Screen Reader Access                 A-  A  A+ 
ಶ್ರೀ ವೆಂಕಟ ರಮಣ ಸ್ವಾಮಿ ದೇವಸ್ಥಾನ ಸಂಪಿಗೆ, ತುಮಕೂರು, ತುಮಕೂರು .
Sri Venkata Ramana Swamy Temple Sampige, Tumakuru, Tumakuru District [TM000267]
×
Temple History

ಇತಿಹಾಸ

ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನವು ತುಮಕೂರು ಜಿಲ್ಲೆ ದಂಡಿನಶಿವರ ಹೋಬಳಿ ಸಂಪಿಗೆ ಗ್ರಾಮದಲ್ಲಿ ನೆಲೆಸಿದೆ. ಸಂಪಿಗೆ ಗ್ರಾಮದ ಹೃದಯಬಾಗದಲ್ಲಿರುವುದು ವಿಶೇಷವೇ ಸರಿ. ಈ ದೇವಾಲಯವು ಅದ್ಬುತವಾದ ಸ್ಮಾರಕವಾಗಿ ಬೆಳಗುತ್ತಿದೆ. ಗೌತಮ ಮಹರ್ಷಿಯ ಕುಲದಲ್ಲಿ ಹುಟ್ಟಿದ ಭಾಸ್ಕರನೆಂಬ ಬ್ರಾಹ್ಮಣನು ವ್ಯಾಸ ಮಹರ್ಷಿಯ ದರ್ಶನವನ್ನು ಹೊಂದಲಿಚ್ಚೆಯುಳ್ಳವನಾಗಿ ಹಿಮವತ್ ಪರ್ವತವನ್ನು ಕುರಿತು ಹೊರಟನು. ಅನೇಕ ಪುಣ್ಯ ತೀರ್ಥಗಳಲ್ಲಿ ಸ್ನಾನಮಾಡಿ ತನ್ನ ಸಮಸ್ತ ಪಾಪವನ್ನು ಕಳೆದುಕೊಂಡನು. ವ್ಯಾಸ ಋಷಿಯನ್ನು ನೆನೆದು ಗಾಡನಿದ್ರೆಯಲ್ಲಿರುವಾಗ ಬ್ರಾಹ್ಮಣ ಶ್ರೇಷ್ಠನೆ ಕಲಿಯುಗದಲ್ಲಿ ಸಾಧಾರಣವಾಗಿ ಚರ್ಮ ಚಕ್ಷಸ್ಸುಗಳಿಗೆ ನಾನು ಕಾಣಿಸಿಕೊಳ್ಳತಕ್ಕವನಲ್ಲವಾದ್ದರಿಂದ ಸ್ವಪ್ನದಲ್ಲಿ ಕಾಣಿಸಿಕೊಂಡಿರುವೆ. ಭಾಸ್ಕರನು ವ್ಯಾಸ ಮಹರ್ಷಿಯನ್ನು ಕುರಿತು ನಾನು ಎಲ್ಲಿ ವಾಸಿಸುವುದರಿಂದ ಮತ್ತು ಯಾರನ್ನು ಸೇವಿಸುವುದರಿಂದ ನನಗೆ ಶ್ರೇಯಸ್ಸುಂಟಾಗುವುದು? ಆಗ ವ್ಯಾಸ ಮಹರ್ಷಿಯು ಹೇಳಿದ ಕಥೆಯಲ್ಲಿ ಕರ್ಣಾಟಕ ದೇಶದಲ್ಲಿ ಯಾಯಾವರ ಕುಲದಲ್ಲಿ ಹುಟ್ಟಿದ ವೇದ...