Screen Reader Access                 A-  A  A+ 
ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ ನಂದಾವರ- 57423131, ನಂದಾವರ, ದಕ್ಷಿಣ ಕನ್ನಡ - 574231, ದಕ್ಷಿಣ ಕನ್ನಡ .
Sri Vinayaka Shankaranarayana Durgamba Temple, Nandavara, Dakshina Kannada - 574231, Dakshina Kannada District [TM000042]
×
Temple History

ಇತಿಹಾಸ

ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ ನಂದಾವರ ಪಾಣೆಮಂಗಳೂರು, ಬಂಟ್ವಾಳ ತಾಲ್ಲೂಕು, ಈ ದೇವಸ್ಥಾನ ಸುಮಾರು 1200 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ದೇವಸ್ಥಾನವಾಗಿರುತ್ತದೆ. ಆದರೆ ಯಾವುದೇ ಶಾಸನಗಳು ಇರುವುದಿಲ್ಲ. ಈ ದೇವಾಲಯವು ನೇತ್ರಾವತಿ ನದಿ ತೀರದಲ್ಲಿ ಇದೆ. ಶ್ರೀ ದೇವಾಲಯವು ಉತ್ತರ ದಿಕ್ಕಿನಲ್ಲಿ ವರ್ಷದ 365 ದಿನವೂ ಮೈದುಂಬಿ ಹರಿಯುವ ನೇತ್ರಾವತಿ ನದಿ ಹಾಗೂ ನದಿ ತಟದಲ್ಲಿ ಕಲ್ಲುಬಂಡೆಗಳಿಂದ ಕೂಡಿದ್ದು, ನೋಡಲು ಮನೋಹರ ತಾಣವಾಗಿದೆ. ಶ್ರೀ ವಿನಾಯಕ ದೇವರಿಗೆ ಅಪ್ಪದ ಪೂಜೆ ವಿಶೇಷ ಸೇವೆ. ಯಾವ ಶುಭಕಾರ್ಯಗಳು ನಡೆಯುವ ಮುಂಚೆ ನಂದಾವರ ಶ್ರೀ ಮಹಾಗಣಪತಿ ದೇವರಿಗೆ ಅಪ್ಪದ ಪೂಜೆ ಹರಕೆ ಹೇಳಿದರೆ ಆ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಶಂಕರನಾರಾಯಣ ದೇವರಿಗೆ ರಂಗಪೂಜೆ ವಿಶೇಷ ಸೇವೆ. ಇದರಿಂದ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ದೋಷಗಳು ಪರಿಹಾರವಾಗುತ್ತದೆ....