ಶ್ರೀಮತಿ ಬಂಡಿಶೇಷಮ್ಮ ಎಂಬುವವರು ಸುಮಾರು 300 ವರ್ಷಗಳ ಹಿಂದೆ ಪತ್ರದಲ್ಲಿ ವಾಸವಿದ್ದು, ಇವರು ಅವಿವಾಹಿತರಾಗಿದ್ದು, ಛತ್ರದ ಆವರಣದ ಖಾಲಿ ಜಾಗದಲ್ಲಿ ಹಳ್ಳಿಯ ರೈತರು ತಾವು ಬೆಳೆದ ಬೆಳೆಗಳನ್ನು ಬಂಡಿಗಳಲ್ಲಿ ತಂದು ರಾತ್ರಿ ತಂಗಿದ್ದು, ವ್ಯಾಪಾರವನ್ನು ಮಾಡಿಕೊಂಡು ಹೋಗುತ್ತಿದ್ದರು. ಆದುದರಿಂದ ಶ್ರೀಮತಿ ಬಂಡಿಶೇಷಮ್ಮ ಎಂಬ ಹೆಸರು ಬಂದಿರುತ್ತದೆ. ಶ್ರೀಮತಿ ಬಂಡಿಶೇಷಮ್ಮನವರು ಛತ್ರದ ಆವರಣದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ವಿದ್ಯಾರ್ಥಿ ನಿಲಯ, ಅಂಗಡಿ, ಕಟ್ಟಡ ಒಳಗೊಂಡಿರುತ್ತದೆ. ಶ್ರೀಮತಿ ಬಂಡಿಶೇಷಮ್ಮ ಛತ್ರದ ಮುಂಭಾಗದಲ್ಲಿ 10 ಅಂಗಡಿ ನಿರ್ಮಿಸಲಾಗಿದೆ. ಈ ಅಂಗಡಿಗಳಿಂದ ಬರುವ ಬಾಡಿಗೆಯಿಂದ ಛತ್ರದ ನಿರ್ವಹಣೆ ಮಾಡಲಾಗುತ್ತಿದೆ. ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 22 ಕೊಠಡಿಗಳಿದ್ದು 45 ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