Screen Reader Access                 A-  A  A+ 
ಶ್ರೀ ಅಮೃತೇಶ್ವರ ದೇವಸ್ಥಾನ, ತಿರುವೈಲು, Mangalore - 575028, ದಕ್ಷಿಣ ಕನ್ನಡ .
Sri Amrutheshwara Temple, Tiruvailu, Dakshina Kannada - 575028, Dakshina Kannada District [TM000099]
×
Temple History

ಇತಿಹಾಸ

ಸುಮಾರು ನಾನ್ನೂರು ವರ್ಷಗಳ ಹಿಂದೆ, ಈಗ ಕುಂಬುಳೆಯ ಮಾಯಪ್ಪಾಡಿಯಲ್ಲಿರುವ ಕ್ಷತ್ರಿ ಅರಸರ ಕುಟುಂಬಿಕರು ಮಂಗಳೂರು ತಾಲೂಕಿನ, ಉಳಾಯಿಬೆಟ್ಟು ಗ್ರ್ರಾಮದ ಅನಂತ ಕೋಡಿ ಎಂಬಲ್ಲಿ ಅರಮನೆ ಕಟ್ಟಿಕೊಂಡು ವಾಸಮಾಡಿ, ಆ ಪ್ರಾಂತ್ಯವನ್ನು ಆಳುತ್ತಿದ್ದರು. ಆ ಕಾಲದ ರಾಜನೇ ರಾಮಂತಾಯ ಎಂಬ ಕ್ಷತ್ರಿಯ ಅರಸನು, ಅವನಿಗೆ ಕೃಷ್ಣ ಶರ್ಮ, ರಾಮ ಶರ್ಮ ಎಂಬಿಬ್ಬರು ಅಳಿಯಂದಿರಿದ್ದರು. ಕೃಷ್ಣ ಶರ್ಮನು ತಿರುವೈಲು ಗ್ರಾಮದ ಪರಾರಿ ಎಂಬ ಸ್ಥಳದಲ್ಲಿಯೂ, ರಾಮಶರ್ಮನು ಉಳಾಯಿಬೆಟ್ಟು ಗ್ರಾಮದ ಇಡ್ಮ ಪರಾರಿ ಎಂಬ ಸ್ಥಳದಲ್ಲಿಯೂ ಅರಮನೆ ಕಟ್ಟಿಕೊಂಡು ವಾಸವಾಗಿದ್ದರು. ಕೃಷ್ಣಶರ್ಮನಿಗೆ ತಿರುವೈಲು ಗ್ರಾಮದಲ್ಲಿ ೪೨ ಕೋರ್ಜಿ ಅಕ್ಕಿ ಸ್ಥಳ ಹಾಗು ರಾಮಶರ್ಮನಿಗೆ ೪೨ ಕೋರ್ಜಿ ಅಕ್ಕಿಯ ಸ್ಥಳವನ್ನು ರಾಜಸ್ಥಾನದಿಂದ ಬಿಟ್ಟಿದ್ದರು. ಅವರ ಕುಲದೇವತರಾಗಿ ಉಳಾಯಿಬೆಟ್ಟು ಗ್ರಾಮದ ಸಾಲೆ ಎಂಬಲ್ಲಿ ಗಣಪತಿ ಮತ್ತು ಈಶ್ವರ ದೇವಸ್ಥಾನವಿತ್ತು. ಈ ದೇವಸ್ಥಾನದ ಉತ್ತರ...