ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಬಪ್ಪನಾಡು, ದಕ್ಷಿಣ ಕನ್ನಡ - 574154, ದಕ್ಷಿಣ ಕನ್ನಡ .
Sri Durgaparameshwari Temple, Bappanadu, Dakshina Kannada - 574154, Dakshina Kannada District [TM000038]
×
Temple History
ಇತಿಹಾಸ
ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 17ರ ಮಧ್ಯಭಾಗದಲ್ಲಿರುವ ಮೂಲ್ಕಿ ಪಟ್ಟಣದಲ್ಲಿರುವ ಪುರಾತನ ದೇವಾಲಯಗಳಲ್ಲೊಂದು ಶ್ರೀ ದುರ್ಗಾ ಪರಮೆಶ್ವರಿ ದೇವಾಲಯ. ಇಲ್ಲಿಂದ 29 ಕಿ.ಮೀ ಉತ್ತರಕ್ಕೆ ಮಂಗಳೂರು 29 ಕಿ.ಮೀ ದಕ್ಷಿಣಕ್ಕೆ ಉಡುಪಿ ನಗರಗಳಿವೆ. ಶಾಂಭವಿ ನದಿ ತಟದಲ್ಲಿರುವ ಈ ಕ್ಷೇತ್ರಕ್ಕೆ ಬಪ್ಪು ಎನ್ನುವ ಮುಸ್ಲಿಂ ವ್ಯಾಪಾರಿಯಿಂದಾಗಿ ಈ ಹೆಸರು ಬಂದಿದೆ. ಬಪ್ಪು ದೇವಾಲಯ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ. ಬಪ್ಪನಾಡು ಡೋಲು ಬಹಳ ಪ್ರಸಿದ್ದ. ಈ ಕಾರಣದಿಂದಾಗಿ ದೇವಾಲಯದ ಆವರಣದಲ್ಲಿ ಬಹಳಷ್ಟು ಡೋಲುಗಳನ್ನು ಕಾಣಬಹುದು.
ಪುರಾಣ : ದಾರಿಗಾಸುರ ಎನ್ನುವ ರಾಕ್ಷಸ ಶೋನಿತಪುರ ಎನ್ನುವ ನಗರವನ್ನು ಆಳುತ್ತಿದ್ದ. ಈತ ದೇವತೆಗಳನ್ನು ಮತ್ತು ವಿಷ್ಣು ದೇವರ ಜೊತೆ ದ್ವೇಷ ಸಾಧಿಸುತ್ತಿದ್ದ. ಬ್ರಹ್ಮದೇವರ ವರದ ಪ್ರಭಾವದಿಂದ ದೇವತೆಗಳನ್ನು ಮತ್ತು ವಿಷ್ಣುವನ್ನು ಸೋಲಿಸಿ ವಿಷ್ಣುವಿನ ಬಳಿಯಿದ್ದ ಚಕ್ರವನ್ನು ಕಸಿದು ತನ್ನ...ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 17ರ ಮಧ್ಯಭಾಗದಲ್ಲಿರುವ ಮೂಲ್ಕಿ ಪಟ್ಟಣದಲ್ಲಿರುವ ಪುರಾತನ ದೇವಾಲಯಗಳಲ್ಲೊಂದು ಶ್ರೀ ದುರ್ಗಾ ಪರಮೆಶ್ವರಿ ದೇವಾಲಯ. ಇಲ್ಲಿಂದ 29 ಕಿ.ಮೀ ಉತ್ತರಕ್ಕೆ ಮಂಗಳೂರು 29 ಕಿ.ಮೀ ದಕ್ಷಿಣಕ್ಕೆ ಉಡುಪಿ ನಗರಗಳಿವೆ. ಶಾಂಭವಿ ನದಿ ತಟದಲ್ಲಿರುವ ಈ ಕ್ಷೇತ್ರಕ್ಕೆ ಬಪ್ಪು ಎನ್ನುವ ಮುಸ್ಲಿಂ ವ್ಯಾಪಾರಿಯಿಂದಾಗಿ ಈ ಹೆಸರು ಬಂದಿದೆ. ಬಪ್ಪು ದೇವಾಲಯ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ. ಬಪ್ಪನಾಡು ಡೋಲು ಬಹಳ ಪ್ರಸಿದ್ದ. ಈ ಕಾರಣದಿಂದಾಗಿ ದೇವಾಲಯದ ಆವರಣದಲ್ಲಿ ಬಹಳಷ್ಟು ಡೋಲುಗಳನ್ನು ಕಾಣಬಹುದು.
