೆ .ಕಾರ್ತಿಕ ಮಾಸ ಮಧ್ಯಮದಲ್ಲಿ ಅಥವ ತದನಂತರ ಮಾಸ್ದಲ್ಲಿ ಬರುವ ಶಿವದಿೀಪವು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು .
ಶಿಶಿರ ಋತು ಮಾಘ ಮಾಸದಲ್ಲಿ ಬರತಕ್ಕಂತಹ ಮಹಾಶಿವರಾತ್ರಿಯು ಇಲ್ಲಿನ 1ದೊಡ್ಡ ಜಾತ್ರೆಯೇ ಎಂದು ಹೇಳಬಹುದು. ದೇವಾಲಯವು ನಗರದ ದಕ್ಷಿಣ ಭಾಗದ ಬೊಮ್ಮನಹಳ್ಳಿ ತಾವರೆ ಕೆರೆಯ ಮಧ್ಯಭಾಗದ ಮಡಿವಾಳದಲ್ಲಿ ನೆಲೆಯಾಗಿದೆ. ಗಂಗರು ಹೊಯ್ಸಳರು ಚೋಳರು ಪ್ರತಿಷ್ಠಾಪಿಸಿದರು ಎಂಬ ಶಿಲಾಶಾಸನವಿದೆ ಆದರೆ ದೇವಾಲಯವು ಶಿಥಿಲಗೊಂಡ 1992 ರಲ್ಲಿ ಊರಿನ ಗ್ರಾಮಸ್ಥರು ಹಾಗೂ ಊರಿನ ಮುಖಂಡರು ಗಳು ಸೇರಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುತ್ತಾರೆ .
ದೇವಾಲಯದ ಹೊರಭಾಗದಲ್ಲಿ ಗರ್ಭ ಗುಡಿಯ ಗೋಡೆಗಳ ಮೇಲೆ ತಮಿಳು ಅಕ್ಷರಗಳಿಂದ ಕೂಡಿದ . ಶಾಸನವು ಕಂಡುಬರುತ್ತದೆ .ದೇವಾಲಯದ ಗರ್ಭಗುಡಿಯ ಅಂದರೆ ಸುಕನಾಸಿಯ ಹಿಂಭಾಗದಲ್ಲಿ ಅರ್ಧಮಂಟಪ 4ಕಂಬಗಳಿದ್ದು ಅದರಲ್ಲಿ ಬೇಡರ ಕಣ್ಣಪ್ಪ ಹಾಗೂ ಜ್ವಾಲಾ ನರಸಿಂಹ ಉಗ್ರ ನರಸಿಂಹ ಮತ್ತು ಯೋಗನರಸಿಂಹ ಬೆಣ್ಣೆಯನ್ನು ಕಡಿಯುವ ಚಿತ್ರಣ ಹುಲಿ ಹಾಗೂ ಆನೆ ಕದನದ ಚಿತ್ರಣ ಬೇಟೆಗಾರರ ಕೆತ್ತನೆಗಳು ಕಂಡುಬರುತ್ತದೆ .
ಪ್ರತಿ ಸೋಮವಾರದಂದು ರುದ್ರಾಭಿಷೇಕ ಮಾಡಿಸುವುದರಿಂದ ಮನೆಯಲ್ಲಿರುವ ಕಷ್ಟಕಾರ್ಪಣ್ಯಗಳು ಸಾಲಬಾಧೆ ಅನಾರೋಗ್ಯ ವೈವಾಹಿಕ ಜೀವನದ ಕಲಹಗಳು ದೂರವಾಗುತ್ತದೆ . ಪ್ರತಿ ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ ಪಂಚಾಮೃತ ಅಭಿಷೇಕ ಮಾಡಿ ತೊಗರಿ ಬೇಳೆಯನ್ನು ದಾನವಾಗಿ ನೀಡಿದ್ದಲ್ಲಿ ಸಂತಾನಭಾಗ್ಯ ಕಂಕಣಭಾಗ್ಯ ಉದ್ಯೋಗ ಪ್ರಾಪ್ತಿಯಾಗುತ್ತದೆ .ಅಷ್ಟಮಿಯಂದು ಕಾಲಭೈರವ ಸ್ವಾಮಿಗೆ ಕುಂಬಳ ಕಾಯಿ ಹಾಗಲಕಾಯಿ ತೆಂಗಿನಕಾಯಿಯಲ್ಲಿ ದೀಪ ಬೆಳಗುವುದರಿಂದ ಶತ್ರುನಾಶ ಸಾಲಬಾಧೆ ಆರ್ಥಿಕ ಸಮಸ್ಯೆ ಭೂಮಿಯ ವಿಚಾರಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ.