Screen Reader Access                 A-  A  A+ 
ಶ್ರೀ ಹರಿಹರೇಶ್ವರ ಸ್ವಾಮಿ ದೇವಾಲಯ ಹರಿಹರ, ದಾವಣಗೆರೆ, ದಾವಣಗೆರೆ .
Sri Harihareshwara Swamy Temple Harihara, Davanagere, Davangere District [TM000260]
×
Temple History

ಇತಿಹಾಸ

ಶ್ರೀ ಹರಿಹರೇಶ್ವರಸ್ವಾಮಿಯ ದೇವಾಲಯವು, ಹರಿಹರನಗರದ ಮಧ್ಯಭಾಗದಲ್ಲಿದ್ದು, ಜಿಲ್ಲಾಡಳಿತ ಕೇಂದ್ರವಾದ ದಾವಣೆಗೆರೆಯಿಂದ 18 ಕಿ.ಮೀ. ದೂರದಲ್ಲಿದ್ದು, ಇಲ್ಲಿ ತುಂಗಾ ಭದ್ರ ನದಿಯು ಹರಿಯುತ್ತಿರುತ್ತದೆ. ಶ್ರೀ ಹರಿಹರೇಶ್ವರಸ್ವಾಮಿ ದೇವರ ಶಿರಸ್ಸಿನ ಅರ್ಧಭಾಗದಲ್ಲಿ ಎಂದರೆ ಬಲಗಡೆ ಅರ್ಧಚಂದ್ರ ಗಂಗೆ, ಜಟೆಗಳು ಕಾಣಬರುತ್ತದೆ. ಇವುಗಳ ಕೆಳಗೆ ಎಂದರೆ ಹಣೆಯ ಮೇಲ್ಭಾಗದಲ್ಲಿ ಸಾಲಿಗ್ರಾಮಗಳಿವೆ. ಶಿರಸ್ಸಿನ ಎಡಭಾಗದಲ್ಲಿ ಸಾಲಿಗ್ರಾಮಗಳಿವೆ. ಶಿರಸ್ಸಿನ ಎಡಭಾಗದಲ್ಲಿ ಕಿರೀಟ ವೃಕ್ಷಸ್ಥಳದಲ್ಲಿ ಶ್ರೀ ವತ್ಸವೆಂಬ ಮಚ್ಚೆಯು, ರುಂಡ ಮಾಲೆ, ವೈಜಯಂತಿ ಮಾಲೆಗಳೂ, ಯಜ್ಞೋಪವೀತ ನಾಗಭರಣಗಳು ಇವೆ. ಸ್ವಾಮಿಯ ಬಲಗೈಯಲ್ಲಿ ತ್ರಿಶೂಲ,ಅಭಯ ಹಸ್ತಗಳು ಎಡಗೈಯಲ್ಲಿ ಶಂಕ ಚಕ್ರಗಳು ವಿರಾಜಿಸುತ್ತಿವೆ. ಸ್ವಾಮಿ ಶಂಕರನನ್ನು ಧರಿಸಿರುವ ರೀತಿ ವಿಶಿಷ್ಟವಾಗಿದೆ. ಈ ರಿತಿಯ ಭಂಗಿ ಅಪರೂಪವೆಂದೆ ಹೇಳಬೇಕು. ಶ್ರೀ ದೇವಿಯರ ಬಲಗಡೆಯಲ್ಲಿ ಪಾರ್ವತಿ ಗಣಪತಿ ಹಾಗೂ ಎಡಗಡೆಯಲ್ಲಿ ಲಕ್ಷ್ಮೀ ಮತ್ತು ಋಷ್ಯಶೃಂಗರು ಇದ್ದಾರೆ. ಶ್ರೀ ಹರಿಹರೇಶ್ವರಸ್ವಾಮಿಯ...