ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಮಳಲಿ, ಹಾಸನ - 573220, ಹಾಸನ .
Sri Lakshmidevi Temple Malali, Hassan - 573220, Hassan District [TM000244]
×
Temple History
ಇತಿಹಾಸ
ಹಾಸನದಿಂದ ಚನ್ನರಾಯಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿನ ಶಾಂತಿ ಗ್ರಾಮದಿಂದ ದಕ್ಷಿಣಕ್ಕೆ ನಾಲ್ಕು ಮೈಲಿಗಳ ದೂರದಲ್ಲಿ ಮಳಲಿ ಗ್ರಾಮವಿದೆ. ಈ ಮಳಲಿಯಲ್ಲಿ ನೆಲೆಸಿರುವ ಗಿಡ್ಡಮ್ಮನೇ ಇಂದು ಪ್ರಸಿದ್ದಿಯನ್ನು ಪಡೆದಿರುವ ಮಳಲಿ ಗಿಡ್ಡಮ್ಮ. ಮಳಳಿ ಲಕ್ಷಿö್ಮÃದೇವಿ ದೇವರು.
ಶ್ರೀ.ಲಕ್ಷಿö್ಮÃದೇವಿ ಈ ದೇವಾಲಯವು ಚೋಳರ ಕಾಲವಾಗಿದ್ದು ಎಂಬುದು ತಿಳಿದುಬಂದಿರುತ್ತದೆ.ಚೋಳ ಅರಸರು ಲಕ್ಷಿö್ಮÃ ದೇವಿಯ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟು ಈ ಸ್ಥಳದಲ್ಲಿ ಲಕ್ಷಿö್ಮÃಯ ದೇವಾಲಯನ್ನು ನಿರ್ಮಿಸಿದನೆಂದು ತಿಳಿದು ಬಂದಿರುತ್ತದೆ.
ಚೋಳರು ರಾಜ್ಯವನ್ನು ವಿಸ್ತರಿಸಿ ರಾಜ್ಯವನ್ನು ಸುಭಿಕ್ಷವಾಗಿ ಇರಿಸಬೇಕೆಂದು ಶ್ರೀ.ಲಕ್ಷಿö್ಮÃದೇವಿಯಲ್ಲಿ ಪ್ರಾರ್ಥಿಸಿ ಅಪಾರವಾದ ಧನ ಶಕ್ತಿಯನ್ನು ಅನುಗ್ರಹಿಸಲೆಂದು ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬುದು ಇಲ್ಲಿಯ ಭಕ್ತರ ನಂಬಿಕೆ. ಶ್ರೀ.ಲಕ್ಷಿö್ಮÃದೇವಿ ದೇವಸ್ಥಾನವು ಉದ್ಬವ ಮೂರ್ತಿಯಾಗಿರುತ್ತದೆ. ಶ್ರೀ.ಲಕ್ಷಿö್ಮÃದೇವಿ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ದೇವಾಲಯದಲ್ಲಿ, ದೋಷ ಪ್ರದಾನದಲ್ಲಿ ,ಹರಿಕೆ ಪ್ರಧಾನ ,ದೇವಿಯಲ್ಲಿ...ಹಾಸನದಿಂದ ಚನ್ನರಾಯಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿನ ಶಾಂತಿ ಗ್ರಾಮದಿಂದ ದಕ್ಷಿಣಕ್ಕೆ ನಾಲ್ಕು ಮೈಲಿಗಳ ದೂರದಲ್ಲಿ ಮಳಲಿ ಗ್ರಾಮವಿದೆ. ಈ ಮಳಲಿಯಲ್ಲಿ ನೆಲೆಸಿರುವ ಗಿಡ್ಡಮ್ಮನೇ ಇಂದು ಪ್ರಸಿದ್ದಿಯನ್ನು ಪಡೆದಿರುವ ಮಳಲಿ ಗಿಡ್ಡಮ್ಮ. ಮಳಳಿ ಲಕ್ಷಿö್ಮÃದೇವಿ ದೇವರು.
