ಶ್ರೀ ಅರ್ಕೇಶ್ವರ ಸ್ವಾಮಿ ದೇವಸ್ಥಾನ ರಾಮನಗರ, ರಾಮನಗರ - 562159, ರಾಮನಗರ .
Sri Arkeshwara Swamy Temple Ramanagar Town, Ramanagara - 562159, Ramanagara District [TM000266]
×
Temple History
ಸ್ಥಳ ಪುರಾಣ
ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಇತಿಹಾಸದ ಬಗ್ಗೆ 18ನೇ ಶತಮಾನದಲ್ಲಿ ಕ್ಲೋಸ್ ಪೇಟೆ ಎಂದು ಹೆಸರುವಾಸಿಯಾಗಿದ್ದು ಇಂದಿನ ಈ ರಾಮನಗರದ ಈ ದೇಗುಲದಲ್ಲಿರುವ ಅರ್ಕೇಶ್ವರ ಸ್ವಾಮಿ ಲಿಂಗವನ್ನು ಕಾಶಿಯಿಂದ ತಂದು ಪ್ರತಿಷ್ಟಾಪನೆ ಮಾಡಿದ್ದು ಎಂದು ಪ್ರಾಚೀನ ಸ್ಥಳ ದಾಖಲೆ ಹೇಳುತ್ತಿದೆ.ಕಾಶಿಯನ್ನು ಬಿಟ್ಟರೆ ನದಿ ತೀರದಲ್ಲಿ ಲಿಂಗವಿರುವ ದೇವಾಲಯ ಇದೊಂದೆ ಎಂದೂ ಪ್ರತೀತಿ, ಕ್ರಿ.ಶ. 1530ರ ಶಾಸನವೊಂದರ ಪ್ರಕಾರ ಅಂದಿನ ಕೂಟಗಲ್ ರಾಜ ತಿಮ್ಮಪ್ಪ ನಾಯಕ ಹಾಗೂ ಆತನ ಮಹಾಮಂತ್ರಿ ಲಿಂಗರಸಯ್ಯ ಅವರು ಇಬ್ಬಳಿಕೆ ಹಳ್ಳಿ ಸೋಮೇಶ್ವರ ದೇವರಿಗೆ ಅಮೃತಪಡಿ ಸೇವಾ ದಾನವಾಗಿ ನೀಡಿದರೆಂದು ಶಾಸನ ಹೇಳುತ್ತz.ೆ ಆ ಇಬ್ಬಳಿಕೆ ಹಳ್ಳಿಯ ಸೋಮೇಶ್ವರ ದೇವಾಲಯವು ಇಂದಿನ ಈ ಅರ್ಕೆಶ್ವರ ಸ್ವಾಮಿ ಅಂದರೆ ಸೋಮೇಶ್ವರ ಸ್ವಾಮಿ ಗುಡಿಯಲ್ಲಿದ್ದ ಲಿಂಗವನ್ನು ಆಂದಿನ...ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಇತಿಹಾಸದ ಬಗ್ಗೆ 18ನೇ ಶತಮಾನದಲ್ಲಿ ಕ್ಲೋಸ್ ಪೇಟೆ ಎಂದು ಹೆಸರುವಾಸಿಯಾಗಿದ್ದು ಇಂದಿನ ಈ ರಾಮನಗರದ ಈ ದೇಗುಲದಲ್ಲಿರುವ ಅರ್ಕೇಶ್ವರ ಸ್ವಾಮಿ ಲಿಂಗವನ್ನು ಕಾಶಿಯಿಂದ ತಂದು ಪ್ರತಿಷ್ಟಾಪನೆ ಮಾಡಿದ್ದು ಎಂದು ಪ್ರಾಚೀನ ಸ್ಥಳ ದಾಖಲೆ ಹೇಳುತ್ತಿದೆ.