ಯಾದಗಿರಿ ಜಿಲ್ಲೆಯ ಐತಿಹಾಸಿಕ ಪ್ರಸಿದ್ದ ಶ್ರೀ ಮೈಲಾರಲಿಂಗೇಶ್ವರ ದೇವಾಲಯವು 15ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಹಾಗೂ ಸದರಿ ದೇವಾಲಯದ ವಿಶೇಷತೆಯೆಂದರೆ ದೀಪಾವಳಿ ಹಾಗೂ ಮಕರ ಸಂಕ್ರಾಂತಿಗಳಂದು ಅದ್ಬುತವಾದ ಜಾತ್ರೆ ನಡೆಯುತ್ತದೆ ಅಲ್ಲದೇ ಸದರಿ ಜಾತ್ರೆಯ ನಿಮಿತ್ತ ಪಲ್ಲಕ್ಕಿ ಉತ್ಸವ ಹಾಗೂ ಸರಪಳಿ ಹರಿಯುವ ಕಾರ್ಯಕ್ರಮ ತುಂಬಾ ವಿಶೇಷತೆಯಾಗಿರುತ್ತದೆ. ಆದುದರಿಂದ ಸದರಿ ಶ್ರೀ ಮೈಲಾರಲಿಂಗೇಶ್ವರ ದೇವಾಲಯಕ್ಕೆ ಇನ್ನೊಂದು ಹೆಸರು ಶ್ರೀ ಮೈಲಾರ ಕೋಟಿ ಅಥವಾ ಏಳು ಕೋಟಿ ಮಲ್ಲಯ್ಯ ಎಂದು ಕರೆಯಲಾಗಿರುತ್ತದೆ. ಕೃತಕ ಯುಗದಲ್ಲಿ ಏಳು ಧರ್ಮಪುತ್ರ ಋಷಿಗಳೂ ಮಣಿಚೂರವೆಂಬ ಪರ್ವತದ ಮೇಲೆ ಜಪ, ತಪ, ಯಜ್ಞ ಯುಗಾದಿಗಳನ್ನು ಮಾಡುತ್ತಾ ತಮ್ಮ ಅತ್ಯಂತ ಸುಶೀಲ ಪತ್ನಿ ಪುತ್ರರೊಂದಿಗೆ ಆಶ್ರಮ ಮಾಡಿಕೊಂಡು ಸುಖವಾಗಿ ಕಾಲ ಕಳೆಯುತ್ತಿದ್ದರು. ಎಲ್ಲರೂ ತಮ್ಮ ಕಠೋರ ತಪೋಬಲದಿಂದ ತೇಜಸ್ವಿಯಾಗಿದ್ದರು. ಇದೇ...