ಪುರಾಣ : ದಾರಿಗಾಸುರ ಎನ್ನುವ ರಾಕ್ಷಸ ಶೋನಿತಪುರ ಎನ್ನುವ ನಗರವನ್ನು ಆಳುತ್ತಿದ್ದ. ಈತ ದೇವತೆಗಳನ್ನು ಮತ್ತು ವಿಷ್ಣು ದೇವರ ಜೊತೆ ದ್ವೇಷ ಸಾಧಿಸುತ್ತಿದ್ದ. ಬ್ರಹ್ಮದೇವರ ವರದ ಪ್ರಭಾವದಿಂದ ದೇವತೆಗಳನ್ನು ಮತ್ತು ವಿಷ್ಣುವನ್ನು ಸೋಲಿಸಿ ವಿಷ್ಣುವಿನ ಬಳಿಯಿದ್ದ ಚಕ್ರವನ್ನು ಕಸಿದು ತನ್ನ ಮಡದಿಯ ಬಳಿ ನೀಡಿ ಅದನ್ನು ಭದ್ರವಾಗಿ ದೇವರ ಕೋಣೆಯಲ್ಲಿ ಇಡುವಂತೆ ಸೂಚಿಸಿದ. ತನ್ನ ಚಕ್ರ ರಾಕ್ಷಸನ ಪಾಲಾಯಿತೆಂದು ವಿಷ್ಣು ವ್ಯಥೆ ಪಡುತ್ತಿದ್ದಾಗ ದುರ್ಗಾ ಪರಮೇಶ್ವರಿ ದೇವಿ ಏಳು ಮಹಿಳೆಯ ರೂಪದಲ್ಲಿ ಬಂದು ಆ ರಾಕ್ಷಸನನ್ನು ಕೊಲ್ಲುವುದಾಗಿ ಭರವಸೆ ನೀಡುತ್ತಾಳೆ. ಸಪ್ತದುರ್ಗೆಯರು ಗುಳಿಗ ದೈವದ ಜೊತೆಗೆ ಶೋನಿತಪುರ ಪ್ರವೇಶಿಸಿದಾಗ ದಾರಿಗಾಸುರ ನದಿಯಲ್ಲಿ ಸ್ನಾನ ಮಾಡಲೆಂದು ಬಂದಾಗ ದುರ್ಗೆ ವೃದ್ದ ಭಿಕ್ಷುಕಿಯ ರೂಪದಲ್ಲಿ ಬಂದು ಊಟ ನೀಡುವಂತೆ ಕೇಳಿಕೊಳ್ಳುತ್ತಾಳೆ. ರಾಕ್ಷಸ ಅರಮನೆಗೆ ಹೋಗಿ ತನ್ನ ಮಡದಿಯ ಬಳಿ ಊಟ ಕೇಳೆಂದು ಹೇಳಿ ಕಳುಹಿಸುತ್ತಾನೆ. ದುರ್ಗಾವತಾರಿಯಾದ ಭಗವತಿ ಅರಮನೆಗೆ ಬಂದು ಊಟ ಕೇಳುವ ಬದಲು ವಿಷ್ಣು ಚಕ್ರವನ್ನು ಕೇಳುತ್ತಾಳೆ, ರಾಕ್ಷಸನ ಮಡದಿ ಅದನ್ನು ಕೊಡಲು ನಿರಾಕರಿಸಿದಾಗ ಮತ್ತೆ ರಾಕ್ಷಸನ ಬಳಿ ಬಂದು ನಿನ್ನ ಮಡದಿ ಊಟ ನೀಡಲು ನಿರಾಕರಿಸಿದಳು ಎಂದಾಗ ರಾಕ್ಷಸ ಮತ್ತೆ ಈ ಭಿಕ್ಷುಕಿ ಕೇಳಿದ್ದನ್ನು ನೀಡಬೇಕೆಂದು ಸೂಚಿಸಿದಾಗ ಆತನ ಮಡದಿ ವಿಷ್ಣುಚಕ್ರವನ್ನು ನೀಡುತ್ತಾಳೆ.
ನಂತರ ತಾನು ಮೋಸ ಹೊದೆಯೆಂದು ಅರಿತ ರಾಕ್ಷಸ ಶಾಂಭವಿ ಜೊತೆ ಯುದ್ದಕ್ಕೆ ನಿಲ್ಲುತ್ತಾನೆ. ಮೊದಲು ಗುಳಿಗ ದೈವವನ್ನು ಸೋಲಿಸುತ್ತಾನೆ, ಏಳು ದಿನಗಳ ಅಹೋರಾತ್ರಿ ಹೋರಾಟದ ನಂತರ ರಾಕ್ಷಸ ಭೂಗತನಾಗುತ್ತಾನೆ. ರಾಕ್ಷಸಸನ್ನು ಹುಡುಕಲು ಭದ್ರ-ಕಾಳಿ ರೂಪ ತಾಳಿದ ಭಗವತಿ ಒಂದು ದಿನ ಸಂಜೆ ರಾಕ್ಷಸ ಶಿವನನ್ನು ಪೂಜಿಸಲು ಬಂದಾಗ ಆತನನ್ನು ಸಂಹರಿಸಿ ಚಕ್ರವನ್ನು ವಿಷ್ಣುವಿಗೆ ನೀಡುತ್ತಾಳೆ. ಗಂಧದಿಂದ ಮಾಡಿದ ದೋಣಿಯಲ್ಲಿ ವೈಕುಂಠದಿಂದ ಭೂಲೋಕಕ್ಕೆ ಪ್ರಯಾಣಿಸುತ್ತಾ, ಕಾಸರಗೋಡು, ಕುಂಬ್ಳೆ, ಪತ್ತತ್ತೂರು, ಮಂಜೇಶ್ವರ, ಉದ್ಯಾವರ, ಉಲ್ಲಾಳ, ಕುದ್ರೋಳಿ ಜೊತೆ ದಕ್ಷಿಣ ಭಾರತದ ಕರಾವಳಿಯಲ್ಲಿ ಸುತ್ತಾಡಿ ಸಸಿಹಿತ್ಲು (ಮೂಲ್ಕಿ ಪಟ್ಟಣ) ಬಳಿ ನೆಲೆಸುತ್ತಾಳೆ.
2021: ಈ ವರ್ಷದ ನಮ್ಮನ್ನಗಲಿದ ಗಣ್ಯ ವ್ಯಕ್ತಿಗಳ ಪಟ್ಟಿ2021: ಈ ವರ್ಷದ ನಮ್ಮನ್ನಗಲಿದ ಗಣ್ಯ ವ್ಯಕ್ತಿಗಳ ಪಟ್ಟಿ
ಇತಿಹಾಸ : ಬಪ್ಪಬ್ಯಾರಿ ಎನ್ನುವ ಮುಸ್ಲಿಂ ವ್ಯಾಪಾರಿಯೊಬ್ಬ ಶಾಂಭವಿ ನದಿಯಲ್ಲಿ ದೋಣಿಯಲ್ಲಿ ಬರುತ್ತಿದ್ದಾಗ ದೋಣಿ ಇದ್ದಕ್ಕಿದ್ದಂತೆ ನಿಲ್ಲುತ್ತದೆ. ನದಿ ತುಂಬಾ ರಕ್ತ ನೋಡಿದ ಬಪ್ಪಬ್ಯಾರಿ ಭಯಗೊಂಡಾಗ ದೇವಿಯ ವಾಣಿ ಕೇಳಿಸುತ್ತದೆ. ನೀನು ನನಗೊಂದು ಗುಡಿ ಕಟ್ಟಿಸಿಕೊಡು, ಜೈನ ಸಾವಂತನ ಬಳಿ ಹೋಗಿ ಸಹಾಯ ಕೇಳು ಹಾಗೂ ಬಾಳಿಯ ಉಡುಪನನ್ನು ನನ್ನ ಗುಡಿಯ ಅರ್ಚಕನನ್ನಾಗಿ ನೇಮಿಸು ಎಂದು ಹೇಳುತ್ತಾಳೆ. ಅದರಂತೆ ನಡೆದ ವಿಷಯವನ್ನು ಸಾವಂತನ ಬಳಿ ಬಪ್ಪಬ್ಯಾರಿ ತೋಡಿಕೊಂಡಾಗ ದೇವಿಗೆ ಗುಡಿ ನಿರ್ಮಾಣವಾಗುತ್ತದೆ. ಅಂದಿನಿಂದ ಕ್ಷೇತ್ರವನ್ನು ಬಪ್ಪನಾಡು ಎಂದು ಕರೆಯಲಾಗುತ್ತದೆ ಎನ್ನುವುದು ಕ್ಷೇತ್ರದ ಇತಿಹಾಸ.
