Screen Reader Access                 A-  A  A+ 
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಾಂಡೇಶ್ವರ, ದಕ್ಷಿಣ ಕನ್ನಡ - 575001, ದಕ್ಷಿಣ ಕನ್ನಡ .
Sri Mahalingeshwara Temple, Pandeshwara, Dakshina Kannada - 575001, Dakshina Kannada District [TM000043]
×
Temple History

ಇತಿಹಾಸ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಮಧ್ಯೆ ಇರುವಂತಹ ಪರಮ ಪುಣ್ಯ ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಾಂಡೇಶ್ವರವಾಗಿರುತ್ತದೆ. ಪಶ್ಚಿಮಕ್ಕೆ ಮುಖ ಮಾಡಿ ನಿಂತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದೆ. ಪುರಾತನ ಕಾಲದಲ್ಲಿ ಸಮುದ್ರದ ಅಬ್ಬರ ತಗ್ಗಿಸಲು ಶ್ರೀ ಮಹಾಲಿಂಗೇಶ್ವರ ದೇವರನ್ನು ಪಶ್ಚಿಮಾಭಿಮುಖವಾಗಿ ಋಷಿಮುನಿಗಳು ಪ್ರತಿಷ್ಠಾಪಿಸಿರುತ್ತಾರೆ. ನಂತರದಲ್ಲಿ ಗ್ರಾಮೀಣ ಭಾಷೆಯಲ್ಲಿ ಶ್ರೀ ಕ್ಷೇತ್ರದ ಹೆಸರು ಪಡ್ಡಾಯಿ ಮಹಾಲೀಂಗೇಶ್ವರ ದೇವಸ್ಥಾನ (ಪಶ್ಚಿಮ ಮಹಾಲಿಂಗೇಶ್ವರ ದೇವಸ್ಥಾನ) ಎಂಬುದಾಗಿತ್ತು. ನಂತರದಲ್ಲಿ ದ್ವಾಪರ ಕಾಲದಲ್ಲಿ ಪಾಂಡವರ ವನವಾಸದ ಸಂದರ್ಭದಲ್ಲಿ ಮಧ್ಯಮ ಪಾಂಡವನಾದ ಅರ್ಜುನನಿಗೆ ಕಿರಾತನ ರೂಪದಲ್ಲಿ ದರುಶನವಿತ್ತು ತಾನು ಇರುವ ನೆಲೆಯನ್ನು ಮಹಾಲಿಂಗೇಶ್ವರ ದೇವರು ಸೂಚಿಸಿದ ಸಂದರ್ಭ ಪಾಂಡವರೆಲ್ಲ ಒಟ್ಟು ಸೇರಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದ ನಂತರ ಶ್ರೀ ಕ್ಷೇತ್ರ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ...