ಡಿಂಕದಮ್ಮ ಶ್ರೀಮಾನ್ನಾರಯಣ್ಣನ ಪತ್ನಿ ಮಹಾಲಕ್ಷ್ಮಿಯ ಅವತಾರ ಎಂಬುದು ಇಲ್ಲಿನವರ ನಂಬಿಕೆ ಬಹಳ ಹಿಂದೆಡಿಂಬಾಕಾಶೂರ ಎಂಬ ರಾಕ್ಷಸನು ಈಗಿನ ಬೇಬಿ ಬೆಟ್ಟ್ಡದಲ್ಲಿ ವಾಸವಾಗಿದ್ದುಕೊಂಡುಅಕ್ಕಪಕ್ಕದಜನರಿಗೆತುಂಬಾ ಹಿಂಸೆ ಕೊಡುತ್ತಿದ್ದನು.ಈತನುಜನರನ್ನು ವಂಚಿಸಲು ಸುಂದರವಾದ ಮಗುವಿನ ರೂಪ ತಾಳಿ ಬೆಟ್ಟದಲ್ಲಿ ಸುಳಿದಾಡುತ್ತಿದ್ದ.ಇದನ್ನು ನೋಡಲುಯಾರಾದರೂ ಬಂದರೆ, ಅದ್ಭುತಾಕಾರವಾಗಿ ಬೆಳೆದು ಜನರನ್ನು ನುಂಗುತ್ತಿದ್ದನು.ಈಗೆಯೇ ಇವನ ದಿನಚರಿಯ ಕೆಲಸವಾಗಿತ್ತು. ಅದಕ್ಕಾಗಿಯೇ ಈ ಬೆಟ್ಟಕ್ಕೆ ಮಗುವಿನ ಬೆಟ್ಟವೆಂದು ಹೆಸರು.ಇಂಗ್ಲೀಷಿನರುಇದನ್ನು ಬೇಬಿ ಹಿಲ್ (ಬೇಬಿ ಬೆಟ್ಟ) ಎಂಧು ಕರೆದರು.ಡಿಂಬಕನ ಹಾವಳಿಯನ್ನು ತಾಳಲಾರದೇ ಕೆಲವರು ಕೊಡಗು ಪ್ರಾಂತ್ಯಕ್ಕೆ ವಲಸೆ ಹೋಗಿ ಬಿಟ್ಟರು. ಇನ್ನುಳಿದ ಕೆಲವರು ಇವನ ಕಣ್ಣಿಗೆ ಬೀಳದಂತೆ ಪಕ್ಕದಅರಣ್ಯ ಪ್ರದೇಶದಲ್ಲಿವಾಸ ಮಾಡಲು ನಿಶ್ಚಯಿಸಿ ತಲೆ ತಪ್ಪಿಸಿಕೊಂಡು ಬಾಳುತ್ತಿದ್ದರು.ಈ ಮಾಯಾವಿ ರಾಕ್ಷಸರಿಂದ ಆಗಾಗ್ಗೆ ದೇವತೆಗಳಿಗೂ ಕಷ್ಟ ತಪ್ಪುತ್ತಿರಲಿಲ್ಲ. ಇದಕ್ಕಾಗಿಯೇ ದೇವತೆಗಳೆಲ್ಲರೂ ಸೇರಿ ಶ್ರೀ ಮಹಾ ವಿಷ್ಣುವಿನಲ್ಲಿ ಮೊರೆ ಇಡಲಾಗಿ ಕರುಣಾ...