ಶ್ರೀ.ಲಕ್ಷಿö್ಮÃದೇವಿ ಈ ದೇವಾಲಯವು ಚೋಳರ ಕಾಲವಾಗಿದ್ದು ಎಂಬುದು ತಿಳಿದುಬಂದಿರುತ್ತದೆ.ಚೋಳ ಅರಸರು ಲಕ್ಷಿö್ಮÃ ದೇವಿಯ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟು ಈ ಸ್ಥಳದಲ್ಲಿ ಲಕ್ಷಿö್ಮÃಯ ದೇವಾಲಯನ್ನು ನಿರ್ಮಿಸಿದನೆಂದು ತಿಳಿದು ಬಂದಿರುತ್ತದೆ.
ಚೋಳರು ರಾಜ್ಯವನ್ನು ವಿಸ್ತರಿಸಿ ರಾಜ್ಯವನ್ನು ಸುಭಿಕ್ಷವಾಗಿ ಇರಿಸಬೇಕೆಂದು ಶ್ರೀ.ಲಕ್ಷಿö್ಮÃದೇವಿಯಲ್ಲಿ ಪ್ರಾರ್ಥಿಸಿ ಅಪಾರವಾದ ಧನ ಶಕ್ತಿಯನ್ನು ಅನುಗ್ರಹಿಸಲೆಂದು ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬುದು ಇಲ್ಲಿಯ ಭಕ್ತರ ನಂಬಿಕೆ. ಶ್ರೀ.ಲಕ್ಷಿö್ಮÃದೇವಿ ದೇವಸ್ಥಾನವು ಉದ್ಬವ ಮೂರ್ತಿಯಾಗಿರುತ್ತದೆ. ಶ್ರೀ.ಲಕ್ಷಿö್ಮÃದೇವಿ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ದೇವಾಲಯದಲ್ಲಿ, ದೋಷ ಪ್ರದಾನದಲ್ಲಿ ,ಹರಿಕೆ ಪ್ರಧಾನ ,ದೇವಿಯಲ್ಲಿ ಹೂ ಕೋರಿಕೆ, ಹಾಗೂ ಮನಸ್ಸಿನಿಂದ ಕೋರಿಕೊಳ್ಳುವ ಹರಿಕೆ ನೆರೆವೇರುತ್ತದೆ. ಹಾಗೂ ಬಲಿ ನೈವೇಧ್ಯ ,ದೇವಿಗೆ ಸೀರೆ,ಒಡವೆ ,ನಾಣ್ಯ ಇವುಗಳನ್ನು ಒಪ್ಪಿಸುವುದಾಗಿ ಹರಿಕೆ ಮಾಡಿಕೊಂಡಲ್ಲಿ ಕೋರಿಕೆಯೂ ಈಡೇರುವುದು ಎಂಬುದು ಭಕ್ತಾಧಿಕಗಳ ಹೇಳಿಕೆ.
ಶ್ರೀ.ಲಕ್ಷಿö್ಮÃದೇವಿ ದೇವಾಲಯದಲ್ಲಿ, ವಿಶೇಷ ಅರ್ಚನೆಗಳು, ಕುಂಕುಮಾರ್ಚನೆ, ಅಭಿಷೇಕ, ಅಶ್ವರೋಹಣೋತ್ಸವ, ಇತ್ಯಾಧಿ. ದೇವಾಲಯವು ಗ್ರಾಮದ ಮಧ್ಯದಲ್ಲಿದ್ದು ಗರ್ಭಗುಡಿ ಶುಕನಾಸಿ ಮಧ್ಯರಂಗ ಮುಖಮಂಟಪವನ್ನು ಹೊಂದಿರುತ್ತದೆ.ಚೋಳ ಅರಸರ ಆನಂತರದಲ್ಲಿ ಅನೇಕ ಪಾಳೇಗಾರರು ಆಳಿ ದೇವಾಲಯವನ್ನು ಹಂತ ಹಂತವಾಗಿ ಜೀರ್ಣೋದ್ದಾರಗೊಳಿಸಿ ಪೂಜೆಯನ್ನು ನಡೆಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಿರುತ್ತಾರೆ ಎಂದು ಹಿಂದಿನಿAದಲೂ ಭಕ್ತರು ಹೇಳುತ್ತಿರುವ ವಾಕ್ಯಗಳೇ ಆಗಿವೆ. ಶ್ರೀ.ಲಕ್ಷಿö್ಮÃದೇವಿ ದೇವರ ಮೂಲ ಮೂರ್ತಿ ಉದ್ಬವಮೂರ್ತಿಯಾಗಿದ್ದು ಲಿಂಗಾಕೃತಿಯಲ್ಲಿರುತ್ತದೆ ಇದರ ಮುಂದೆ ಶಿಲೆಯಲ್ಲಿ ಶ್ರೀ,ಲಕ್ಷಿö್ಮಅಮ್ಮನವರ ಶಿಲ್ಪಿಯೂ ಕೆತ್ತಿ ಪ್ರತಿಸ್ಟಾ ಮೂರ್ತಿ ದುರ್ಗಿಯ ರೂಪವಾಗಿದ್ದು ಶಕ್ತಿದೇವತೆಯೆಂದು ಪ್ರತಿಷ್ಟಾಮೂರ್ತಿಯು ಶ್ರಿ.ಮಹಾಲಕ್ಷಿö್ಮÃಯ ಸ್ವರೂಪವೆಂದು ಈ ದೇವಾಲಯದಲ್ಲಿನ ವಿಶೇಷತೆ.
