ಶ್ರೀ ಏಳು ಹೆಡೆ ನಾಗಪ್ಪ ದೇವಸ್ಥಾನ ಬುಕ್ಕಸಾಗರ, ವಿಜಯನಗರ - 583132, ಬಳ್ಳಾರಿ .
Sri Yeluhede Nagappa Temple Bukkasagar, Vijayanagar - 583132, Ballari District [TM000262]
×
Temple History
ಇತಿಹಾಸ
ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕು, ಬುಕ್ಕಸಾಗರ ಕ್ಷೇತ್ರದಲ್ಲಿ ಶ್ರೀ ಏಳುಹೆಡೆ ನಾಗಪ್ಪ ದೇವಸ್ಥಾನ ಕ್ರಿ.ಶ 13 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಾವಧಿಯಲ್ಲಿ ಸ್ಥಾಪನೆಯಾಗಿರುತ್ತದೆ, ವಿಜಯನಗರ ಸಾಮ್ರಾಜ್ಯದ ಅಧಿಪತಿ ಶ್ರೀ ಕ್ರಿಷ್ಣದೇವರಾಯರ ದಂಪತಿಗೆ ನಾಗದೋಷ ಬಂದ ಕಾರಣ ತಪ್ಪಸ್ಸು ಮುನಿಗಳ ಆಗ್ನೆಯಂತೆ ಹಂಪೆಯಿಂದ ಹಾವಿನ ಆಕಾರದ ಕಾಲವೆಯ ಮುಖಾಮತರ ನಡೆದು ಬಂದು ಬುಕ್ಕಸಾಗರ ಗ್ರಾಮದ ಹತ್ತಿತ ಬಂದು ಜೊತೆಗೆ ಇದ್ದಂತಹ ಕಲ್ಲಿನ ಆಕಾರದಲ್ಲಿ ಬುಕ್ಕಸಾಗರ ಗ್ರಾಮದಲ್ಲಿ ಉದ್ಬವ ಗೊಂಡಿದೆ, ಮೂಲ ಮೂರ್ತಿ ಉದ್ಭವ ಹಾಗೂ ಜೊತೆಗೆ ಮಾನುಪ ಪ್ರತಿಷ್ಠೆಯ ವಿಗ್ರಹಗಳು ಇರುತ್ತವೆ, ದೇವಾಲಯಕ್ಕೆ ಬರುವ ಭಕ್ತರಿಗೆ ಸಿಗುವಂತಹ ಫಲಗಳು ಕಂಕಣ ಭಾಗ್ಯ, ಸಂತಾನ ಫಲ, ಉದ್ಯೋಗಗಲು ಲಭಿಸುತ್ತವೆ, ದೋಷ ಪರಿಹಾರ: ಶಾಂತಿ, ಸಂಸ್ಕಾರ, ಆಶ್ಲೇಷ ನಕ್ಷತ್ರ ದೋಷ, ಕುಜು ಶಾಂತಿ ದೋಪ...ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕು, ಬುಕ್ಕಸಾಗರ ಕ್ಷೇತ್ರದಲ್ಲಿ ಶ್ರೀ ಏಳುಹೆಡೆ ನಾಗಪ್ಪ ದೇವಸ್ಥಾನ ಕ್ರಿ.ಶ 13 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಾವಧಿಯಲ್ಲಿ ಸ್ಥಾಪನೆಯಾಗಿರುತ್ತದೆ, ವಿಜಯನಗರ ಸಾಮ್ರಾಜ್ಯದ ಅಧಿಪತಿ ಶ್ರೀ ಕ್ರಿಷ್ಣದೇವರಾಯರ ದಂಪತಿಗೆ ನಾಗದೋಷ ಬಂದ ಕಾರಣ ತಪ್ಪಸ್ಸು ಮುನಿಗಳ ಆಗ್ನೆಯಂತೆ ಹಂಪೆಯಿಂದ ಹಾವಿನ ಆಕಾರದ ಕಾಲವೆಯ ಮುಖಾಮತರ ನಡೆದು ಬಂದು ಬುಕ್ಕಸಾಗರ ಗ್ರಾಮದ ಹತ್ತಿತ ಬಂದು ಜೊತೆಗೆ ಇದ್ದಂತಹ ಕಲ್ಲಿನ ಆಕಾರದಲ್ಲಿ ಬುಕ್ಕಸಾಗರ ಗ್ರಾಮದಲ್ಲಿ ಉದ್ಬವ ಗೊಂಡಿದೆ, ಮೂಲ ಮೂರ್ತಿ ಉದ್ಭವ ಹಾಗೂ ಜೊತೆಗೆ ಮಾನುಪ ಪ್ರತಿಷ್ಠೆಯ ವಿಗ್ರಹಗಳು ಇರುತ್ತವೆ, ದೇವಾಲಯಕ್ಕೆ ಬರುವ ಭಕ್ತರಿಗೆ ಸಿಗುವಂತಹ ಫಲಗಳು ಕಂಕಣ ಭಾಗ್ಯ, ಸಂತಾನ ಫಲ, ಉದ್ಯೋಗಗಲು ಲಭಿಸುತ್ತವೆ, ದೋಷ ಪರಿಹಾರ: ಶಾಂತಿ, ಸಂಸ್ಕಾರ, ಆಶ್ಲೇಷ ನಕ್ಷತ್ರ ದೋಷ, ಕುಜು ಶಾಂತಿ ದೋಪ ಪರಿಹಾವಾಗುತ್ತದೆ. ದೇವಾಲಯದಲ್ಲಿ ಶ್ರಾವಣ ಮಾಸದಲ್ಲಿ ಬರುವ ಚೌತಿ ತಿಥಿ ಹಾಗೂ ಪಂಚಮಿ ತಿಥಿಗೆ ನಾಗದೇವರಿಗೆ ಅಭಿಷೇಕ ತೀರ್ಥ ಪ್ರಸಾದದಿಂದ ಪ್ರಸಿದ್ದವಾಗಿದೆ. ಷಷ್ಠಿ ತಿಥಿ ಪೂಜಾ, ಆಶ್ಲೇಷ ನಕ್ಷ ಪೂಜಾ ನಾಗ ಪಂಚಮಿ ಹಬ್ಬದ ಚೌತಿ ಹಾಗೂ ಪಂಚಮಿ ಹಾಗೂ ಕಾರ್ತಿಕ ಮಾಸದ ಷಷ್ಠಿ ಪೂಜೆಯು ವಿಶೇಷವಾಗಿದೆ. ದೇವಾಲಯದ ಬುಕ್ಕಸಾಗರ ಗ್ರಾಮದಿಂದ ೨ ಕಿ.ಮಿ. ದೂರದಲ್ಲಿ ಏಳು ಹೆಡೆ ನಾಗಪ್ಪನ ಗುಡ್ಡದ ಹತ್ತಿರವಿದೆ. ದೇವಾಲಯ ಸುತ್ತ ಪ್ರಕೃತಿ ಹಸಿರು ಗುಡ್ಡಗಾಡು ಹಾಗೂ ಬುಕ್ಕಸಾಗದ ಗ್ರಾಮದ ರೈತ ಬಾದವರು ಬೆಳಯುವಂತಹ ಭತ್ತ, ಕಬ್ಬು ಹಾಗೂ ಬಾಳೆ ಬೆಳದ ಹೊಸ ಗದ್ದೆಗಳಿಂಂದ ಕಂಗೊಳಿಸುತ್ತದೆ. ದೇವಾಲಯವು ಸಂಪೂರ್ಣ ಹಣೆಯ ಮಾದರಿಯಲ್ಲಿ ಇದ್ದು ಬುಕ್ಕಸಾಗರ ಗ್ರಾಮ ಹಾಗೂ ಸುತ್ತಮುತ್ತಲ್ಲಿನ ಭಕ್ತರ ಸಹಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನೇತೃತ್ವದಲ್ಲಿ ಬರುವಂತಹ ಭಕ್ತರ ಅನುಕೂಲಕ್ಕಾಗಿ ಜೀರ್ಣೋದ್ದಾರವಾಗಿರುತ್ತದೆ. ದೇವಾಲಯದ ಕಂಬಗಳು ವಿಜಯನಗರ ಸಾಮ್ರಾಜ್ಯದ ಇತಿಹಾಸ ಕೆತ್ತೆನೆಯ ಗೊಂಬೆಗಳು ಕಾಣಿಸುತ್ತವೆ, ದೇವಾಲಯದ ಮೂರ್ತಿಯು ಕಾಡು ಕಲ್ಲು ಹಾಗೂ, ಗೋಡೆಗಳ, ಕಂಬಗಳು ಎಲ್ಲವೂ ಕಾಡುಕಲ್ಲಿನಲ್ಲಿ ಕೆತ್ತಿರುವುದು ಕಾಣಬಹುದು, ವಿಜಯನಗರ ಕಾಲದ ಸಾಮ್ರಾಜ್ಯಕ್ಕೆ ಸೇರಿರುತ್ತದೆ. ದೇವಾಲಯದಲ್ಲಿ ಸಲ್ಲುವ ಪ್ರಾಂತ್ಯ ಸಯಂಕಾಲ ಪೂಜೆಯು ಜರುಗುತ್ತದೆ. ಈ ಪೂಜೆಯಲ್ಲಿ ಭಾಗವಹಿಸುವ ಭಕ್ತಾಧಿಗಳಿಗೆ ಬೇಡಿಕೆಗಳ ಇದ್ದರೆ ಫಲ ಪರಿಹಾರ ದೊರಕುತ್ತದೆ. ಮಡಿನೀರಿನಲ್ಲಿ, ಅರಿಶಿಣ ಎರೆಯುವುದು ಹಾಗೂ ಹರಳು ಉಪ್ಪು, ಆಕಳ ಹಾಲಿನ ಅಭಿಷೇಕ ಮಾಡುವುದು ಹಾಗೂ ಶ್ರಾವಣ ಮಾಸದಲ್ಲಿ ಹಿಂದೂ ಧರ್ಮ ಸಂಪ್ರದಾಯ ಪದ್ದತಿಯಂತೆ ಮನೆಯಲ್ಲಿ ತಯಾರಿಸಿದ ತಂಬಿಟ್ಟು ಉಂಡೆ, ಶೇಂಗ ಉಂಡೆ, ಕೌಳೆ ಕಾಯಿ, ಏಳೆಯ ಹುಣಸಿನಕಾಯಿ, ಕ್ಯಾದಿಗೆಯನ್ನು ದೇವರಿಗೆ ಅರ್ಪಿಸುವ ವಿಶೇಷತೆ ಹೊಂದಿರುತ್ತದೆ. ದೇವಾಲಯದ ಸಮೀಪ (ಒಂದು ಕಿ.ಮೀ ದೂರದಲ್ಲಿ) ತುಂಗಾ ಭದ್ರ ನದಿಯು ಹರಿಯುತ್ತದೆ.