ಮುಸ್ಲಿಂರೂ ಉತ್ಸವದಲ್ಲಿ ಭಾಗಿ : ಈ ಭಾಗದ ಶಕ್ತಿ ದೇವಾಲಯಗಳಲ್ಲೊಂದಾದ ಈ ದೇವಾಲಯ ಲಿಂಗರೂಪಿಣಿ ದುರ್ಗೆ, ಮುಸ್ಲಿಮರಿಗೂ ಕ್ಷೇತ್ರದಲ್ಲಿ ಪ್ರಸಾದ ವಿತರಣೆ ನಡೆಯುತ್ತದೆ. ಬ್ರಹ್ಮರಥೋತ್ಸವದಲ್ಲಿ ಮುಸ್ಲಿಮರೂ ಭಾಗವಹಿಸುತ್ತಾರೆ ಅಲ್ಲದೆ ಪೂಜಾನಂತರ ಮೊದಲ ಪ್ರಸಾದ ಬಪ್ಪಬ್ಯಾರಿ ಕುಟುಂಬದವರಿಗೆ ನೀಡಲಾಗುತ್ತದೆ.
ಸ್ಥಳ ಪುರಾಣ
ಶ್ರೀ ದೇವಿಯು ಇಲ್ಲಿ ಲಿಂಗ ರೂಪದಲ್ಲಿ ನೆಲೆಯಾಗಿದ್ದು, ಬಪ್ಪಬ್ಯಾರಿ ಎಂಬ ಮುಸ್ಲಿಂ ವರ್ತಕನಿಗೆ ದೇವಿಯು ಲಿಂಗ ರೂಪದಲ್ಲಿ ಸಮುದ್ರದ ಆಳದಲ್ಲಿ ಸಿಕ್ಕಿರುವುದಾಗಿಯೂ ಸೀಮೆಯ ಅರಸರಾದ ಸಾವಂತ ಅರಸರಿಂದ ದೇವಳಯವನ್ನು ಕಟ್ಟಲ್ಪಟ್ಟಿದೆ ಎಂಬ ಇತಿಹಾಸ ಇದೆ.ಶ್ರೀ ದೇವಿಯು ಇಲ್ಲಿ ಲಿಂಗ ರೂಪದಲ್ಲಿ ನೆಲೆಯಾಗಿದ್ದು, ಬಪ್ಪಬ್ಯಾರಿ ಎಂಬ ಮುಸ್ಲಿಂ ವರ್ತಕನಿಗೆ ದೇವಿಯು ಲಿಂಗ ರೂಪದಲ್ಲಿ ಸಮುದ್ರದ ಆಳದಲ್ಲಿ ಸಿಕ್ಕಿರುವುದಾಗಿಯೂ ಸೀಮೆಯ ಅರಸರಾದ ಸಾವಂತ ಅರಸರಿಂದ ದೇವಳಯವನ್ನು ಕಟ್ಟಲ್ಪಟ್ಟಿದೆ ಎಂಬ ಇತಿಹಾಸ ಇದೆ.
ಸಾಹಿತ್ಯದ ಹಿನ್ನೆಲೆ
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು, ಮುಲ್ಕಿ, ಮಂಗಳೂರು ತಾಲೂಕು, ದ.ಕ ಜಿಲ್ಲೆ - ಇಲ್ಲಿನ ಇತಿಹಾಸ ಸ್ಥಳಪುರಾನ, ದೇವಾಳಯಗಳಲ್ಲಿನ ವಿಶೇಷತೆ ಹಾಗೂ ವಿಶೇಷ ಪೂಜೆಯ ಮಾಹಿತಿವುಳ್ಳ ಟಿಪ್ಪಣಿ:-
ಬಪ್ಪನಾಡು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಾಚೀನತೆಯನ್ನು ತಿಳಿಸುವ ಐತಿಹಾಸಿಕ ದಾಖಲೆಗಳು ಬಹಳ ಅಪರೂಪ. ದೇವಾಲಯದ ರಚನೆ ಬಲಿಪೀಠ, ಆನೆಕಲ್ಲುಗಳನ್ನು ವೀಕ್ಷಿಸಿದಾಗ ಎಲ್ಲಾ ರಚನೆಗಳಲ್ಲಿ 14ನೇ ಶತಮಾನದ ಲಕ್ಷಣವಿದೆ. ಆದರೂ ಈ ದೇವಾಲಯ 14 ನೇ ಶತಮಾನದಲ್ಲಿ ಕಟ್ಟಲ್ಪಟ್ಟಿದೆಯೆಂದು ತಿಳಿಸುವ ದಾಖಲೆಗಳು ಇಲ್ಲ. ಆದ್ದರಿಂದ 13-14 ನೇ ಶತಮಾನದ ಮಧ್ಯಂತರದಲ್ಲಿ ನಿರ್ಮಿತವಾಗಿರಬಹುದೆಂದು ಇತಿಹಾಸತಜ್ಞರ ಅಭಿಪ್ರಾಯ. ಸುಮಾರು 800 ವರ್ಷಗಳ ಇತಿಹಾಸವುಳ್ಳ ದೇವಸ್ಥಾನವಾಗಿರುತ್ತದೆ.
ಮಲಬಾರಿಯ ಬಪ್ಪಬ್ಯಾರಿಯು ಮುಲ್ಕಿಯಲ್ಲಿ ಮನೆಮಾಡಿ ವ್ಯಾಪಾರ ಮಾಡುತ್ತಿದ್ದನು. ಆತನು ಒಂದು...ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು, ಮುಲ್ಕಿ, ಮಂಗಳೂರು ತಾಲೂಕು, ದ.ಕ ಜಿಲ್ಲೆ - ಇಲ್ಲಿನ ಇತಿಹಾಸ ಸ್ಥಳಪುರಾನ, ದೇವಾಳಯಗಳಲ್ಲಿನ ವಿಶೇಷತೆ ಹಾಗೂ ವಿಶೇಷ ಪೂಜೆಯ ಮಾಹಿತಿವುಳ್ಳ ಟಿಪ್ಪಣಿ:-
ಬಪ್ಪನಾಡು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಾಚೀನತೆಯನ್ನು ತಿಳಿಸುವ ಐತಿಹಾಸಿಕ ದಾಖಲೆಗಳು ಬಹಳ ಅಪರೂಪ. ದೇವಾಲಯದ ರಚನೆ ಬಲಿಪೀಠ, ಆನೆಕಲ್ಲುಗಳನ್ನು ವೀಕ್ಷಿಸಿದಾಗ ಎಲ್ಲಾ ರಚನೆಗಳಲ್ಲಿ 14ನೇ ಶತಮಾನದ ಲಕ್ಷಣವಿದೆ. ಆದರೂ ಈ ದೇವಾಲಯ 14 ನೇ ಶತಮಾನದಲ್ಲಿ ಕಟ್ಟಲ್ಪಟ್ಟಿದೆಯೆಂದು ತಿಳಿಸುವ ದಾಖಲೆಗಳು ಇಲ್ಲ. ಆದ್ದರಿಂದ 13-14 ನೇ ಶತಮಾನದ ಮಧ್ಯಂತರದಲ್ಲಿ ನಿರ್ಮಿತವಾಗಿರಬಹುದೆಂದು ಇತಿಹಾಸತಜ್ಞರ ಅಭಿಪ್ರಾಯ. ಸುಮಾರು 800 ವರ್ಷಗಳ ಇತಿಹಾಸವುಳ್ಳ ದೇವಸ್ಥಾನವಾಗಿರುತ್ತದೆ.
ಮಲಬಾರಿಯ ಬಪ್ಪಬ್ಯಾರಿಯು ಮುಲ್ಕಿಯಲ್ಲಿ ಮನೆಮಾಡಿ ವ್ಯಾಪಾರ ಮಾಡುತ್ತಿದ್ದನು. ಆತನು ಒಂದು ದಿನ ನಾವೆಯಲ್ಲಿ ಸಾಮಾನು ಹೇರಿ ವಿದೇಶಗಳಿಗೆ ಹೊರಟನು. ಶಾಂಭವಿ ನದಿ ಮಧ್ಯೆ ಮಚ್ಚೆ ತಡೆಯಿತು, ನೋಡುವಾಗ ರಕ್ತ ಕಾಣಿಸಿತು, ಬಪ್ಪಬ್ಯಾರಿ ಬೆದರಿದನು. ಮುಲ್ಕಿಯ ಸಾವಂತರ ಸಹಕಾರದಿಂದ ದೇವಸ್ಥಾನ ನಿರ್ಮಿಸಿ, ಬೈಲ ಉಡುಪರ ಮುಖೇನ ಪೂಜೆಯನ್ನು ಜರಗಿಸು ಎಂದು ಅಂಬರವಾಣಿಯಾಯಿತು. ಅಂದಿನಿಂದ ವಾತುಲ ಆಗಮದ ಪ್ರಕಾರದಲ್ಲಿ ನಿತ್ಯ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ.
ಜೈನ ವಂಶದ ದುಗ್ಗಣ್ಣ ಸಾವಂತರು ಮುಲ್ಕಿ ಸೀಮೆಯ ಒಂಭತ್ತು ಮಾಗಣೆಗಳನ್ನು ಒಟ್ಟು ಕೂಡಿಸಿ ವೈಭವದಿಂದ ರಾಜ್ಯಭಾರ ನಡೆಸುತ್ತಿದ್ದರು. ಬಪ್ಪನು ರಾಜರ ಬೀಡಿಗೆ ಹೋಗಿ ನಡೆದ ಸಂಗತಿಯನ್ನು ಹೇಳಿದನು. ಸಾವಂತರು ಬಪ್ಪಬ್ಯಾರಿಯ ಖರ್ಚಿನಿಂದ ಗರ್ಭಗುಡಿಯನ್ನೂ ಸೀಮೆಯ ಪ್ರಜೆಗಳಿಂದ ಗುಡಿಗೋಪುರಗಳನ್ನೂ ಕಟ್ಟಿಸಿ ದೇವಸ್ಥಾನಕ್ಕೆ ಉಂಬಳಿ ಬಿಟ್ಟರು. ಬೈಲ ಉಡುಪರನ್ನು ಪ್ರಧಾನ ಅರ್ಚಕರನ್ನಾಗಿ ನೇಮಕಮಾಡಿದರು. ಬಪ್ಪಬ್ಯಾರಿಯಿಂದಾದ ಕ್ಷೇತ್ರಕ್ಕೆ ಬಪ್ಪನಾಡು ಎಂಬ ನಾಮಕರಣವಾಯಿತು. ಬಪ್ಪಬ್ಯಾರಿಯವರು ಮನೆಯೊಂದನ್ನು ಕಟ್ಟಿಸಿ ಇಲ್ಲಿಯೇ ನೆಲೆಸಿದರು. ಬಪ್ಪನಾಡು ಎಂಬ ಹೆಸರು ಪಡೆದ ಈ ಕ್ಷೇತ್ರವು ಬಪ್ಪಬ್ಯಾರಿಯವರ ಹೆಸರನ್ನು ಅಮರವಾಗಿಸಿದೆ. ದೇವಾಲಯದಿಂದ ಸುಮಾರು ಮೂರು ಫರ್ಲಾಂಗು ದೂರದಲ್ಲಿರುವ ಬಪ್ಪಬ್ಯಾರಿಯವರ ಪುರಾತನ ಮನೆಯ ಬಳಿಗೆ ದೇವಿಯ ಉತ್ಸವ ಮೂರ್ತಿ ವಿಜೃಂಭನೆಯಿಂದ ಬರುವಾಗ ಬಪ್ಪಬ್ಯಾರಿಯವರ ಕುಟುಂಬದವರಿಗೆ ಈಗಲೂ ಪ್ರಸಾದ ವಿತರಣೆಯಾಗುವುದು. ಅವರಿಂದ ಸನ್ನಿಧಿಗೆ ಫಲ ಪುಷ್ಪಾದಿಗಳು ಅರ್ಪಿಸಲ್ಪಡುವುದು ದೇವಳದ ಐತಿಹಾಸಿಕ ಹಿನ್ನಲೆಗೆ ಸಾಕ್ಷಿಯಾಗಿದೆ.
