Screen Reader Access                 A-  A  A+ 
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಡ್ಯಾ, ದಕ್ಷಿಣ ಕನ್ನಡ - 575014, ದಕ್ಷಿಣ ಕನ್ನಡ .
Sri Mahalingeshwara Temple Idya, Dakshina Kannada - 575014, Dakshina Kannada District [TM000245]
×
Temple History

ಸ್ಥಳ ಪುರಾಣ

ವಿದ್ಯಾಧರ ಕ್ಷೇತ್ರ ಭಾರತ ದೇಶದಂತೆ ಕನ್ನಡ ಪ್ರದೇಶದಲ್ಲಿಯೂ ಹಲವೆಡ ಪುಣ್ಯ ಪುರುಷರ – ಮಹಾತ್ಮರ – ಆದಿವಾಸಿಗಳ ಪವಿತ್ರ ಕ್ಷೇತ್ರಗಳೆಂದು ಪೌರಾಣಿಕವಾಗಿ - ಚಾರಿತ್ರಿಕವಾಗಿ ಪ್ರಸಿದ್ದಗಳಾಗಿವೆ. ಇಡ್ಯಾ ದೇವಾಲಯ ಅಂತಹ ಪ್ರಾಚೀನ ಶೈವ ಕ್ಷೇತ್ರವಾಗಿ ಪರಿಗಣಿಸಲಾಗಿದೆ. ಕನ್ನಡದ “ಹುಲಿ” ಎಂಬಲ್ಲಿ “ವಿದ್ಯಾ ರಾಶಿ ಪಂಡಿತ” ನೆಂಬ ಶೈವ ಗುರುವಿನ ನೆಲೆಯಂತಿತ್ತು. ಹಾಗೆ ಬೇರೊಂದೆಡೆ “ಜ್ಞಾನ ರಾಶಿ” ಯೆಂಬ ಶೈವ ಪಂಡಿತನ ವಾಸವಿತ್ತು. ಅವರೆಲ್ಲರೂ ಕಾಳಾಮುಖ (ಪಾಶುಪತ)ವೆಂಬ ಶೈವ ವರ್ಗಕ್ಕೆ ಸೇರಿದ “ಗೊರವರು” ಅವರನ್ನು ಗೋರವರೆಂದು ಶಿಲಾ ಶಾಸನಗಳಲ್ಲಿ ಗೌರವದಿಂದ ಹೆಸರಿಸುತ್ತಾರೆ. (ಡಾ. ಎಂ. ಚಿದಾನಂದ ಮೂರ್ತಿ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ನೋಟ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆಯ ಶಿಲಾ ಶಾಸನಗಳಲ್ಲೂ “ಗೊರವರು” ಉತ್ತಮರಾಗಿದ್ದಾರೆ. ಇಡ್ಯಾ ಮಹಾಲಿಂಗೇಶ್ವರ ಲಿಂಗವು ಅಂತಹ ಶೈವ ಮುನಿ ವಿದ್ಯಾಧರ”...