ಈ ಕ್ಷೇತ್ರಕ್ಕೆ ಒಂದು ವೈಭವಶಾಲಿ ಇತಿಹಾಸವಿದ್ದು, ಸ್ಥಳೀಯ ಎರಡು ಮನೆತನಗಳು ಇಲ್ಲಿನ ದೇವರ ಕಾರ್ಯ ಇಂದಿನವರೆಗೆ ನಿರ್ವಿಘ್ನವಾಗಿ ನಡೆದುಕೊಂಡು ಬರುವಂತೆ ನೋಡಿ ಕೊಂಡಿವೆ. ಆಳ್ವ ಹೆಗಡೆ ಮತ್ತು ಕುರ್ಲ ಹೆಗಡೆ ಮನೆತನದವರ ಅನುವಂಶಿಕ ಆಡಳಿತದಲ್ಲಿ ಈ ಕ್ಷೇತ್ರ ಹಂತ ಹಂತವಾಗಿ ಬೆಳೆದುಬಂದಿದೆ. ಈ ಕ್ಷೇತ್ರದ ಶಕ್ತಿಗಳ ಕಾರಣೀಕ ಎಷ್ಟಿತ್ತು ಎಂದರೆ ಹಿಂದಿನಕಾಲದಲ್ಲಿ ಧರ್ಮಸ್ಥಳಕ್ಕೆ ಸಲ್ಲಿಕೆಯಾಗುವ ಕಾಣಿಕೆಯನ್ನು ಹಿರಿಯಡ್ಕದಲ್ಲಿ ಸ್ವೀಕರಿಸುತ್ತಿದ್ದರು. ಧರ್ಮಸ್ಥಳದ ಆಣೆ ಪ್ರಮಾಣಗಳನ್ನು ವೀರಭದ್ರನ ನಡೆಯಲ್ಲಿ ತೀರ್ಮಾನ ಮಾಡಿ ಪರಿಹಾರ ಪಡೆಯಲಾಗುತ್ತಿತ್ತು. ಆದರೆ ಹಿರಿಯಡ್ಕದ ನ್ಯಾಯವನ್ನು ಧರ್ಮಸ್ಥಳದಲ್ಲಿ ತೀರ್ಮಾನ ಮಾಡಲು ಸಾಧ್ಯವಿರಲಿಲ್ಲ. ಈ ರೀತಿ ಒಂದು ಕಾಲದಲ್ಲಿ ಧರ್ಮಸ್ಥಳದಷ್ಟೇ ಪ್ರಭಾವಶಾಲಿಯಾಗಿದ್ದ ದೇವಾಲಯವಿದು. ತುಳುನಾಡಿನ ಎಲ್ಲಾ ಕಡೆಗಳಲ್ಲಿ ಇರುವಂತೆ ಹಿರಿಯಡಕದಲ್ಲೂ ಅತೀ ಪ್ರಾಚೀನ ಕಾಲದಲ್ಲಿ ಬೆರ್ಮರ ಆರಾಧನೆ ಮಾತ್ರವಿತ್ತು. ಪಂಚಶಕ್ತಿಗಳಾದ ಬೆರ್ಮರು, ನಾಗ, ರಕ್ತೇಶ್ವರಿ,ಕ್ಷೇತ್ರಪಾಲ ಮತ್ತು...