ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಪ್ರಸಿದ್ದ ಸರ್ವಧರ್ಮದ ಪ್ರಮುಖ ಧಾರ್ಮಿಕ ಸ್ಥಳವಾದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರಕ್ಕೆ, ಒಂದು ಇತಿಹಾಸವಿದ್ದು, ೧೪-೧೫ನೇ ಶತಮಾನದಲ್ಲಿ ಮೈಸೂರು ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗೋಸಲ ಪೀಠದ ಶ್ರೀ ಚನ್ನಬಸವೇಶ್ವರ ಸ್ವಾಮಿಗಳವರ ಶಿಷ್ಯರಾಗಿ ಗುರುವಿನ ಅಣತೆಯಂತೆ ಲೋಕ ಸಂಚಾರ ಹೊರಟ ಶ್ರೀ ಸಿದ್ಧಲಿಂಗ ಶಿವಯೋಗಿಗಳು ಪವಾಡಗಳನ್ನು ನಡೆಸುತ್ತಾ ಹಿಮಾಚಲದಿಂದ ಕನ್ಯಾಕುಮಾರಿಯವರೆಗೆ ಶಿವ ಧರ್ಮವನ್ನು ಪ್ರಚಾರ ಮಾಡುತ್ತಾ ಭಕ್ತರ ಅಭಿಷ್ಠದಂತೆ ಕಗ್ಗೆರೆ ಕ್ಷೇತ್ರಕ್ಕೆ ದಯಮಾಡಿಸಿದರು. ಕಗ್ಗೆರೆಯ ಭಕ್ತ ನಂಬಣ್ಣನ ಅಭೀಷ್ಠದಂತೆ ಅವನ ಮನೆಗೆ ಶಿವಪೂಜೆ ನಿಮಿತ್ತ ಒಪ್ಪದ ಕಾಲಕ್ಕೆ ಅಂದಿನ ಕಾಲದ ದರೋಡೆಕೋರರ ಗುಂಪು ಪುರಕ್ಕೆ ನುಗ್ಗಲು ಕಗ್ಗೆರೆ ಪುರ ನಿವಾಸಿಗಳು ಗುಳೇ ಹೊರಟರು, ವೀರಶೈವಧರ್ಮದಂತೆ ಬಿನ್ನಹ ಪೂರೈಸದೇ ಹೋಗಬಾರದೆಂಬ ಧರ್ಮಕ್ಕೆ ಅನುಸಾರವಾಗಿ ಭಕ್ತನನ್ನು ಕಾಯುತ್ತ ಕುಳಿತು ಶಿವಯೋಗ...