ಶ್ರೀ ಕ್ಷೇತ್ರದಲ್ಲಿ ಪಂಚದುರ್ಗೆಯರನ್ನೊಳಗೊಂಡ ದುರ್ಗಾಪರಮೇಶ್ವರಿಯು ಜಲದೇವಿಯಾಗಿ ಲಿಂಗರೂಪದಲ್ಲಿರುವ ಉದ್ಭವ ಪ್ರತಿಷ್ಠೆಯಾಗಿದೆ. ಇಲ್ಲಿ ಪಂಚದುರ್ಗಾಪರಮೇಶ್ವರಿಯು ಪ್ರಧಾನ ದೇವರಾಗಿ ಜನತೆಯಿಂದ ಆರಾಧಿಸಲ್ಪಡುವುದರಿಂದ ಇತರ ದೇವರುಗಳು ಉಪದೇವರುಗಳಾಗಿ ಪರಿಗಣಿಸಲ್ಪಡುತ್ತಾರೆ. ಶ್ರೀ ದೇವಿಯ ಸನ್ನಿಧಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಉಪದೇವರುಗಳೆಂದರೆ ಒಳಾಂಗಣ ಪ್ರಾಕಾರದಲ್ಲಿರುವ ಶ್ರೀ ಮಹಾಗಣಪತಿ ದೇವರು, ಶ್ರೀ ನರಸಿಂಹ ದೇವರು, ಮತ್ತು ಹೊರಾಂಗಣ ಪ್ರಾಕಾರದಲ್ಲಿ ಶ್ರೀ ಕ್ಷೇತ್ರಪಾಲ. ಶ್ರೀ ಮಹಾಗಣಪತಿ ದೇವರು ಸುಮಾರು ಒಂದೂವರೆಯಿಂದ ಎರಡು ಶತಮಾನಗಳ ಹಿಂದೆ ಗೌಡ ಸಾರಸ್ವತ ಬ್ರಾಹ್ಮಣರ ಆಡಳಿತದಲ್ಲಿ ಪ್ರತಿಷ್ಠಾಪಿಸಲಾಗಿದೆ. ಶ್ರೀ ನರಸಿಂಹ ದೇವರು ಸುಮಾರು 1800 ರಿಂದ 1860ನೇ ಇಸವಿಯಲ್ಲಿ ಉಡುಪಿಯ ಅಷ್ಟಮಠದ ಪೀಠಧಿಪತಿಗಳಲ್ಲೊಬ್ಬರಾದ ಶ್ರೀ ಶ್ರೀ ಕಾಣಿಯೂರು ಮಠಾಧೀಶರು ಶ್ರೀ ಕ್ಷೇತ್ರದಲ್ಲಿ ಮೊಕ್ಕಂ ಮಾಡಿದಾಗ ಅವರಿಂದ ಪ್ರತಿಷ್ಠೆ ನೆರವೇರಿತು. ಶ್ರೀ ಕ್ಷೇತ್ರದಲ್ಲಿ ಕ್ಷೇತ್ರಪಾಲನ ಪ್ರತಿಷ್ಠೆಯು ಶ್ರೀ ದೇವಿಯ ಸಮಕಾಲೀನ (ಕ್ಷೇತ್ರ ಮಹಾತ್ಮೆಯ ಪುರಾಣ ಕಥೆಯಲ್ಲಿ ಉಲ್ಲೇಖ) ಭಕ್ತ ಸಮುದಾಯದ ಕಷ್ಟ-ಕೋಟಲೆಗಳನ್ನು ದೂರೀಕರಿಸುವ ನ್ಯಾಯಾ ಧರ್ಮಗಳ ತೀರ್ಮಾನ ಕೈಗೊಳ್ಳುವ ಕೆಲಸ ಶ್ರೀ ದೇವಿಯ ಸರ್ವ ಸೊತ್ತುಗಳ ಶ್ರೀ ಕ್ಷೇತ್ರದ ರಕ್ಷಣೆಯ ಬಹುಭಾರದ ಹೊಣೆಯು ಶ್ರೀ ದೇವಿಯ ಅಜ್ಞಾಧಾರಕನಾದ ಕ್ಷೇತ್ರಪಾಲನಿಗೆ ಸೇರಿರುತ್ತದೆ. ಶ್ರೀ ದೇವಳದ ಹೊರಾಂಗಣದ ದಕ್ಷಿಣ ಭಾಗದಲ್ಲಿ ಕ್ಷೇತ್ರಪಾಲನ ಆಗಮೋಕ್ತ ಪ್ರತಿಷ್ಟೆ ಆಗಿರುತ್ತದೆ.
