ಕರ್ನಾಟಕ ರಾಜ್ಯವು ಧಾರ್ಮಿಕ ಸಂಸ್ಕøತಿಗೆ ಹೆಸರುವಾಸಿಯಾದ ರಾಜ್ಯ. ಇಲ್ಲಿ ಅನೇಕ ಗುಡಿಗೋಪುರಗಳಿವೆ. ಈಗುಡಿಗೋಪುರಗಳು ರಾಜ್ಯದ ಇತಿಹಾಸವನ್ನು sಸಾರುತ್ತವೆ.ಇದಕ್ಕೆ ಮಂಡ್ಯ ಜಿಲ್ಲೆಯು ಹೊರತಾಗಿಲ್ಲ. ಇಲ್ಲಿ ಅನೇಕ ದೇವಾಲಯವಿದ್ದು, ಮಂಡ್ಯ ತಾಲ್ಲೂಕು ಸಾತನೂರು ಗ್ರಾಮದ ಶ್ರೀಕಂಬದನರಸಿಂಹಸ್ವಾಮಿ ದೇವಾಲಯವು ಇದಕ್ಕೆ ಸಾಕ್ಷಿಯಾಗಿದೆ, ವಿಜಯನಗರದ ಅರಸರ ಕಾಲದಲ್ಲಿ ಪಾಳೇಗಾರರಾಗಿದ್ದ ಗಂಗಯ್ಯ ದಂಡನಾಯಕ ಬಸವರಸ ಮತ್ತು ಕುಂಪದ ನಾಯಕರ ಮೈದನಾಗಿದ್ದ ವೀರಸಂಕರಸನ ಕೋರಿಕೆಯ ಮೇರೆಗೆ ಸಿಂಗಣ್ಣಯ್ಯನು ಕಂಬದ ತಿರುಮಲಸ್ವಾಮಿ ರಥೋತ್ಸವಕ್ಕೆ ಭೂಮಿಯನ್ನು ಬಿಟ್ಟ ಸಂಗತಿ ಇಲ್ಲಿನ ಶಾಸನದಿಂದ ತಿಳಿಯುತ್ತದೆ. ಮುಂದುವರೆದು ಬಹುದಾನ್ಯ ಸಂವತ್ಸರದ ಬಾದ್ರಪದ ಶುಕ್ಲ ಪಂಚಮಿಯಂದು ಸುಮಾರು 15ನೇ ಶತಮಾನದಲ್ಲಿ ಈ ದೇವಸ್ಥಾನವು ಪ್ರತಿಷ್ಠಾಪಿಸಲ್ಪಟ್ಟಿತು ಎಂದು ಶಾಸನ ತಿಳಿಸುತ್ತದೆ. ಈ ದೇವಾಲಯದ ಸ್ಥಳ ಪುರಾಣದಂತೆ ಇಲ್ಲಿ ಶ್ರೀಮಾಂಡವ್ಯ ಋಷಿಗಳು ತಪಸ್ಸು ಮಾಡಿ ಈ ದೇವಾಲಯ ಇರುವ ಕಡೆ ಸ್ವಾಮಿಯನ್ನು ಆಹ್ವಾನಿಸಿ...