ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ಭಕ್ತರ ಪಾಲಿನ ಶಕ್ತಿ. ಮನಸ್ಸಿನಲ್ಲಿ ಸಂಕಲ್ಪತೊಟ್ಟು ಕ್ಷೇತ್ರದ ದೇವರಿಗೆ ಶರಣು ಎಂದರೆ ಇಷ್ಟಾರ್ಥ ಈಡೇರುತ್ತದೆ ಎಂಬುದು ನಂಬಿಕೆ. ಈ ನಂಬಿಕೆಯೇ ಶ್ರೀ ಕೋಟಿಲಿಂಗೇಶ್ವರ ಮತ್ತು ಭಕ್ತರ ನಡುವೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದೆ. ಯಾಕೆಂದರೆ ನಂಬಿದವರನ್ನು ಎಂದೂ ಶ್ರೀ ಕೋಟಿಲಿಂಗೇಶ್ವರ ಮತ್ತು ಕ್ಷೇತ್ರದ ದೇವಶಕ್ತಿ ಕೈಬಿಡಲಿಲ್ಲ. ಇದರಿಂದಾಗಿ ಇಲ್ಲಿ ನಡೆಯುವ ರಥೋತ್ಸವಕ್ಕೆ ನಾಡು ಸೇರಿದಂತೆ ದೇಶ ವಿದೇಶದಲ್ಲಿರುವ ಭಕ್ತರ ದಂಡೇ ಕ್ಷೇತ್ರದತ್ತ ಮುಖ ಮಾಡಿ ಬರುತ್ತದೆ. ಧ್ವಜಪುರ ಅನ್ಯರ್ಥ ನಾಮಾಂಕಿತ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ (ಕೊಡಿ ಹಬ್ಬ) ಉಲ್ಲಾಸದ ಸಂಕೇತ. ಪರಶುರಾಮ ಸೃಷ್ಠಿಯ ಕರಾವಳಿಯ ಈ ಭೂಮಿಯಲ್ಲಿ ಕೋಟೇಶ್ವರವು ಪರಮ ಪಾವನ ಎಂದು ನಂಬಲಾಗುತ್ತಿದೆ....