ಕಾಶಿಯನ್ನು ಬಿಟ್ಟರೆ ನದಿ ತೀರದಲ್ಲಿ ಲಿಂಗವಿರುವ ದೇವಾಲಯ ಇದೊಂದೆ ಎಂದೂ ಪ್ರತೀತಿ, ಕ್ರಿ.ಶ. 1530ರ ಶಾಸನವೊಂದರ ಪ್ರಕಾರ ಅಂದಿನ ಕೂಟಗಲ್ ರಾಜ ತಿಮ್ಮಪ್ಪ ನಾಯಕ ಹಾಗೂ ಆತನ ಮಹಾಮಂತ್ರಿ ಲಿಂಗರಸಯ್ಯ ಅವರು ಇಬ್ಬಳಿಕೆ ಹಳ್ಳಿ ಸೋಮೇಶ್ವರ ದೇವರಿಗೆ ಅಮೃತಪಡಿ ಸೇವಾ ದಾನವಾಗಿ ನೀಡಿದರೆಂದು ಶಾಸನ ಹೇಳುತ್ತz.ೆ ಆ ಇಬ್ಬಳಿಕೆ ಹಳ್ಳಿಯ ಸೋಮೇಶ್ವರ ದೇವಾಲಯವು ಇಂದಿನ ಈ ಅರ್ಕೆಶ್ವರ ಸ್ವಾಮಿ ಅಂದರೆ ಸೋಮೇಶ್ವರ ಸ್ವಾಮಿ ಗುಡಿಯಲ್ಲಿದ್ದ ಲಿಂಗವನ್ನು ಆಂದಿನ ರಾಮಗಿರಿ ಬೆಟ್ಟದ ಪ್ರದೇಶಲ್ಲಿದ್ದ ಪ್ರಸ್ತುತ ಸ್ಥಳಕ್ಕೆ ತಂದು ಅರ್ಕಾವತಿ ನದಿ ತೀರದಲ್ಲಿ ಅರ್ಕೇಶ್ವರ ಗುಡಿ ಕಟ್ಟಿ ಪ್ರತಿಷ್ಟಾಪನೆ ಮಾಡಲಾಯಿತು.
18ನೇ ಶತಮಾನದಲ್ಲಿ ಮೈಸೂರಿನ ದಿವಾನರಾಗಿದ್ದ ಭಕ್ತಿ ಬಾಲಾಜಿ ರಾಯರು ರಾಮಗಿರಿ ಬೆಟ್ಟ ಪ್ರದೇಶದ ನಡುವೆ ಅರ್ಕಾವತಿ ನದಿ ತೀರದಲ್ಲಿ ದೇವಾಲಯ ಕಟ್ಟಿ ಆದರ ಬದಿಯಲ್ಲಿ ಎರಡು ಊರುಗಳ ಸಂಪರ್ಕಕ್ಕೆ ಅನುಕೂಲವಾಗುವಂತೆ ಸೇತುವೆಯನ್ನು ನಿರ್ಮಿಸಿದರು ಆ ವೇಳೆಗಾಗಲೇ ಶಿಥಿಲವಾಗಿದ್ದ ದೇವಾಲಯವನ್ನು ಜೀರ್ಣೋದ್ದಾರ ಸಹ ಮಾಡಿಸಿದ್ದರು, ಅರ್ಕೇಶ್ವರ ಲಿಂಗವು ಪಶ್ಚಿಮಾಭಿಮುಖಿಯಾಗಿದೆ ಜಲಹರಿ ಲಿಂಗದ ಎಡಭಾಗಕ್ಕಿದೆ ದೇವಾಲಯದ ಮುಂಭಾಗದಲ್ಲಿ ನಂದಿ ಧ್ವಜವಿದೆ, ಬಲಭಾಗದಲ್ಲಿ ವೇಣುಗೋಪಾಲ ಸ್ವಾಮಿ, ಚಂಡಿಕೇಶ್ವರ ಸ್ವಾಮಿ ದೇವಾಲಯಗಳಿವೆ, ಎಡಬದಿಯಲ್ಲಿ ಪ್ರಸನ್ನಾಂಬಾ ದೇವಾಯ, ಸೂರ್ಯನಾರಾಯಣ ದೇವಾಲಯಗಳು ಉಂಟು, ಇವೀಗ, ಅರ್ಕೇಶ್ವರ ಸ್ವಾಮಿ ದೇವಾಲಯವನ್ನು ಭಕ್ತರು, ಆಸ್ತಿಕರ ನೆರವಿನಲ್ಲಿ ಆಧುನಿಕ ರೀತಿಯಲ್ಲಿ ಜೀರ್ಣೋಧ್ದಾರ ಮಾಡಲಾಗುತ್ತಿದೆ.