Screen Reader Access                 A-  A  A+ 
ಶ್ರೀ ಸುಗೂರೇಶ್ವರಸ್ವಾಮಿ ದೇವಸ್ಥಾನ, ದೇವಸೂಗೂರು, ರಾಯಚೂರು - 584170, ರಾಯಚೂರು .
Sri Sugureshwara Swamy Temple, Devasuguru, Raichur - 584170, Raichur District [TM000077]
×
Temple History

ಸಾಹಿತ್ಯದ ಹಿನ್ನೆಲೆ

| ಓಂ, ಶ್ರೀಗುರು ಪ್ರಸನ್ನಃ || || ಶ್ರೀ ಸೂಗೂರೇಶ್ವರಾಯ ನಮಃ || || ಶ್ರೀಮಾತಾ ನಾಗರ ಎಲ್ಲಮ್ಮದೇವಿಯೇ ನಮಃ || || ಶ್ರೀ ಸೂಗೂರೇಶ್ವರ ಸ್ವಾಮಿಯ ಲೀಲಾವತಾರ || || ಪರಮೇಶ್ವರನಾಣತಿಯಂತೆ | ಪಾರ್ವತಮಾತೆಯ || || ಆಜ್ಞೆಯಂಪಾಲಿಸಲ್ಕೆ | ಶ್ರೀ ವೀರಭದ್ರ ದೇವರು || || ಶ್ರೀಶೈಲದಲ್ಲವತರಿಸಿ | ಕಾಶ್ಮೀರದೊಳನುಗ್ರಹಿಸಿ || || ಕಲ್ಯಾಣಕ್ಕಾಗಮಿಸಿ | ಗಬ್ಬೂರಿನೋಳು ನೆಲಸಿ || || ಸೂಗೂರು ಸುಕ್ಷೇತ್ರದೊಳು ಸ್ಥಿರವಾಗಿರ್ದು || || ನಂಬಿದ ಭಕ್ತರನು ಸಲಹುವರು ನೋಡ || || ಶ್ರೀ ಸೂಗೂರೇಶ್ವರ ದರುಶನ ಲಿಂಗವೆ || ಬೌಗೋಳಿಕ ಭವ್ಯತೆ:- ಜಗತ್‌ಜ್ಜನನಿಯ ಲೀಲಾಜಾಲದ ಪಂಚ ಮಹಾ ಭೂತಗಳೊಳು ಜಡಚೇತನವಾದದ್ದು ಭೂಮಂಡಲ. ಭೂಮಂಡಲದೊಳು ಆಧ್ಯಾತ್ಮ ಚಿಂತನೆಯಲ್ಲಿ ಅತ್ಯುನ್ನತ ಸಾಧನೆಗೈದು ವೇದಾಗಮೋಪನಿಷತ್‌ಗಳಿಂದ ಜಗತ್‌ಪ್ರಸಿದ್ಧಿ ಪಡೆದದ್ದು ಭಾರತ ದೇಶ ಮಾತ್ರ. ಭಾರತಾಂಬೆಯ ಕಂದಮ್ಮರಲ್ಲಿ ಕನ್ನಡಿಯಂತೆ...