“ಸ್ಕಂದಸ್ಯ ಕೀರ್ತಿಂ ಅತುಲಾಂ ಕಲಿಕಲ್ಮಷನಾಶಿನೀಂ” ಎಂಬುದಾಗಿ ಮಹಾಭಾರತದಲ್ಲಿ ವೇದವ್ಯಾಸ ಮಹಷಿ೯ಗಳು ಶ್ರೀ ಸುಬ್ರಹ್ಮಣ್ಯ ದೇವರ ಕೀತಿ೯ಯನ್ನು ಕೊಂಡಾಡಿದ್ದಾರೆ. “ಸೇನಾನಿನಾಂ ಅಹಂ ಸ್ಕಂದಃ” ಎಂಬುದಾಗಿ ಭಗವದ್ಗೀತೆಯಲ್ಲಿ ಸ್ವಯಂ ಭಗವಂತನೇ ತಾನು ಸುಬ್ರಹ್ಮಣ್ಯನ ರೂಪದಲ್ಲಿ ದೇವಸೇನಾಧಿಪತಿಯಾಗಿರುವುದಾಗಿ ಹೇಳಿದ್ದಾರೆ. ಸಾಧು ಸಂರಕ್ಷಣೆ, ಪಾಪ ವಿಮೋಚನೆ, ಧಮ೯ಸಂಸ್ಥಾಪನೆ ಮಾಡುವುದಕ್ಕಾಗಿ ಆಯಾ ಯುಗದಲ್ಲಿ ಮಾಡಿದ ಅವತಾರ ವಿಶೇಷಗಳಲ್ಲಿ ಶ್ರೀ ಕುಮಾರ ಸ್ವಾಮಿಯ ಅವತಾರವೂ ಮುಖ್ಯವಾದುದು. ದೇವೇಂದ್ರನಿಂದ ದೇವ ಸೇನಾಪತಿ ಪದವಿಯಲ್ಲಿ ಪಟ್ಟಾಭಿಷಿಕ್ತನಾಗಿ, ತಾರಕಾಸುರನ ಸಂಹಾರ ಮಾಡಿ ತಿರುಗಿ ದೇವರಾಜ್ಯವನ್ನು ಸಂಪಾದಿಸಿಕೊಟ್ಟ ಅಸಾಮಾನ್ಯ ಕೀತಿ೯ಯುಳ್ಳ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಪರಶುರಾಮ ಸೃಷ್ಟಿಯ ಈ ಸುಂದರ ಕಡಲತಡಿ/ಕಡಲ ತೀರ ಮಂಗಳೂರಿನಿಂದ ಉತ್ತರಕ್ಕೆ ಹಳೆಯಂಗಡಿ ಸಮೀಪದ ನಮ್ಮ ತೋಕೂರು ಗ್ರಾಮದಲ್ಲಿ ಸುಮಾರು 800 ವಷ೯ಗಳ ಪೂವ೯ದಲ್ಲಿ ಪ್ರತಿಷ್ಠೆ ಮಾಡಿರುವ ಖ್ಯಾತಿ ಇದೆ. ಆಯಾ ಕಾಲದ...