ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ತಲಕಾಯಲಬೆಟ್ಟ, ಚಿಕ್ಕಬಳ್ಳಾಪುರ - 562105, ಚಿಕ್ಕಬಳ್ಳಾಪುರ .
Sri Venkataramanaswamy Temple, Talakayalbetta, Chikkaballapura - 562105, Chikkaballapura District [TM000095]
×
Temple History
ಸಾಹಿತ್ಯದ ಹಿನ್ನೆಲೆ
ತಲಕಾಯಲ ಬೆಟ್ಟದ ಕೆಲವು ಇತಿಹಾಸಗಳು ಈ ಹೆಸರಿನ ಬೆಟ್ಟ ದೇವಸ್ಥಾನಗಳಿರುವುದು ದಿಂಬಾರಹಳ್ಳಿ, ದಾಸರಹಳ್ಳಿ ಜೋಡಿ ಗ್ರಾಮದ ಮಜರಾ ವೆಂಕಟಾಪುರದಲ್ಲಿರುತ್ತದೆ. ತಲಕಾಯಲ ಬೆಟ್ಟ ಸರ್ಕಾರಿ ಗ್ರಾಮ ಹಳೇ ಊರಿನಲ್ಲಿ ಬಹಳ ಹಿಂದೆ ದೇವಾಲಯವಿದ್ದು ಇಲ್ಲಿ ಈಗ ಪ್ರತಿಷ್ಠಾಪಿತ ಶಿಲಾ ಮೂರ್ತಿಗಳು ಶ್ರೀ ಭೂ ನೀಳಾ ಸಮೇತರಾಗಿದ್ದು, ಕಾಲಕ್ರಮದಲ್ಲಿ ಕಾರಣಾಂತರ ದೇವಾಲಯದ ಮೂರ್ತಿಗಳು ಬೆಟ್ಟದ ಬಳಿಯಿದ್ದ ವೆಂಕಟೇಶ ಸಾಗರವೆಂಬ ದೊಡ್ಡ ಹಿಂದಿನ ಕಾಲದ ಮಣ್ಣಿನ ಕಟ್ಟೆ, ಪಾಪಾಧ್ಯ ನದಿಯ ಕಟ್ಟೆ ನೂರಾರು ವರ್ಷಗಳ ಹಿಂದೆ ಧಾರಾಕಾರ ಮಳೆಯಿಂದ ನೀರು ಕಟ್ಟೆಯ ಮೇಲೆ ಉಕ್ಕಿ ದೇವಾಲಯಕ್ಕೂ ನೀರು ನುಗ್ಗಲು ಶ್ರೀವೆಂಕಟರಮಣ ಸ್ವಾಮಿಯು ಬೆಟ್ಟದ ಶಿಖರದಲ್ಲಿ ಶ್ವೇತಾಂಬರಧಾರಿಯಾಗಿ, ಶ್ವೇತಾಶ್ವರೂಢರಾಗಿ, ಖಡ್ಗದಿಂದ ಕೆರೆಕಟ್ಟೆಯನ್ನು ಮೂರು ಕಡೆ ಕತ್ತರಿಸಿದಂತೆ ಭಕ್ತನೊಬ್ಬನಿಗೆ ಕನಸಾಗಿ ಪ್ರತ್ಯಕ್ಷ ಕಂಡು ಬಂದು, ಅದರಂತೆ ಶ್ರಾವಣ ಮಾಸದಲ್ಲಿ ತಲಕಾಯಲ...