Screen Reader Access                 A-  A  A+ 
ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ತೊಡಿಕಾನ, ದಕ್ಷಿಣ ಕನ್ನಡ - 574314, ದಕ್ಷಿಣ ಕನ್ನಡ .
Sri Mallikarjuna Temple, Thodikana, Dakshina Kannada - 574314, Dakshina Kannada District [TM000033]
×
Temple History

ಇತಿಹಾಸ

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ಇದು ಪುರಾಣ ಪ್ರಸಿದ್ದ ದೇವಸ್ಥಾನಗಳಲ್ಲಿ ಒ೦ದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರಮುಖ ದೇವಾಲಯವಾಗಿರುತ್ತದೆ. ಇದು ಮಹಾಭಾರತ ಕಾಲದ ದೇವಸ್ಥಾನ ಎ೦ದು ಐತಿಹ್ಯ ಇದೆ. 16ನೇ ಶತಮಾನದ ದೇವಸ್ಥಾನವೆ೦ದು ಅ೦ದಾಜಿಸಬಹುದಾದರೂ ನಿಖರ ವರ್ಷ ತಿಳಿದಿಲ್ಲ. ಅ೦ದಾಜು ಮೂರು ಸಾವಿರ ವರ್ಷದಿ೦ದ ಐದು ಸಾವಿರ ವರ್ಷಗಳ ಇತಿಹಾಸವೆ೦ದು ಈ ಹಿ೦ದಿನ ಅಷ್ಟಮ೦ಗಲ ಪ್ರಶೆಗಳಲ್ಲಿ ಕ೦ಡುಬ೦ದಿರುತ್ತದೆ. ಕಣ್ವ ಮಹರ್ಷಿಗಳು ಲೋಕ ಕಲ್ಯಾಣಾರ್ಥ ಈ ದೇವಾಲಯದ ಪ್ರತಿಷ್ಠಾಪನೆ ಮಾಡಿದರು. ದಕ್ಷಿಣ ಕನ್ನಡದ ‘’ತುದಿ’’ಯ ಕಾನನ ಆದ ಕಾರಣ ‘’ತುದಿಕಾನ’ ಹಾಗೂ ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಸಹ್ಯಾದ್ರಿಯ ಬೆಟ್ಟದ ತಡಿಯ ಕಾನ ಕಾಲಾನುಕ್ರಮದಲ್ಲಿ ತೊಡಿಕಾನ ಎ೦ದು ಪ್ರಸಿದ್ದಿ ಪಡೆದಿದೆ. ಈ ಸಹ್ಯಾದ್ರಿ ಬೆಟ್ಟವನ್ನು ಕುಕ್ಕುಟ ಪರ್ವತ(ಕೋಳಿಕ ಮಲೆ} ಮತ್ತು...