Screen Reader Access                 A-  A  A+ 
ಶ್ರೀ ಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಾಲಯ, ಶಿವಗಂಗೆ, ಬೆಂಗಳೂರು ಗ್ರಾಮಾಂತರ - 562111, ಬೆಂಗಳೂರು ಗ್ರಾಮಾಂತರ .
Sri Gangadhareshwara Swamy and Honnadevi Temple, Shivagange, Bengaluru Rural - 562111, Bengaluru Rural District [TM000051]
×
Temple History

ಇತಿಹಾಸ

ಶ್ರೀ ಶಿವಗಂಗಾ ಕ್ಷೇತ್ರದ ಕಿರು ಪರಿಚಯ ಈ ಕ್ಷೇತ್ರವು ದಕ್ಷಿಣ ಕಾಶಿ ಕ್ಷೇತ್ರವೆಂದು ಪ್ರಸಿದ್ದವಾಗಿದ್ದು, ಈ ಕ್ಷೇತ್ರಕ್ಕೆ ಭಕ್ತಾಧಿಗಳು ಪ್ರತಿನಿತ್ಯವೂ ದೇವರ ದರ್ಶನಕ್ಕಾಗಿ ಆಗಮಿಸುತ್ತಾರೆ. ಇಲ್ಲಿಗೆ ಬಂದಂತ ಭಕ್ತರು ಕಾಶಿ ಕ್ಷೇತ್ರಕ್ಕಿಂತ ಒಂದು ಗುಲಗಂಜಿ ತೂಕದ ಹೆಚ್ಚಿನ ಪುಣ್ಯ ಪಡೆಯುತ್ತಾರೆಂಬ ನಂಬಿಕೆ ಇದೆ. ಈ ಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 2,640,03 ಅಡಿ ಎತ್ತರದಲ್ಲಿದ್ದು, ಈ ಬೆಟ್ಟವು ತಾವರೆ ಹೂವಿನ ಮೇಲೆ ಇದ್ದಂತೆ ಭಾಸವಾಗುತ್ತದೆ. ಈ ಕ್ರೇತ್ರದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ಯವರ ಮೂಲ ಮೂರ್ತಿಯು ಚರ್ತುಯುಗ ಮೂರ್ತಿಯಾಗಿದ್ದು, (ಶೈತ್ಯಲಿಂಗ) ಗಂಗೆಯಲ್ಲಿ ಉದ್ಭವವಾಗಿರುವುದರಿಂದ ಶಿವನಿಗೆ ಶ್ರೀ ಗಂಗಾಧರೇಶ್ವರಸ್ವಾಮಿ ಎಂದು ಹಾಗೂ ಈ ಕ್ಷೇತ್ರಕ್ಕೆ ಶಿವಗಂಗೆ ಎಂದು ಕರೆಯುತ್ತಾರೆ. ಈ ಕೇತ್ರದಲ್ಲಿ ದಿನನಿತ್ಯವೂ ಶೈವಾಗಮ ರೀತ್ಯಾ ಪೂಜಾ ಕೈಂಕರ್ಯಗಳು ನಡೆಯುತ್ತಿರುತ್ತವೆ. ಈ ಗಿರಿಯಲ್ಲಿ ನೋಡಬೇಕಾದ ಸ್ಥಳಗಳು ಅನೇಕ...