Screen Reader Access                 A-  A  A+ 
ಶ್ರೀ ವಿನಾಯಕಸ್ವಾಮಿ ದೇವಸ್ಥಾನ ಕುರುಡುಮಲೆ, ಕೋಲಾರ - 563131, ಕೋಲಾರ .
Sri Vinayaka Swamy Temple Kurudumale, Kolar - 563131, Kolar District [TM000276]
×
Temple History

ಇತಿಹಾಸ

ಕುರುಡುಮಲೆಯು ಹದಿಮೂರನೆ ಶತಮಾನದ ವೇಳೆಗಾಗಲೆ ಚಾರಿತ್ರಿಕ ಮಹತ್ವ ವನ್ನು ಪಡೆದ ಮುಖ್ಯಸ್ಥಳವಾಗಿತ್ತು. ಹೊಯ್ಸಳರ ಕಾಲದಲ್ಲಿ ಇದೊಂದು ಉಪನಗರ ವಾಗಿಯೇ ಪ್ರಸಿದ್ಧವಾದದ್ದೆನ್ನಬಹುದು . ತದನಂತರ ವಿಜಯನಗರವನ್ನು ಆಳಿದ ಆರಂಭಿಕ ಅರಸರ ಕಾಲದಲ್ಲಿ ಮುಳುವಾಯಿ ನಗರದ ಜೊತೆ ಜೊತೆಯಲ್ಲಿಯೇ ಇಲ್ಲಿಯೂ ಸಹ ದೇವಾಲಯಗಳ ಅಭಿವೃದ್ಧಿಯಾಯಿತೆನ್ನಲು ಅಡ್ಡಿಯಿಲ್ಲ. ಹದಿನೈದನೆ ಶತಮಾನದಲ್ಲಿ ಕುರುಡುಮಲೆಯ ಬೆಟ್ಟದಾಚೆಗಿರುವ ಸಿದ್ಧಘಟ್ಟದಲ್ಲಿ ಕಟ್ಟಿದ ಕನ್ನೆಕೆರೆಯ ವಿಚಾರವನ್ನು ತಿಳಿಸುವ ಶಾಸನದಲ್ಲಿ ಕುರುಡುಮಲೆಯನ್ನು ಪ್ರಸ್ತಾಪಿಸಲಾಗಿದೆ. ಸಮರೂಪಧಾರಣೆಯನ್ನು ಗಳಿಸಿದ ಈ ರೂಪವು ಕುರುಡುಮಲೆ ಎಂದಾಗಿದೆ. ಪೌರಾಣಿಕ ಘಟನೆಯಾಧಾರಿತ ಹೆಸರನ್ನು ಪಡೆದು ಕೂಡುಮಲೆ ಎಂಬ ರೂಪವು ಬಳಕೆಯಾದಂತೆ ತೋರುತ್ತದೆ ಎಂಬುದಾಗಿ ಶ್ರೀ ಕೆ.ಆರ್.ನರಸಿಂಹನ್ ರವರು ಬರೆದಿರುವ ಕುರುಡುಮಲೆ ಎಂಬ ಪುಸ್ತಕದಲ್ಲಿ ನಮೂದಾಗಿರುತ್ತಾರೆ.

ಸ್ಥಳ ಪುರಾಣ

ಶ್ರೀ ವಿನಾಯಸ್ವಾಮಿ ದೇವಾಲಯವನ್ನು ಪುರಾಣಗಳ ರೀತಿಯಾಗಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಕೂಡಿ ತ್ರಿಪುರಾಸುರ ಎಂಬ ರಾಕ್ಷಸರ ಸಂಹಾರಕ್ಕಾಗಿ ಶ್ರೀ ವಿನಾಯಕಸ್ವಾಮಿಯನ್ನು ಪ್ರತಿಷ್ಟಾಪನೆ ಮಾಡಿರುವುದರಿಂದ ಈ ಸ್ಥಳಕ್ಕೆ ಕೂಟಾದ್ರಿ ಕೂಡುಮಲೆ ಎಂದು ಹೆಸರು ಬಂದಿದೆ, ಕಾಲಾನಂತರ ಕುರುಡುಮಲೆ ಎಂದು ಕರೆಯಲ್ಪಡುತ್ತಿದೆ. ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರನು ರಾವಣಾಸುರನ ಮೇಲೆ ಯುದ್ದಕ್ಕೆ ಹೋಗುವ ಮುನ್ನ ಈ ಸನ್ನಿದಾನಕ್ಕೆ ಬಂದು ಗಣಪತಿಯ ಪೂಜೆ ಮಾಡಿ ನಂತರ ಯುದ್ದ ಮಾಡಿ ರಾವಣಾಸುರನ ಮೇಲೆ ಜಯವನ್ನು ಪಡೆದಿರುತ್ತಾರೆ. ದ್ವಾಪರಯುಗದಲ್ಲಿ ಶ್ರೀಕೃಷ್ಣನಿಗೆ ಚೌತಿಯ ಚಂದ್ರನ ದರ್ಶನದಿಂದ ಶಮಂತಕ ಮಣಿ ಅಪವಾದ ಬಂದಿರುತ್ತದೆ. ಈ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಅಪವಾದ ಪರಿಹಾರವಾಗುತ್ತದೆ ಮತ್ತು ಪಂಚ ಪಾಂಡವರು ಕೌರವರ ಮೇಲೆ ಯುದ್ದಕ್ಕೆ ಹೋಗುವ ಮೊದಲು ಶ್ರೀ ವಿನಾಯಕನ ಪೂಜೆ...