ಕೋಲಾರ ನಗರ ದೇವತೆ ಕೋಲಾರಮ್ಮ ದೇವಿಯು ಪರಶುರಾಮ ಪ್ರತಿಷ್ಠೆ ಮಾಡಿರುತ್ತಾರೆ ಮತ್ತು ಅವರ ತಾಯಿಯ ಶಿರಸ್ಸು ಖಂಡನೆ ಮಾಡಿದ ಶಾಪ ನಿವೃತ್ತಿಗಾಗಿ ಪರಶುರಾಮನು ಪ್ರತಿನಿತ್ಯ ಒಂದು ಶಕ್ತಿ ದೇವರನ್ನು ಪ್ರತಿಷ್ಠಾಪನೆ ಮಾಡಿ ಅವರು ಊಟ ಮಾಡಬೇಕು ಇಲ್ಲವಾದಲ್ಲಿ ಅವರು ತಿನ್ನುವಂತಹ ಊಟವು ಹುಳುಗಳಾಗಿ ಕಾಣುತ್ತದೆ ಹಾಗಾಗಿ ಪರಶುರಾಮರು ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿ ರೇಣುಕಾದೇವಿ ಎಂದು ನಾಮಧೇಯ ಮಾಡಿರುತ್ತಾರೆ ಮತ್ತು ಸಪ್ತಮಾತೃಕೆಯರ ಸಮೇತ ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ ಸಪ್ತಮಾತೃಕೆ ರಲ್ಲಿ ಮೊದಲನೇದಾಗಿ ಬ್ರಾಹ್ಮಿ ಎರಡನೆಯದು ಮಹೇಶ್ವರಿ ಮೂರನೆಯದು ಕುಮಾರಿ ನಾಲ್ಕನೆಯದು ವೈಷ್ಣವಿ ಐದನೆಯದು ವಾರಹಿ ಆರನೆಯ ಅಮ್ಮನವರು ಇಂದ್ರಾಣಿ ಏಳನೆಯದು ಚಾಮುಂಡೇಶ್ವರಿ. ಅಮ್ಮನವರ ದೃಷ್ಟಿ ಬಹಳ ಕ್ರೂರವಾದ ರಿಂದ ಮತ್ತು ಕೋಪವಾ ದರಿಂದ ಅಮ್ಮನವರನ್ನು ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಿರುತ್ತಾರೆ. ಅಮ್ಮನವರು ಬಹಳ ರೌದ್ರ ವಾಗಿರುವುದರಿಂದ...