Screen Reader Access                 A-  A  A+ 
ಶ್ರೀ ಆದಿ ಜನಾರ್ಧನ ದೇವಸ್ಥಾನ ಶಿಮಂತೂರು, ದಕ್ಷಿಣ ಕನ್ನಡ - 574154, ದಕ್ಷಿಣ ಕನ್ನಡ .
Sri Adi Janardhana Temple Shimanthoor, Dakshina Kannada - 574154, Dakshina Kannada District [TM000243]
×
Temple History

ಸ್ಥಳ ಪುರಾಣ

ಶ್ರೀ ಕ್ಷೇತ್ರ ಶಿಮಂತೂರಿನ ಶ್ರೀ ಆದಿಜನಾರ್ದನ ದೇವಾಲಯವು ಯಾವ ಕಾಲದಲ್ಲಿ ಅಥವಾ ಯಾವ ಶತಮಾನಕ್ಕೆ ಸೇರಿದ್ದು ಎಂಬುದನ್ನು ನಿಖರವಾಗಿ ಹೇಳಲು ಅಸಾಧ್ಯ. ಆದರೆ ಲಭ್ಯ ದಾಖಲೆಗಳು, ಸ್ಥಳ ಪುರಾಣ, ಜ್ಯೋತಿಷ್ಯ ಆಧಾರದ ಪುರಾವೆಗಳನ್ನೆಲ್ಲಾ ಅವಲೋಕನ ಮಾಡಿದಾಗ ಶ್ರೀ ಕ್ಷೇತ್ರವು ದಕ್ಷಿಣ ಭಾರತದಲ್ಲಿರುವ ಎಲ್ಲ ದೇವಾಲಯ ಅದರಲ್ಲೂ ವಿಷ್ಣು ದೇವಾಲಯಗಳಿಗಿಂತಲೂ ಅತೀ ಪುರಾತನವಾದ ಕ್ಷೇತ್ರವಾಗಿದೆ. ಇದಕ್ಕೆ ಪೂರಕವಾಗಿ ಹಲವಾರು ಪುರಾವೆಗಳನ್ನು ಕೊಡಬಹುದು. 1969ರಲ್ಲಿ ಶಿಮಂತೂರಿನ ಶ್ರೀ ಆದಿಜನಾರ್ದನ ಕ್ಷೇತ್ರದಲ್ಲಿ ಇಟ್ಟ ಅಷ್ಟಮಂಗಲ ಪ್ರಶ್ನೆಯ ಮುಖೇನ ಕೆ.ವಿ. ನಾರಾಯಣ ಪೊದುವಾಳರಿಂದ ತಿಳಿದು ಬಂದಿರುವ ವಿಷಯಗಳು ಈ ರೀತಿಯಲ್ಲಿದೆ. “ಚಿರಪುರಾತನವಾಗಿ ಯುಗಪ್ರಾಚೀನವಾದ ಶ್ರೀ ಆದಿಜನಾರ್ದನ ದೇವರನ್ನು ವೃಕ್ಷಲತಾದಿಗಳಿಂದ ನಿಬಿಡವಾದ ವಲಯಾಕೃತಿಯಲ್ಲಿರುವ ಪರ್ವತಗಳ ಮಧ್ಯದಲ್ಲಿರುವ ಪೀಠ ಭೂಮಿಯಲ್ಲಿ ಪ್ರದಕ್ಷಿಣೆ ಜಲೋಪೇತವಾದ ಕೃಷಿಕ್ಷೇತ್ರದ ಮದ್ಯದಲ್ಲಿ ನಿಧಿನಿಕ್ಷಿಪ್ತವಾದ ಪವಿತ್ರ ಸ್ಥಳದಲ್ಲಿ ಬಾರ್ಗವ ಋಷೀಶ್ವರರು...