Screen Reader Access                 A-  A  A+ 
ಶ್ರೀ ರೇವಣ ಸಿದ್ದೇಶ್ವರಸ್ವಾಮಿ ದೇವಸ್ಥಾನ, ಕೈಲಾಂಚ, ರಾಮನಗರ - 562117, ರಾಮನಗರ .
Sri Revana Siddeshwara Temple, Kailancha, Ramanagar - 562117, Ramanagara District [TM000037]
×
Temple History

ಸ್ಥಳ ಪುರಾಣ

ಕಲಿಯುಗದ ಆದಿಭಾಗದಲ್ಲಿ ತೆಲಂಗಾಣ ಪ್ರದೇಶದ ಕೊಲನುವಾಕ ಎಂಬ ಊರಿನಲ್ಲಿ ಶ್ರೀ ಸೋಮೇಶ್ವರ ಲಿಂಗದಿಂದ ಉದ್ಭವಿಸುವ ಶ್ರೀ ರೇವಣಸಿದ್ದರು 700 ವರ್ಷಗಳ ಕಾಲ ಲೋಕ ಸಂಚಾರ ಮುಗಿದ ಮೇಲೆ ಮತ್ತೆ 700 ವರ್ಷಗಳ ಕಾಲ ತಪ್ಪಸ್ಸು ಮಾಡಿದ ಕ್ಷೇತ್ರವೇ ಶ್ರೀ ರೇವಣಸಿದ್ದೇಶ್ವರಸ್ವಾಮಿ ಬೆಟ್ಟ ಈ ಸಂಬಂಧವಾಗಿ ಯಾವುದೇ ಶಾಸನಗಳು ಇರುವುದಿಲ್ಲ ಇದು ಹಿಂದಿನಿಂದಲೂ ಅರ್ಚಕರು ಮತ್ತು ಭಕ್ತರಿಂದ ಒಬ್ಬರಿಂದ ಒಬ್ಬರಿಗೆ ಹೇಳಿಕೊಂಡು ಬರುತ್ತಿರುವ ಪ್ರತೀತಿಯಾಗಿದೆ. ಈ ಸಂಬಂಧವಾಗಿ ಶ್ರೀ ರೇಣುಕ ವಿಜಯ ಪುಸ್ತಕದಲ್ಲಿ ಕಂಡುಬರುತ್ತದೆ. ಮುಂದುವರೆದು ಒಬ್ಬ ಬೇಟೆಗಾರ ಬೇಟೆಯನ್ನು ಅರಸುತ್ತಾ, ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಬಳಿ ಬಂದಿರಲು ಒಂದು ಉಡವನ್ನು ಕಂಡನು (ಬೆಟ್ಟ ಹತ್ತುವ ಒಂದು ಪ್ರಾಣಿ) ಅದು ಬೆಟ್ಟದ ಶಿಖರವನ್ನೇರಲು ತೊಡಗಿತು ಆಗ ಬೇಟೆಗಾರನ್ನು ಬೆಟ್ಟದಿಂದ ಕೆಳಗೆ ಇಳಿದಿದ್ದ ಬಳಿಯ ನೆರವಿನಿಂದ...