ತಲಕಾಯಲ ಬೆಟ್ಟದ ಕೆಲವು ಇತಿಹಾಸಗಳು ಈ ಹೆಸರಿನ ಬೆಟ್ಟ ದೇವಸ್ಥಾನಗಳಿರುವುದು ದಿಂಬಾರಹಳ್ಳಿ, ದಾಸರಹಳ್ಳಿ ಜೋಡಿ ಗ್ರಾಮದ ಮಜರಾ ವೆಂಕಟಾಪುರದಲ್ಲಿರುತ್ತದೆ. ತಲಕಾಯಲ ಬೆಟ್ಟ ಸರ್ಕಾರಿ ಗ್ರಾಮ ಹಳೇ ಊರಿನಲ್ಲಿ ಬಹಳ ಹಿಂದೆ ದೇವಾಲಯವಿದ್ದು ಇಲ್ಲಿ ಈಗ ಪ್ರತಿಷ್ಠಾಪಿತ ಶಿಲಾ ಮೂರ್ತಿಗಳು ಶ್ರೀ ಭೂ ನೀಳಾ ಸಮೇತರಾಗಿದ್ದು, ಕಾಲಕ್ರಮದಲ್ಲಿ ಕಾರಣಾಂತರ ದೇವಾಲಯದ ಮೂರ್ತಿಗಳು ಬೆಟ್ಟದ ಬಳಿಯಿದ್ದ ವೆಂಕಟೇಶ ಸಾಗರವೆಂಬ ದೊಡ್ಡ ಹಿಂದಿನ ಕಾಲದ ಮಣ್ಣಿನ ಕಟ್ಟೆ, ಪಾಪಾಧ್ಯ ನದಿಯ ಕಟ್ಟೆ ನೂರಾರು ವರ್ಷಗಳ ಹಿಂದೆ ಧಾರಾಕಾರ ಮಳೆಯಿಂದ ನೀರು ಕಟ್ಟೆಯ ಮೇಲೆ ಉಕ್ಕಿ ದೇವಾಲಯಕ್ಕೂ ನೀರು ನುಗ್ಗಲು ಶ್ರೀವೆಂಕಟರಮಣ ಸ್ವಾಮಿಯು ಬೆಟ್ಟದ ಶಿಖರದಲ್ಲಿ ಶ್ವೇತಾಂಬರಧಾರಿಯಾಗಿ, ಶ್ವೇತಾಶ್ವರೂಢರಾಗಿ, ಖಡ್ಗದಿಂದ ಕೆರೆಕಟ್ಟೆಯನ್ನು ಮೂರು ಕಡೆ ಕತ್ತರಿಸಿದಂತೆ ಭಕ್ತನೊಬ್ಬನಿಗೆ ಕನಸಾಗಿ ಪ್ರತ್ಯಕ್ಷ ಕಂಡು ಬಂದು, ಅದರಂತೆ ಶ್ರಾವಣ ಮಾಸದಲ್ಲಿ ತಲಕಾಯಲ ಬೆಟ್ಟ ಹಳೇ ಊರಲ್ಲಿದ್ದ, ವಿಗ್ರಹಗಳನ್ನು ಇಲ್ಲಿಯ ಹಿಂದಿನ ದೇವಾಲಯದಲ್ಲಿ ಎರಡನೇ ಬಾರಿ ಇದ್ದ ಬೊಮ್ಮಪ್ಪ (ಉದ್ಭವಮೂರ್ತಿ) ಹಿಂದೆ ಭದ್ರಪೀಠದಲ್ಲಿ ಸ್ಥಾಪಿಸಿ ಜೀರ್ಣೋದ್ಧಾರ ಗೊಳಿಸಿದರೆಂದು ತಿಳಿದು ಬರುತ್ತದೆ. ಈ ಸಂದರ್ಭದಲ್ಲಿ ಕಟ್ಟೆ ಕತ್ತರಿಸುವಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ, ದೇವರು ಮತ್ತು ಕುದುರೆ ಸಹ ಬೆಟ್ಟದ ಪೂರ್ವದ ಕಡೆ ಒಂದು