Screen Reader Access     A-AA+
ಶ್ರೀ ಅನಂತ ಪದ್ಮನಾಭ ದೇವಾಲಯ, ಕುಡುಪು, ದಕ್ಷಿಣ ಕನ್ನಡ - 575028, ದಕ್ಷಿಣ ಕನ್ನಡ .
Sri Anantha Padmanabha Temple, Kudupu, Dakshina Kannada - 575028, Dakshina Kannada District [TM000048]
×
Temple History

ಸ್ಥಳ ಪುರಾಣ

ಶ್ರೀ ದೇವಾಲಯವು ಕೃತಯುಗದಲ್ಲಿ ಸ್ಥಾಪಿಸಿದ ದೇವಾಲಯ ಎಂದು ಸ್ಥಳ ಪುರಾಣದಲ್ಲಿ ಉಲ್ಲೇಖವಿದೆ. ದೇವಾಲಯಕ್ಕೆ ಸುಮಾರು 800 ವರ್ಷಗಳಾಗಿವೆ. ವೀರಬಾಹು ಎನ್ನುವ ಅರಸ/ರಾಜ ತಾನು ಮಾಡಿದ ಪಾಪ ಕೃತ್ಯದ ನಿವಾರಣೆಗಾಗಿ ಕುಡುಪು ಎನ್ನುವ ಸ್ಥಳದಲ್ಲಿ ಶ್ರೀಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವರಿಗೆ ದೇವಾಲಯವನ್ನು ನಿರ್ಮಿಸಿದನು ಎಂದು ಸ್ಥಳ ಪುರಾಣದಲ್ಲಿ ಉಲ್ಲೇಖವಿದೆ. ದೇವಾಲಯದ ಮೂಲ ರೂಪ ಉದ್ಧವ ಲಿಂಗರೂಪದಲ್ಲಿದೆ. ನಿತ್ಯ ಪೂಜೆಗಳಿಗೆ ಪ್ರತಿಷ್ಠಾಪಿತ ಮೂರ್ತಿಯು ಇದೆ. ಶ್ರೀ ದೇವಾಲಯದಲ್ಲಿ ಪ್ರಧಾನವಾಗಿ ನಾಗದೇವರ ಆರಾಧನೆ ಇರುವುದರಿಂದ ನಾಗಸಂಬಂಧಿ ದೋಷಗಳು, ಚರ್ಮವ್ಯಾಧಿ ದೋಷಗಳು ಪರಿಹಾರವಾಗುತ್ತದೆ ಮತ್ತು ಸಂತಾನ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಶ್ರೀ ದೇವಾಲಯದ ಭದ್ರಾ ಸರಸ್ವತೀ ತೀರ್ಥ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿ ಉರುಳುಸೇವೆ ಮಾಡುವುದಕ್ಕೆ ಪ್ರಸಿದ್ದಿಯಾಗಿದೆ. ಶ್ರೀದೇವಾಲಯದಲ್ಲಿ ಆಶ್ಲೇಷಾಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ರಾತ್ರಿ ಹೂವಿನಪೂಜೆ...