ವೈಷ್ಟವಾಂಶ ಸಂಭೂತಳಾದ ತಾಯಿ ದುರ್ಗಾಪರಮೇಶ್ವರಿಯು ಬಪ್ಪನಾಡಿನಲ್ಲಿ ಪಂಚಲಿಂಗಸ್ವರೂಪಳಾಗಿ ಉದ್ಭವಿಸಿರುವುದರಿಂದ ಶ್ರೀ ಕ್ಷೇತ್ರದ ಪ್ರಾಚೀನತೆಯನ್ನು ಗುರುತಿಸಲಾಗುವುದು. ಈ ಸ್ಥಳವು ಉಪ್ಪುನೀರಿನಿಂದ ಆವೃತವಾಗಿದ್ದು, ದೇವರ ತೀರ್ಥದ ಬಾವಿಯ ನೀರು ಮಾತ್ರ ಸಿಹಿಯಾಗಿರುತ್ತದೆ. ಶ್ರೀ ದೇವಿಯ ಸನ್ನಿಧಿಯು ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ 32 ಗ್ರಾಮಗಳ ಜನತೆಯ ನಿತ್ಯ ನೈಮಿತ್ತಿಕ ಪೂಜೆ ಅರ್ಚನೆಯ ದಿವ್ಯ ತಾಣವಾಗಿದೆ.ಸಹಸ್ರಾರು ಭಕ್ತರಿಂದ ಆರಾಧಿಸಲ್ಪಟ್ಟು ಅವರ ಅಭಿಷ್ಟಗಳನ್ನು ಈಡೇರಿಸುವ ಪುಣ್ಯ ಪಾವನ ಕ್ಷೇತ್ರ ಬಪ್ಪನಾಡು. ಈ ಕ್ಷೇತ್ರದಲ್ಲಿ ಸೇವೆಯನ್ನು ಮಾಡಸಿದ ಭಕ್ತರ ಮದುವೆ ಸಮಸ್ಯೆ, ವ್ಯವಹಾರ, ದೃಷ್ಟಿಪೀಡತೆಗಳಿಂದ ಮುಕ್ತಿ ಹೊಂದುವರು ಎಂಬ ನಂಬಿಕೆಯಿಂದ ಭಕ್ತರು ಶ್ರೀ ಕ್ಷೇತ್ರದಲ್ಲಿ ಹರಕೆಯನ್ನು ಸಮರ್ಪಿಸುತ್ತಾರೆ. ಕಡಲ ಕಿನಾರೆಯ ಮೊಗವೀರ ಬಂಧುಗಳು, ಅಂತೆಯೇ ಸರ್ವರೂ ತಮ್ಮ ಕುಲಕಸುಬುಗಳಿಗೆ ತೊಂದರೆಯಾದಾಗ ಕ್ಷೇತ್ರಪಾಲನಲ್ಲಿ ಮೊರೆಯಿಡುವುದು ಸಾಮಾನ್ಯ. ಶ್ರೀ ದೇವಿಯ ಆಜ್ಞಾಧಾರಕನಾದ ಈತ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರೀಕರಿಸಿ ಅವರ ಮನೋವಾಂಛೆಗಳನ್ನು ಈಡೇರಿಸಿರುವ ನಿದರ್ಶನಗಳು ಹಲವಾರು ಇವೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ದೇವಸ್ಥಾನದಲ್ಲಿ ದೇವಿಗೆ ದುರ್ಗಾನಮಸ್ಕಾರ ಪೂಜೆ, ಪಾರ್ವತಿಸ್ವಯಂವರ ಪೂಜೆ, ಹೂವಿನಪೂಜೆ, ಅತಿಮಧುರ, ಕ್ಷೀರ ಪಾಯಸ, ಗಟ್ಟಿ ಪಾಯಸ, ತುಲಭಾರ ಮುಂತಾದ ಸೇವೆಗಳು ನಡೆಯುತ್ತದೆ. ಮಹಾರಥೋತ್ಸವದ ದಿನ ತುಲಭಾರ ಸೇವೆ ವಿಶೇಷವಾಗಿ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ, ದೊಡ್ಡರಂಗಪೂಜೆ, ನಡುರಂಗ ಪೂಜೆ. ಸಣ್ಣರಂಗಪೂಜೆಗಳು ವಿಶೇಷವಾಗಿ ನಡೆಯುವ ಸೇವೆಗಳಾಗಿರುತ್ತವೆ. ಹಾಗೂ ಶ್ರೀ ಮಹಾಗಣಪತಿಯ ಸನ್ನಿಧಾನದಲ್ಲಿ ದೇವರಿಗೆ 48 ತೆಂಗಿನಕಾಯಿ ಗಣಹೋಮ, ಪಂಚಾಮೃತ ಅಭಿಷೇಕ ವಿಶೇಷ ಪೂಜೆಯಾಗುವುದು. ಭಕ್ತಾಧಿಗಳಿಂದ ಅಪ್ಪ ಸೇವೆ, ಗಣಪತಿ ಪೂಜೆ ವಿಶೇಷ ಹರಕೆ ಸಲ್ಲುತ್ತದೆ. ಮಕರ ಶುಧ್ಧ ಚತುರ್ಥಿಯಂದು ಶ್ರೀ ಮಹಾಗಣಪತಿ ದೇವರು ಪ್ರತಿಷ್ಠಾ ದಿನವೆಂದು ಮೂಡುವಲು (ಮೂಡೆ-ಅವುಲು) ಉತ್ಸವ ವಿಶೇಷವಾಗಿ ನಡೆಯುತ್ತದೆ ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ, ಕೇದಗೆ ಸಿಂಗಾರ ಹೂ ಹಾಗೂ ಹಣ್ಣುಕಾಯಿಗಳ ಸಮರ್ಪಣೆ ನಡೆಯುವವು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಮಂಗಳೂರಿನಿಂದ ಉಡುಪಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್.ಎಚ್-66) ಈ ಎರಡು ಪಟ್ಟಣಗಳ ಮಧ್ಯ ಭಾಗದಲ್ಲಿ ಹೆದ್ದಾರಿಯ ಪಶ್ಚಿಮದಲ್ಲಿ ಇದೆ. ಅರ್ತಿಯಿಂದ ನರ್ತಿಸುತ್ತ ಮೈದುಂಬಿ ಹರಿಯುವ ಶಾಂಭವಿ ನದಿ ತಾಯಿಯ ಚರಣ ಕಮಲಗಳನ್ನು ತೊಳೆಯುತ್ತಿದ್ದಾಳೆ. ಹಿಂದೊಮ್ಮೆ ನೀರಿನಿಂದ ತುಂಬಿದ್ದ ದೇವಾಲಯದ ಪರಿಸರವಿಂದು ತೂಗಿ ತೊನೆಯುವ ಭತ್ತದ ಗದ್ದೆಗಳಿಂದಾವೃತವಾಗಿದೆ. ಪಶ್ಚಿಮದಲ್ಲಿ ಮುಂದೆ ನಡೆದರೆ ಮತ್ತೆ ಬಾಗಿ ಹರಿಯುವ ನದಿ, ಅದನ್ನು ದಾಟಿ ತುಸು ಮುಂದುವರಿದರೆ ಕಂಗೊಳಿಸುವ ಗಂಭೀರ ಜಲನಿಧಿಯ ರುದ್ರ ರಮಣೀಯ ದೃಶ್ಯ.
ಶ್ರೀ ಕ್ಷೇತ್ರವು 2006 ನೇ ಇಸವಿಯಲ್ಲಿ ಸರಕಾರದ ಅನುಮತಿ ಮೇರೆಗೆ ಜೀರ್ಣೋದ್ಧಾರ ಸಮಿತಿ ರಚನೆ ಮಾಡಿ ಸಂಪೂರ್ಣ ದೇವಾಳಯವನ್ನು ಶಿಲಾಮಯವಾಗಿ ಪುನರ್ ನಿರ್ಮಿಸಿ ಶ್ರೀ ದೇವಾಲಯದ ಪಾವಿತ್ರ್ಯಗೋಸ್ಕರ ಬ್ರಹ್ಮಕಲಶೋತ್ಸವ ನಡೆಸಲಾಗಿರುತ್ತದೆ.
ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ ಎರಡು ಶಾಸನಗಳು ಪತ್ತೆಯಾಗಿದ್ದು, ಒಂದು ಶಾಸನ ಸಂಪೂರ್ಣ ಹಾಳಾಗಿದೆ. ಇನ್ನೊಂದು ಶಾಸನದ ಕಾಲ ಕ್ರಿ.ಶ 1411 ತೇದಿಯದು.
ಉಲ್ಲೇಖ: 1. South Indian Inscription - VII [Page No. 131, No.259 (AR No. 81of 1901)]
2. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ - ಗಣಪತಿ ರಾವ್.
ಮೂಡು ಗೋಪುರದ ಶಿಲಾಧಾರಂದದ ಬಾಗಿಲಲ್ಲಿ ಮಹಾವೀರ ಮೂರ್ತಿಯ ಕೆತ್ತನೆಗಳಿವೆ. ಈ ಹಿಂದಿನ ದೇವಸ್ಥಾನದ ಗರ್ಭಗುಡಿಯ ಮಾಡಿನ ಎರಡು ಬದಿಗಳಲ್ಲಿ ಜೈನ ಬಸದಿಗಳ ಗರ್ಭಗುಡಿಯ ಎರಡು ಬದಿಗಳಲ್ಲಿ ಇರುವಂತೆ ಎರಡು ಕೈಗಳಿದ್ದವು. ಅಲ್ಲದೆ ಇಲ್ಲಿಯ ತೀರ್ಥಮಂಟಪದಲ್ಲಿದ್ದ ಎರಡು ಸ್ತಂಭಗಳು ಮುಡ್ಕೂರಿನ ಬಸದಿಯಿಂದ ತಂದುವಾಗಿದ್ದವು - ಈ ಕೆಲವು ವಿಷಯಗಳನ್ನು ಪರಿಶೀಲಿಸಿದರೆ ಈ ದೇವಸ್ಥಾನಕ್ಕೆ ಜೈನರ (ಸಾವಂತ ರಾಜರ) ಕೊಡುಗೆ ವಿಶೇಷವಾದಂತಿದೆ. ದೇವಸ್ಥಾನವನ್ನು ಪೂರ್ತಿಯಾಗಿ ಕಟ್ಟಿಸಿದರೆನ್ನಲು ದಾಖಲೆಗಳು ಸಾಲದಾದರೂ ಆಗಾಗ್ಗೆ ನಡೆಯುತ್ತಿದ್ದ ನವೀಕರಣಗೊಳಲ್ಲಂತೂ ಅವರ ಪಾತ್ರ ಇದ್ದಿರಲೇ ಬೇಕು.
ದೊಡ್ಡರಂಗಪೂಜೆ ಸೇವೆಯು ದೀಪಾವಳಿಯ ಅಮಾವಾಸ್ಯೆಯಿಂದ (ನವೆಂಬರ್) ತಿಂಗಳಿನಿಂದ ಪತ್ತನಾಜೆಯವರೆಗೆ (ಮೇ-24) ಮಾತ್ರ ನಡೆಯುತ್ತದೆ. ಉಳಿದ ಎಲ್ಲಾ ಸೇವೆಗಳು ನಿರಂತರ ನಡೆಯುತ್ತದೆ. ಭಕ್ತಾಧಿಗಳ ಅಪೇಕ್ಷೆಯಂತೆ ಅದರ ಪರಿಹಾರ ದೊರಕುತ್ತದೆ. ಉತ್ತಮ ಫಲ ಲಭಿಸುತ್ತದೆ. ಈ ಕ್ಷೇತ್ರವು ಶ್ರೀ ದೇವಿಯ ಲಿಂಗ ರೂಪದಲ್ಲಿ ಉದ್ಭವವಾದ್ದರಿಂದ ಸಕಲ ಇತ್ಯಾರ್ಥವು ಪೂರೈಸುತ್ತದೆ.
ಶ್ರೀ ಕ್ಷೇತ್ರದ ವೈಶಿಷ್ಟತೆಗಳು:-
ಶ್ರೀ ದೇವಿಯ ಸನ್ನಿಧಿಗೆ ಭಗವತಿಗಳ ಭೇಟಿ:- ಬಪ್ಪನಾಡಿನ ಪಂಚದುರ್ಗಾಪರಮೇಶ್ವರಿಯ ಸಹೋದರಿಯಲ್ಲೊಬ್ಬಳು ಸಸಿಹಿತ್ಲಿಲಿನ ಶ್ರೀ ಭಗವತಿ ದೇವಿ. ಉತ್ಸವದ ಮೊದಲ ದಿನ ನಡೆಯುವ ಧ್ವಜಾರೋಹಣದ ಹಾಗೂ ಅವಭೃತೋತ್ಸವ ದಿನದಲ್ಲಿ ಜರಗುವ ಶ್ರೀ ದೇವಿಯ ರಥಾರೋಹಣದ ಪುಣ್ಯ ಕಾಲದಲ್ಲಿ ಭಗವತಿಯು ತನ್ನ ಪರಿವಾರ ಗಣಗಳಾದ ರಕ್ತೇಶ್ವರಿ , ಗುಳಿಗ , ವರಾಹ ಹಾಗೂ ದಾರಿಯಲ್ಲಿ ಕೂಡಿಕೊಳ್ಳುವ ಕೊಳಚಿಕಂಬ್ಳ ಜಾರಂದಾಯ ದೈವವನ್ನು ಕೂಡಿಕೊಂಡು ಬಪ್ಪನಾಡಿಗೆ ಆಗಮಿಸುತ್ತಾಳೆ.ಬಳಿಕ ಶ್ರೀ ದೇವಿಯ ಹಾಗೂ ಭಗವತಿಯ ಭೇಟಿಯಾಗುವುದು, ಇದೊಂದು ಅಪೂರ್ವ ಸನ್ನಿವೇಶ.
ಶ್ರೀ ದೇವಿಯ ದ್ವಿಗ್ವಿಜಯ:- ಧ್ವಜಾರೋಹಣದ 3ನೇ ದಿನದಿಂದ 6ನೇ ದಿನದವರೆಗೆ 4 ದಿನಗಳಲ್ಲಿ ಶ್ರೀ ದೇವಿಯು ನಾಲ್ಕು ದಿಕ್ಕುಗಳಿಗೆ ದ್ವಿಗ್ವಿಜಯ ಸವಾರಿ ಕೈಗೊಳ್ಳುತ್ತಾಳೆ. ಭಕ್ತಾಧಿಗಳ ಸನಿಹಕ್ಕೆ ಸವಾರಿ ಗೈಯುವ ದೇವಿಯು ಕಪ್ಪಕಾಣಿಕೆಗಳನ್ನು ಭಕ್ತರಿಂದ ಪಡಕೊಂಡು, ತನ್ನ ಭಂಡಾರವನ್ನು ವೃದ್ಧಿಪಡಿಸುವ ಮುಖೇನ ಭಕ್ತರನ್ನು ಉದ್ಧರಿಸುತ್ತಾಳೆ. ಪ್ರಥಮ ದ್ವಿಗ್ವಿಜಯ- ಮೂಡು ದಿಕ್ಕಿಗೆ, ಪೇಟೆ ಸವಾರಿ ಎಂದು ಕರೆಯಲ್ಪಡುತ್ತದೆ. ದ್ವಿತೀಯ ದ್ವಿಗ್ವಿಜಯ - ದಕ್ಷಿಣ ದಿಕ್ಕಿಗೆ, ಕೊಪ್ಪಲ ಸವಾರಿ, ತೃತಿಯ ದ್ವಿಗ್ವಿಜಯ- ಪಡು ದಿಕ್ಕಿಗೆ, ಬಾಕಿಮಾರು ದೀಪೋತ್ಸವ, ಚತುರ್ಥ ದ್ವಿಗ್ವಿಜಯ- ಉತ್ತರ ದಿಕ್ಕಿಣಲ್ಲಿರುವ ಪುಷ್ಕರಣಿಯಲ್ಲಿ ಕೆರೆ ದೀಪೋತ್ಸವ.
ಸೂಟೆದಾರ ಅಥವಾ ಬೆಂಕಿಯಾಟ:- ಶ್ರೀ ದೇವಿಯು ಜಳಕೋತ್ಸವದಿಂದ ವಿಮಾರಥಾರೂಢಳಾಗಿ ಮರಳಿ ಬರುವಾಗ ಪಡುಮನೆ ಕಟ್ಟೆಯ ಎದುರುಭಾಗದಲ್ಲಿನ ವಿಶಾಲಗದ್ದೆಯಲ್ಲಿ ಬೆಂಕಿಯಾಟ. ಇದೊಂದು ಅದ್ಭುತ ಹಾಗೂ ರಮ್ಯ ನೋಟ.
ಶಯನೋತ್ಸವ, ಶಯನದ ಹೂ ಅರ್ಪಣೆ:- ಹಗಲು ರಥೋತ್ಸವದ ದಿನದ ರಾತ್ರಿ ಬಲಿ ಉತ್ಸವಾದಿಗಳು ಮುಗಿದ ಬಳಿಕ ದೇವಿಯ ಶಯನೋತ್ಸವ ಜರಗುತ್ತದೆ. ಬಪ್ಪನಾಡಿನ ಶಯನದ ಬಲಿ ಹಾಗೂ ಶಯನಕ್ಕೆಂದು ಭಕ್ತರು ದೇವರಿಗೊಪ್ಪಿಸುವ ಮಲ್ಲಿಗೆ ಹೂವಿನ ರಾಶಿ ಒಂದು ಅಭೂತಪೂರ್ವ ನೋಟ. ತಮ್ಮ ಬೇಡಿಕೆ ನೆರವೇರಿದಾಗ ಮಲ್ಲಿಗೆ ಹೂವಿನ ಕಟ್ಟುಗಳನ್ನು ಒಪ್ಪಿಸುವುದು ಸಂಪ್ರದಾಯ.
ಬಪ್ಪನಾಡು ಡೋಲು (ಭೇರಿ):- ಇಲ್ಲಿ ಬಾರಿಸುವಷ್ಟು ಡೋಲುಗಳನ್ನು ನಾವು ಬೇರೆಲ್ಲೂ ಕಾಣಲೂ ಸಾಧ್ಯವಿಲ್ಲ. ಸೀಮೆಯ ಅರಸರು, ಒಂಭತ್ತು ಮಾಗಣೆಯಲ್ಲಿರುವ ಗುತ್ತುಗಳ ಯಜಮಾನರುಗಳ ಜೊತೆಯಲ್ಲಿ ಬರುವುದು ತಾಳ ಲಯಬದ್ಧವಾಗಿ ಕೊಳಲು ವಾದನದೊಂದಿಗೆ ಡೋಲುಗಳನ್ನು ಬಾರಿಸುವುದು ವಾಡಿಕೆ. ಪರಂಪರೆಯಿಂದ ಸುಮಾರು 32 ಗ್ರಾಮಗಳಿಂದ ಹಿಂದುಳಿದ ಸಮುದಾಯಕ್ಕೆ ಸೇರಿದ ಒಂದು ಜನಾಂಗದವರು ಸೇವೆ ಮಾಡುವ ಕ್ರಮವಿರುತ್ತದೆ. ಆದರೆ ಈ ಹಿಂದೆ ಜಾತ್ರೆಗೆ ಬರುವಷ್ಟು ಡೋಲುಗಳು ಈಗ ಕಾಣಲಾರೆವು.
ದುರ್ಗಾಪರಮೇಶ್ವರಿ ಕ್ಷೇತ್ರದ ಸಮೀಪ ಶಾಂಭವಿ ನದಿ ಇದೆ. ದೇವಳದ ಒಳಾಂಗಣದಲ್ಲಿ ಒಂದು ಕಲ್ಯಾಣಿ ಇದೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ದೇವಿಯ ಸಾನಿಧ್ಯದಿಂದ ಆರೋಗ್ಯ ಕ್ಷೇಮ ಅಭಿವೃದ್ಧಿಗೋಸ್ಕರ ಹಾಗೂ ಮದುವೆ ದೋಷ ನಿವಾರಣೆಗೆ, ತೀರ್ಥ, ಮೂಲಗಂಧ ಪ್ರಸಾದವು ಪ್ರಾಮುಖ್ಯತೆ ಪಡೆದಿರುತ್ತದೆ.