ಬಂಡೆಯ ಮೇಲೆ ನಿಂತು ಪ್ರವಾಹವನ್ನು ವೀಕ್ಷಿಸಿ ಮತ್ತೆ ಅದೃಶ್ಯರಾದ್ದರಿಂದ ಈಗ ಈ ದೊಡ್ಡ ಬಂಡೆ ಪಾದಾಲ ಬಂಡೆ ಎಂದು ಹೆಸರುಗೊಂಡಿದೆ. ಈ ಪಾದಾಲ ಬಂಡೆ ಬಳಿ ದೊಡ್ಡ `ಮಡುವ` ನದಿ ಸುಳಿಯ ಹಳ್ಳವಿದ್ದು ಇಂತಹ ಹಲವಾರು ಅಳವಾದ ಮಡುವುಗಳು ನದಿಯಲ್ಲಿ ಇದ್ದು, ಹಿಂದೆ ಎಂತಹ ಬಿಸಿಲು ಕಾಲವಾದರೂ ನದಿ ನೀರು ಬತ್ತುತ್ತಿರಲಿಲ್ಲ. ಹಿಂದಿನ ಸತ್ಯಕಾಲದಲ್ಲಿ ಈ ಮಡುವಿನಲ್ಲಿ ಒಂದು ಸಂದರ್ಭದಲ್ಲಿ `ನಾಕು ಛಲಿಯಂಡೋ ಎಂಬ ಧ್ವನಿಯನ್ನು ಕೇಳಿದ ದಿಬ್ಬಂಹಳ್ಳಿ `ಕೂಗುಟ್ಟು ಗೋತ್ರದ ರೆಡ್ಡಿದೋರು ತಲಕಾಯಲ ಬೆಟ್ಟದ ಗ್ರಾಮದ ಮರೈಲು ಗೋತ್ರದ ರೆಡ್ಡಿಯೋರು ಈ ಇಬ್ಬರೂ ಸೇರಿ ಈ ಮಡುವಿನಿಂದ ತಾವುದ ಪಂಚಲೋಹ ಭೂ, ನೀಳಾ ಸಮೇತ ಉತ್ಸವ ಮೂರ್ತಿಗಳನ್ನು ಮಡುವಲ್ಲಿ ಮುಳುಗಿ ತೆಗೆದು ದೇವಾಲಯಕ್ಕೆ ಕೊಟ್ಟರೆಂದು ಅಂದಿನಿಂದ ಕಲ್ಯಾಣೋತ್ಸವ ಪ್ರಾರಂಭಿಸಿದರೆಂದು ಐತಿಹ್ಯವಿದೆ. ಈ ಮೂರ್ತಿಗಳನ್ನು ಈಗಲೂ ನಿತ್ಯೋತ್ಸವಕ್ಕೆ ಉಪಯೋಗಿಸಲಾಗುತ್ತಿದೆ. ಇಲ್ಲಿ ಎರಡು ಜೊತೆ ಉತ್ಸವ ಮೂರ್ತಿಗಳಿವೆ. ಈಗ ಹೊಸದಾಗಿ ದೊರೆತ ಉತ್ಸವಮೂರ್ತಿಗಳನ್ನು ನಾಕು ಛಲಿಯಂಡೋ`` ಎಂದು ಕೂಗಿ ಕಂಡದ್ದಕ್ಕಾಗಿ – ಅರುವುಲು ತಿಮ್ಮಪ್ಪ - ಕೂತಲು ಸ್ವಾಮಿ ಮಳೆಯಪ್ಪ` ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಹಿಂದಿನ ವಾಲ್ಮೀಕಿ (ಮುತ್ತುರಾಯ)ಯ ಕಾಲದ ಗುರಿ - ಗುಟ್ಟಿಗಳೂ, ದಾರಿ ತೋರುವ ಕಲ್ಲುಗಳ ರಾಶಿ, ತಮಟಾಲ ಗುಂಡು, ಪಾದಾಲ ಬಂಡ ಇತ್ಯಾದಿಗಳು, ಅನೇಕ ಗವಿಗಳು, ಗುಹಗಳೂ ಇವೆ. ಪುಷ್ಯ ಶುದ್ಧ ಪೂರ್ಣಿಮಾ ದಿನ ಗಿರಿಪ್ರದಕ್ಷಿಣೆಗಳಿಗೆ ಶ್ರೀ ವೆಂಕಟರಮಣ ಸ್ವಾಮಿಯನ್ನು ಉತ್ಸವದಲ್ಲಿ ತಂದು ಈ ಪ್ರಮುಖ ಕಡೆಗಳಲ್ಲಿ ಸ್ವಾಮಿಗೆ ವಿಶೇಷ ಪೂಜಾದಿಗಳನ್ನು ಸಲ್ಲಿಸುತ್ತಾರೆ. ಈ ದಿನವೇ ನಿಶ್ಚಿತಾರ್ಥ ಸೇವೆ ಮುಂದಿನ ಪೂರ್ಣಿಮಾ `ಮಾಘ ಶುದ್ಧ ಪೂರ್ಣಿಮಾ` ರಥೋತ್ಸವ ಇದರ ಅಂಗವಾದ ಉತ್ಸವಾದಿಗಳಿಗೆ ದೇವಾದಿ ದೇವರುಗಳನ್ನು ಮೈತಳಿಸುವ ಉತ್ಸವ ಇದು ಈಗಲೂ ಪ್ರತಿವರ್ಷ ಇಲ್ಲಿ ನಡೆಯುತ್ತವೆ. ಈ ಬೆಟ್ಟದಲ್ಲಿ ನಿಧಿಯಿದೆ. ಹುಡುಕಿ ನೋಡಿ`` ಇದರ ಅರ್ಥ ಈ ಬೆಟ್ಟದ ಗವಿಗಳಲ್ಲಿ ಮಹರ್ಷಿಗಳು, ಮುನಿಗಳು, ಯೋಗಿಗಳು ಇದ್ದಾರೆ - ಹುಡುಕು ಎಂಬ ಗುಟ್ಟಿನ ಮಾತನ್ನು ನಾರಾಯಣ ತಾತನವರು ಹೇಳಿದ್ದಾರೆ. ಇದು ಮಾನವನ ತಲೆಗೂ ಅನ್ವಯವಾಗುವ ಮಾತಾಗಿದೆ. ಇದಕ್ಕಾಗಿ ಮಸ್ತಕಾಚಲವೆಂದಿದ್ದಾರೆ. ಇಲ್ಲಿ ಭಗವಂತನ ಛಾಯಾದರ್ಶನ` (ನೆರಳು) ಪಡೆದವರೂ ಇದ್ದಾರೆ. ತಿಮ್ಮನಾಯಕನ ಹಳ್ಳಿಯ ಖ್ಯಾತ ಜ್ಯೋತಿಷ್ಯ ವಿದ್ವಾಂಸರೂ, ತೆಲುಗು ಆಶುಕವಿಗಳೂ, `ನಂದಿಗಡ` ಪಂಚಾಂಗ ಕರ್ತರು ಈ ದೇವಾಲಯದ ಸ್ಥಳ ಪುರೋಹಿತರೂ ಆದ ಶ್ರೀ ವೆಂಕಟದಾಸ ಶಾಸ್ತ್ರಿಗಳು ಈ ಬೆಟ್ಟದಲ್ಲಿ ಧ್ಯಾನಾಸಕ್ತರಾಗಿ ಛಾಯಾ ದರ್ಶನ ಪಡೆದು ನಂತರ ಸನ್ಯಾಸಾಶ್ರಮ ಸ್ವೀಕರಿಸಿ ಶ್ರೀ ಶ್ರೀ ವೆಂಕಟೇಶ ಭಾರತಿ ಸ್ವಾಮಿಗಳೆಂದು ಖ್ಯಾತಿ ಪಡೆದ ಸಿದ್ಧ ಪುರುಷರಾಗಿರುತ್ತಾರೆ.