ಶ್ರೀ.ಲಕ್ಷಿö್ಮÃದೇವಿ ದೇವಾಲಯದಲ್ಲಿ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಜೊತೆಗೆ ಪಂಚಶುಷ್ಕ ಫಲಗಳಾದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಖರ್ಜೂರ, ಪಿಸ್ತ, ಈ ದ್ರವ್ಯಗಳನ್ನು ಪುಡಿಮಾಡಿ ಬೆಲ್ಲದ ಪುಡಿಯ ಜೊತೆಯಲ್ಲಿ ಮಿಶ್ರಣ ಮಾಡಿ ಈ ಮೂರ್ತಿಗೆ ಮೆತ್ತಿ ಪೂಜಿಸುವ ಒಂದು ವಿಶೇಷತೆ. ದೇವಾಲಯದಲ್ಲಿ ಭಕ್ತರಲ್ಲಿ ಯಾವುದಾದರೂ ಧೈಹಿಕವಾಗಿ ನೋವಿದ್ದಲ್ಲಿ ನೋವಿನ ನಿವಾರಣೆ,ಮತ್ತು ಇತರೆ ಕೋರಿಕೆ ನೆರೆವೇರಿಕೆಗಾಗಿ ತುಂಬಿದ ಬಿಂದಿಗೆಯನ್ನು ದೇವಿಯ ಬಳಿ ಪ್ರಾರ್ಥಿಸಿ ಮಡಿ ನೀರಿನ ಪ್ರೋಕ್ಷಣೆ ಮಾಡಿ ಪ್ರದಕ್ಷಣೆ ಮಾಡಿಸುವುದು ಈ ದೆವಾಲಯದ ಪದ್ದತಿಯಾಗಿರುತ್ತದೆ.
ಶ್ರೀ.ಲಕ್ಷಿö್ಮÃದೇವಿ ದೇವಾಲಯದಲ್ಲಿನ ಮುಖ್ಯದ್ವಾರದ ಮುಂಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಿಸಿ ವಾಹನಗಳನ್ನು ಪೂಜೆಮಾಡಿಸುವುದರಿಂದ ವಾಹನಗಳಿಗ ಯಾವುದೇ ದೃಷ್ಟಿದೋಷ ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿರುತ್ತದೆ.
ಮಾದರಹಳ್ಳಿಗೆ ಮಳಲಿಯಮ್ಮ ಬಂದುದರಿAದ “ಮಳಲಿ” ಎಂದು ಹೆಸರು ಬಂತು ಏಕೆ ಬಂತು, ಹೇಗೆ ಬಂತು ಎಂಬ ಬಗ್ಗೆ ಸದರಿ ಗ್ರಾಮದ ಹುಚ್ಚಜ್ಜಿಯವರು ಈ ರೀತಿ ಹೇಳುತ್ತಾರೆ.
