ಶ್ರೀ ಚನ್ನಕೇಶವಸ್ವಾಮಿ ದೇವಾಲಯ ಬಾಳೆಹೊಳೆ, Kalasa - 577124, ಚಿಕ್ಕಮಗಳೂರು .
Sri Channakeshava Swamy Temple Balehole, Chikkamagaluru - 577124, Chikkamagaluru District [TM000236]
×
Temple History
ಇತಿಹಾಸ
ಶ್ರೀ ಚನ್ನಕೇಶವ ದೇವಾಲಯವು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕು, ಬಾಳೆಹೊಳೆ ಎಂಬ ಗ್ರಾಮದ ಪ್ರಕೃತಿ ಮಡಿಲಿನ ಭದ್ರಾ ನದಿ ತಟದಲ್ಲಿ ಇರುತ್ತದೆ. ಈ ದೇವಾಲಯವು ಸುಮಾರು 300 ವರ್ಷಗಳ ಇತಿಹಾಸ ಹೊಂದಿರುತ್ತದೆ ಅದರೆ ನಿಖರವಾದ ವರ್ಷಗಳು ಮತ್ತು ದೇವಾಲಯದ ಇತಿಹಾಸದ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ.
ಈ ದೇವಾಲಯದಲ್ಲಿ ಪ್ರತಿ ನಿತ್ಯ ಹಣ್ಣುಕಾಯಿ ಸೇವೆ, ಕ್ಷೀರಾಭಿಷೇಕ, ಅಷ್ಟೋತ್ತರ ಅರ್ಚನೆ, ನಂದಾದೀಪ ಮತ್ತು ಅಮ್ಮನವರಲ್ಲಿ ಎಡೆಪೂಜೆ ಸೇವೆಗಳು ನಡೆಯುತ್ತವೆ, ದೇವಾಲಯಕ್ಕೆ ಹೊಂದಿಕೊಂಡಂತೆ ಎಡಭಾಗದಲ್ಲಿ ಶ್ರೀ ದುರ್ಗಾಮ್ಮನವರ ದೇವಾಲಯ ಮತ್ತು ಬಲಭಾಗದಲ್ಲಿ ಗಣಪತಿ ಹಾಗೂ ನಾಗದೇವರ ದೇವಾಲಯವಿರುತ್ತದೆ. ಪ್ರತಿ ವರ್ಷ ಜನವರಿ ಮಾಹೆಯ ಪುಷ್ಯ ಶುದ್ಧ ಪಾಡ್ಯ ಮಧ್ಯಹ್ನ ಅಭಿಜಿನ್ ಮುಹೂರ್ತದಲ್ಲಿ ಶ್ರೀಮನ್ ಮಹಾರಥೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ದೇವಾಲಯಕ್ಕೆ ಬಂದು...ಶ್ರೀ ಚನ್ನಕೇಶವ ದೇವಾಲಯವು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕು, ಬಾಳೆಹೊಳೆ ಎಂಬ ಗ್ರಾಮದ ಪ್ರಕೃತಿ ಮಡಿಲಿನ ಭದ್ರಾ ನದಿ ತಟದಲ್ಲಿ ಇರುತ್ತದೆ. ಈ ದೇವಾಲಯವು ಸುಮಾರು 300 ವರ್ಷಗಳ ಇತಿಹಾಸ ಹೊಂದಿರುತ್ತದೆ ಅದರೆ ನಿಖರವಾದ ವರ್ಷಗಳು ಮತ್ತು ದೇವಾಲಯದ ಇತಿಹಾಸದ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ.
ಈ ದೇವಾಲಯದಲ್ಲಿ ಪ್ರತಿ ನಿತ್ಯ ಹಣ್ಣುಕಾಯಿ ಸೇವೆ, ಕ್ಷೀರಾಭಿಷೇಕ, ಅಷ್ಟೋತ್ತರ ಅರ್ಚನೆ, ನಂದಾದೀಪ ಮತ್ತು ಅಮ್ಮನವರಲ್ಲಿ ಎಡೆಪೂಜೆ ಸೇವೆಗಳು ನಡೆಯುತ್ತವೆ, ದೇವಾಲಯಕ್ಕೆ ಹೊಂದಿಕೊಂಡಂತೆ ಎಡಭಾಗದಲ್ಲಿ ಶ್ರೀ ದುರ್ಗಾಮ್ಮನವರ ದೇವಾಲಯ ಮತ್ತು ಬಲಭಾಗದಲ್ಲಿ ಗಣಪತಿ ಹಾಗೂ ನಾಗದೇವರ ದೇವಾಲಯವಿರುತ್ತದೆ. ಪ್ರತಿ ವರ್ಷ ಜನವರಿ ಮಾಹೆಯ ಪುಷ್ಯ ಶುದ್ಧ ಪಾಡ್ಯ ಮಧ್ಯಹ್ನ ಅಭಿಜಿನ್ ಮುಹೂರ್ತದಲ್ಲಿ ಶ್ರೀಮನ್ ಮಹಾರಥೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ದೇವಾಲಯಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು ಹಣ್ಣು ಕಾಯಿ ಮಾಡಿಸಿ ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ.
ಶ್ರೀ ಚನ್ನಕೇಶವ ಸ್ವಾಮಿಯವರ ಸನ್ನಿಧಿಯಲ್ಲಿ ಜನವರಿ ಮಾಹೆಯಲ್ಲಿ ಶ್ರೀ ದುರ್ಗಾಮ್ಮನವರಿಗೆ ಚಂಡಿಕಾ ಹೋಮ ಹಾಗೂ ಅದೇ ದಿನ ರಾತ್ರಿ ಕೆಂಡದಾರ್ಚನೆ ಕಾರ್ಯಕ್ರಮ ನಡೆದುಕೊಂಡು ಬರುವುದು ವಾಡಿಕೆಯಾಗಿರುತ್ತದೆ. ನವರಾತ್ರಿ ಸಂದರ್ಭದಲ್ಲಿ ಪ್ರತಿ ದಿನ ಶ್ರೀ ದುರ್ಗಾಮ್ಮನವರ ಸನ್ನಿಧಿಯಲ್ಲಿ ಚಂಡಿಕಾ ಪಾರಾಯಣ ಕಾರ್ಯಕ್ರಮ ಇರುತ್ತದೆ.