Screen Reader Access                 A-  A  A+ 
ಶ್ರೀ ಕಳಸೇಶ್ವರಸ್ವಾಮಿ ದೇವಾಲಯ, ಕಳಸ, ಚಿಕ್ಕಮಗಳೂರು - 577124, ಚಿಕ್ಕಮಗಳೂರು .
Sri Kalasheshwara swamy temple, Kalasa, Chikkamagaluru - 577124, Chikkamagaluru District [TM000084]
×
Temple History

ಸ್ಥಳ ಪುರಾಣ

ಕರ್ನಾಟಕ ರಾಜ್ಯ, ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಕಳಸ ಗ್ರಾಮದಲ್ಲಿ ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನವಿದೆ. ಸಹ್ಯಾದ್ರಿ ಪಶ್ಚಿಮಘಟ್ಟದಲ್ಲಿ ಕಳಸ ಗ್ರಾಮವು ಸುತ್ತಮುತ್ತಲೂ ಬೆಟ್ಟಗಳಿಂದ, ಹಸಿರು ತುಂಬಿದ ಅರಣ್ಯದಿಂದ ಹಾಗೂ ಚಿಕ್ಕಚಿಕ್ಕಜಲಪಾತಗಳಿಂದ ಹಾಗೂ ಭದ್ರಾನದಿಯಲ್ಲಿ ಸುಂದರ ಪರಿಸರದಲ್ಲಿ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನ ಸ್ಥಾಪಿಸಲ್ಪಟ್ಟಿದೆ. ಪೌರಾಣಿಕ ಹಿನ್ನಲೆ ಶ್ರೀ ಕಳಸ ಕ್ಷೇತ್ರದ ಮಹಿಮೆಯನ್ನು ಸ್ಕಾಂದ ಪುರಾಣದ ತುಂಗಾಭದ್ರಾ ಕಾಂಡದಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಕಳಸ ಕ್ಷೇತ್ರವು ಭದ್ರಾನದಿಯ ದಡದಲ್ಲಿರುವ ಪುರಾತನ ಕ್ಷೇತ್ರವಾಗಿದೆ. ಕಳಸ ಕ್ಷೇತ್ರವು “ದಕ್ಷಿಣಕಾಶಿ” ಎಂದು ಪುರಾಣ ಪ್ರಸಿದ್ದವಾಗಿದೆ.ಈ ಕ್ಷೇತ್ರದ ಉತ್ಪತ್ತಿಗೆ ಶ್ರೀ ಅಗಸ್ತ್ಯ ಮಹಾಮುನಿಯೇ ಕಾರಣರಾಗಿದ್ದಾರೆ. ಮಿತ್ರ ವರುಣರೆಂಬ ಋಷಿ ಸಹೋದರರಿಬ್ಬರೂ ವಿಹಾರ ಮಾಡುತ್ತಾ ತುಂಗಭದ್ರಾ ನದಿಯ ತೀರದಲ್ಲಿ ತಪಸ್ಸು ಮಾಡುತ್ತಿರಲು ಇವರ ತಪಸ್ಸಿನಿಂದ ಭೀತಗೊಂಡ ಇಂದ್ರನು ತಪಸ್ಸನ್ನು ಭಂಗ ಮಾಡಲು ಊರ್ವಶಿ ಎಂಬ ಅಪ್ಸರೆಯನ್ನು ಕಳುಹಿಸುತ್ತಾನೆ....