ಒಂದು ರಾತ್ರಿ ವಿಜಯನಗರದ ಒಬ್ಬ ಸಾಹುಕಾರ ಗೌಡನ ಮನೆಗೆ ಮೂರು ಜನ ಕಳ್ಳರು ನುಗ್ಗಿದ್ದರು. ಮೂರು ಜನರಿಗೂ ಮೂರು ಪೆಟ್ಟಿಗೆಗಳು ಸಿಕ್ಕಿದ್ದವು. ಅವರು ಮೋದಲೆ ಮಾಡಿಕೊಂಡಿದ್ದ ಕರಾರಿನಂತೆ ಆ ಮೂರು ಪೆಟ್ಟಿಗೆಗಳನ್ನು ಮಳಲಿಯ ಹೆಬ್ಬಳ್ಳದ ಆಚೆಯಲ್ಲಿರುವ ಮೆÄಳ್ಳಳ್ಳಿ ಎಂಬ ಊರಿನ ಬಳಿ ಒಡೆದಾಗಿ ಒಂದರಲ್ಲಿ ವರ ಹೊನ್ನು, ಇನ್ನೊಂದರಲ್ಲಿ ಆಭರಣಗಳು, ಮತ್ತೊಂದರಲ್ಲಿ ಮಳಲಿಯಮ್ಮನ ವಿಗ್ರಹವು ದೊರೆಯುತ್ತದೆ. ವಿಗ್ರಹ ದೊರೆತ ಕಳ್ಳ ಬೇಸರದಿಂದ ಅದನ್ನು ಅಲ್ಲಿಯ ಯಗಚಿ ಗುತ್ತಿಯ ಬಳಿ ಎಸೆದು ಹೋಗುತ್ತಾನೆ. ಮಾರನೆಯ ದಿನ ಬೆಳಿಗ್ಗೆ ಅಲ್ಲಿ ಹುತ್ತ ಬೆಳೆದಿರುತ್ತದೆ. ಮಳಲಿಯಲ್ಲಿ ಈಗ ಮುನ್ನೂರು ಒಕ್ಕಲುಗಳಿವೆ. ಅವುಗಳಲ್ಲಿ ಸುಮಾರು ಒಕ್ಕಲುಗಳು ಕಂಚಿನ ತುಂಡಿನ ಕಲ್ಲು ಮಳಿಗೇಗೌಡನ ಮನೆಯಿಂದ ಮೂರ್ತಿ ಒಡೆದು ಬಂದವರಾಗಿದ್ದಾರೆ. ಮಳಲಿಗೆ ಕಂಚಿನ ತುಂಡಿನ ಕಲ್ಲು ಮಾಳಿಗೇಗೌಡನ ಮನೆಯೊಂದೇ ಕಲ್ಲಿನ ಮನೆಯಾಗಿದ್ದಿತಂತೆ. ಈ ಕಲ್ಲು ಮಾಳಿಗೇಗೌಡನ ಮನೆಯಲ್ಲಿ ಒಬ್ಬ ಆಳು ನಿತ್ಯವೂ ಅವರ ಮನೆಯಲ್ಲಿದ್ದ ಅಪಾರ ದನಗಳನ್ನು ಮೇಯಿಸಲು ಹೋಗುತ್ತಿರುವಾಗ ಒಂದು ಹಸು ನಿತ್ಯವೂ ಬಂದು ಮನೆಯಲ್ಲಿ ರಕ್ತವನ್ನು ಕರೆಯುತ್ತಿತ್ತಂತೆ. ಇದರಿಂದ ಮನೆಯವರಿಗೆ ಆಶ್ಚರ್ಯವಾಗುತ್ತಿತ್ತಲ್ಲದೆ ಹುಡುಗನಿಗೆ ಶಿಕ್ಷೆಯೂ ಆಗುತ್ತಿತ್ತು.
ಇದನ್ನು ಪರೀಕ್ಷಿಸಲು ಆ ಹುಡುಗನು ಆ ದಿನವೆಲ್ಲ ಹಸುವಿನ ಮೇಲೆ ಗಮನವಿಟ್ಟನು ಸುಮಾರು ಮೂರು ಗಂಟೆಯ ಹೊತ್ತಿಗೆ ಹಸು ತುಂಬಿ ಹರಿಯುವ ಹಳ್ಳವನ್ನು ಈಜ ತೊಡಗಿತು. ಆ ಹುಡುಗನೂ ಸಹ ಕಳ್ಳ ಎಸೆದಿದ್ದ ವಿಗ್ರಹವಿದ್ದ ಹುತ್ತಕ್ಕೆ ಹೋಗಿ ನಾಲ್ಕು ಮೊಲೆಗಳಿಂದಲೂ ಒಂದೇ ಬಾರಿಗೆ ಹಾಲು ಕರೆದು ಬರುತ್ತದೆ. ಇದನ್ನು ಹುಡುಗನನ್ನೇ ಪರೀಕ್ಷಿಸಲು ಬಂದಿದ್ದ ಸ್ವಯಂ ಕಲ್ಲು ಮಾಳಿಗೇಗೌಡನೇ ನೋಡುತ್ತಾನೆ.
