Screen Reader Access                 A-  A  A+ 
ಶ್ರೀ ದತ್ತ ಸಂಸ್ಥಾನ ಪಂತಬಾಳೇಕುಂದ್ರಿ ಸಂಸ್ಥೆಯ ಪಂತಮಂದಿರ, ಬೆಳಗಾವಿ - 591103, ಬೆಳಗಾವಿ .
Sri Datta Sansthan Pantbalekundri Trusts Pantmandir, Belagavi - 591103, Belagavi District [TM000225]
×
Temple History

ಇತಿಹಾಸ

ಶ್ರೀ ಕ್ಷೇತ್ರ ಪಂತ ಬಾಳೇಕುಂದ್ರಿಯು, ಶ್ರೀ ಪಂತ ಮಹಾರಾಜ ಎಂಬ ದತ್ತಾವತಾರಿ, ಪ್ರೇಮಾವತಾರಿ ಸಂತರ ಸಮಾಧಿ ಸ್ಥಾನವಾಗಿರುತ್ತದೆ. ಇವರ ಕಾರ್ಯಕಾಲವು ಇ.ಸ 1855 ರಿಂದ 1905 ರ ಕೇವಲ 50 ವರ್ಷ ಅವರ ಆಯುಷ್ಯಮಾನವಿದ್ದಿತು. ದಿನಾಂಕ 03-09-1855 ಶ್ರಾವಣ ಮಾಸದ ಅಷ್ಟಮಿ ತಿಥಿ ಅಂದರೆ, ಗೋಕಲಾಷ್ಠಮಿ, ಶ್ರೀಕೃಷ್ಣನ ಜನ್ಮದಿನದಂದು ರೋಹಿನಿ ನಕ್ಷತ್ರದ ಶುಭ ಮೂಹುರ್ತದಲ್ಲಿ ಇವರ ಜನನವಾಯಿತು. ಇವರ ಪೂರ್ವಜರು ತಪಸ್ಸು ಮಾಡಿ ಶ್ರೀ ದತ್ತಾತ್ರೇಯರಿಂದ ಪಡೆದ ಫಲವಾಗಿ ಜನ್ಮತ ಪ್ರಣ್ಯಂಶವನ್ನು ಪಡೆದುಕೊಂಡ ದತ್ತ ಪ್ರಾಸಾದಿಕರು ಇವರಾಗಿದ್ದರು. ಜಗತ್ತಿನಲ್ಲಿ ಗುರುಗಳನ್ನು ಹುಡುಕಿಕೊಂಡು ಶಿಷ್ಯರು ಹೋಗುವ ವಾಡಿಕೆ ಇದೆ. ಆದರೆ ಈ ಪದ್ದತಿಗೆ ವ್ಯತರಿಕ್ತವಾಗಿ ಪೂರ್ವ ನೀಯೊಜಿನೆಯ ಭಗವತ ಸಂಕೆತದಂತೆ, ಇವರ ಗುರುಗಳಾದ ಅವಧೂತ ಸಂಪ್ರದಾಯದ ಅದ್ವರ್ಯುಗಳೆನಿಸಿದ ಶ್ರೀ ಸದ್ಗುರು ಪರಮಹಂಸರಾದ ಬಾಲಾವಧೂತರು ಶ್ರೀ ಪಂತ...