ಅದೇ ದಿನ ರಾತ್ರಿ ಕಲ್ಲು ಮಾಳಿಗೆಗೌಡನ ಕನಸಿನಲ್ಲಿ ಆ ಹುತ್ತದಲ್ಲಿ ದೇವಿಯು ಕಾಣಿಸಿಕೊಂಡು ತಾನು ಮಳಲಿಯಮ್ಮನೆಂದು ವಿಜಯನಗರದಿಂದ ಬಂದವಳೆAದೂ ನಾಳೆ ಬಂದು ಮಾದರ ಹಳ್ಳಿಯಲ್ಲಿ ಗಿಡ್ಡಮ್ಮನೆಂಬ ಹೆಸರಿನಿಂದ ನೆಲಸುವನೆಂದು ಹೇಳಿದಳಂತೆ. ಅದಕ್ಕೆ ಕಲ್ಲು ಮಾಳಿಗೇಗೌಡನು ನೀನು ಬರುವುದಕ್ಕೆ ಸೂಚನೆ ಏನು ಎಂದು ಕೇಳಲು ನಿಮ್ಮೂರ ಹಿರಿಕೆರೆಯು ಏಳು ಕಡೆ ಒಡೆಯುವುದು ಎಂದಳAತೆ. ಮಾರನೆಯ ದಿನ ಬೆಳಿಗ್ಗೆ ಊರಿಗೆ ಊರೆ ದಿಗ್ಬçಮೆಗೊಂಡಿತAತೆ. ಹಿರಿಕೆರೆ ಏಳು ಕಡೆ ಏಳು ಭಾಗವಾಗಿ ಒಡೆದಿದ್ದು ಅಲ್ಲದೇ ದೇವಿ ಊರ ಹೊರಭಾಗದಲ್ಲಿ ದಕ್ಷಿಣ ದಿಕ್ಕಿನಲ್ಲಿ ಒಡೆದು ಮೂಡಿದಳಂತೆ. ಕೆರೆ ಒಡೆದ ಗುರುತು ಇಂದಿಗೂ ಇದೆ. ಇಲ್ಲಿ ಹಳ್ಳಿಗರು ದೇವಿಯನ್ನು ತಮ್ಮಂತೆಯೇ ಭಾವಿಸಿ ತಾವು ತೊಡುವ ಆಭರಣಗಳ್ನನ್ನು ಅವಳಿಗೂ ತೊಡಿಸಿ ವರ್ಣಿಸಿರುವುದು ಗಮನಾರ್ಹ. ದೇವಿ ಒಡ ಮೂಡಿದ ಘಟ್ಟದ ಕೆಳಗೆ ಮುತ್ತು ರತ್ನ ವ್ಯಾಪರಕ್ಕೆ ಹೊರಟಿದ್ದ ವ್ಯಾಪಾರಿಗಳು ಬಂದು ಅರಳೀಮರದ ಬಳಿ ತಮ್ಮ ಎತ್ತುಗಳನ್ನು ಕಟ್ಟಿಕೊಂಡು ವಿಶ್ರಾಂತಿ ತೆಗೆದುಕೊಂಡು ಮಾರನೆಯ ದಿನ ಹೊರಡಲನುವಾದಾಗ ಎತ್ತುಗಳು ಹೊಟ್ಟೆ ಊದಿಕೊಂಡು ಏಳಲಾರಲಾದವು. ವ್ಯಾಪಾರಿಗಳು ಗಾಬರಿಯಿಂದ ಊರಗೌಡನ ಬಳಿಗೆ ಹೋಗಲಾಗಿ ಅವನು ಶಾಸ್ತç ಕೇಳಲು ಸೂಚನೆ ಕೊಡುತ್ತಾನೆ.
ಅದೇ ಸಮಯಕ್ಕೆ ಊರ ಬೀದಿಯ ಕಡೆಯಿಂದ ಅಡ್ಡ ಕುಂಕುಮವನ್ನಿಟ್ಟುಕೊAಡು ತಲೆಯ ಮೇಲೆ ಚಿಕ್ಕ ಕುಕ್ಕೆಯನ್ನು ಹೊತ್ತುಕೊಂಡು ಕೊರವಂಜಿ ವೇಷದ ತೇಜಸ್ಸುವುಳ್ಳ ಹೆಂಗಸೊಬ್ಬಳು “ಯಾರಾದರು ಶಾಸ್ತç ಕೇಳುತ್ತೀರಾ ಎಂದು ಕೂಗುತ್ತಾ ಬರುತ್ತಾಳೆ. ವ್ಯಾಪಾರಿಗಳು ತಮ್ಮ ಕಷ್ಟವನ್ನು ಹೇಳಿ ಪರಿಹಾರ ಸೂಚಿಸಬೇಕೆಂದು ಕೇಳಿದರು. ಆಕೆಯು ಸಮೀಪದ ಹುತ್ತವನ್ನು ತೋರಿಸಿ ಅದರಲ್ಲಿ ಮಳಲಿಯಮ್ಮ ಎಂಬ ದೇವಿ ನೆಲಸಿದ್ದಾಳೆ. ಅವಳಿಗೊಂದು ಗುಡಿ ಕಟ್ಟಿಸುವುದಾದರೆ ನಿಮ್ಮ ಎತ್ತುಗಳು ಕಾಯಿಲೆಯಿಂದ ಗುಣವಾಗುವುದಲ್ಲದೆ ನಿಮ್ಮ ಮುತ್ತಿಗೂ ಒಳ್ಳೆ ಬೆಲೆ ಸಿಕ್ಕುತ್ತದೆ ಎಂದು ಹೇಳಿದವಳೇ ಕಣ್ಣಿಗೆ ಕಾಣಿಸದವಳಾಗುತ್ತಾಳೆ. ವ್ಯಾಪಾರಿಗಳು ಭಕ್ತಿಯಿಂದ ಅದೇ ರೀತಿಯಾಗಿ ಹರಕೆಯನ್ನು ಹೊರಲಾಗಿ ಎತ್ತುಗಳು ಕಾಯಿಲೆಯಿಂದ ಗುಣವಾಗುವುದಲ್ಲದೆ ಮುತ್ತು ರತ್ನಗಳ ಬೆಲೆಯೂ ಏರಿ ವ್ಯಾಪಾರದಲ್ಲಿ ಬಹಳ ಲಾಭವಾಗುತ್ತದೆ. ಅವರು ಆನಂದದಿAದ ಒಂದAಕಣದ ಗುಡಿಯನ್ನು ಒಂದೇ ದಿನದಲ್ಲಿ ಕಟ್ಟಿಸಿ ಹೋಗುತ್ತಾರೆ. ದೇವಾಲಯದ ಉಳಿದ ಭಾಗಗಳನನ್ನು ಕಂದಲಿಯವರು ಕಟ್ಟಿಸಿದರೆಂದೂ ಹೇಳುತ್ತಾರೆ. ಏನೇ ಇರಲಿ ಅಂದಿನಿAದ ಮಾದರಹಳ್ಳಿಗೆ ಮಳಲಿ ಎಂದು ಹೆಸರಾಗಿ ಮಳಲಿಯಮ್ಮನಿಗೆ ಗಿಡ್ಡಮ್ಮ ಎಂಬ ಹೆಸರಾಗಿ ಕೊನೆ ಕೊನೆಗೆ ಮಳಲಿ ಗಿಡ್ಡಮ್ಮ ಎಂದೂ ಕ್ಯಾಲಮ್ಮ ಎಂದೂ ಲಕ್ಷಿö್ಮÃ ಎಂದು ಕರೆಯುವುದು ರೂಡಿಯಲ್ಲಿತ್ತು.ಕ್ಯಾಲಮ್ಮ ಮಳಲಿಯಮ್ಮ ನಲ್ಲವೆಂದೂ ಅವಳು ಗಿಡ್ಡಮ್ಮನ ತಂಗಿ ಎಂದೂ ಮತ್ತೆ ಕೆಲವರು ಗಿಡ್ಡಮ್ಮನ ಮಗಳೆಂದು ಅಲ್ಲಲ್ಲ್ಲಿ ಅವಳು ಗಿಡ್ಡಮ್ಮನೇ ಅಹುದೆಂದೂ ವಾದಿಸುವುದು ನಮ್ಮೂರಿನಲ್ಲಿ ಇಂದೂ ವಾಡಿಕೆ ಇದೆ.