ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದೆ. ಇದು ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ನಿರ್ಮಿಸಿರುವ ದೇವಸ್ಥಾನವಾಗಿರುತ್ತದೆ. ಪೂರ್ವಿಕರಾದಂತಹ ಅನ್ನಂ ಭಟ್ಟರು ಈ ದೇವಸ್ಥಾನವನ್ನು ನಿರ್ಮಿಸಿರುತ್ತಾರೆ, ಇವರು ಕಾಲು ನಡುಗೆಯಲ್ಲಿ ಕುಕ್ಕೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ತಾನಕ್ಕೆ ಎರಡು ತಿಂಗಳ ಮುಂಚಿತವಾಗಿ ಹೋಗುತ್ತಿದ್ದರು, ಕುಕ್ಕೆ ಶ್ರೀ ಸುಬ್ರಮಣ್ಯ ಸ್ವಾಮಿಯು ಧರ್ಮಸ್ಥಳದ ಹತ್ತಿರ ಸೂಳ್ಯ ತಾಲ್ಲೂಕಿನಲ್ಲಿ ಇರುತ್ತದೆ. ಒಂದು ಸಲ ಕುಕ್ಕೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮರಥೋಸ್ಥವ ನಡೆಯಬೇಕಾದ ಸಂದರ್ಬದಲ್ಲಿ ರಥ ಎಳೆದರು ಕೂಡಾ ಕದಲಲಿಲ್ಲಾ ಎಂದು ಪ್ರತೀಥಿ. ಆಗ ಒಬ್ಬ ಬ್ರಾಹ್ಮಣ ವಟುವಿಗೆ ಶ್ರೀ ಸುಬ್ರಮಣ್ಯ ಸ್ವಾಮಿ ಮೈಮೇಲೆ ಬಂದು ನನ್ನ ಭಕ್ತ ಇನ್ನು ಸ್ವಲ್ಪ ದೂರದಲ್ಲಿ ಬರುತ್ತಿದ್ದಾರೆ, ಅವರು ಬರುವವರೆಗೂ ರಥ ಎಳೆಯ ಬಾರದು ಎಂದು ಸಂಕಲ್ಪವಾಯಿತು ಎಂದು ಪ್ರತೀಥಿ,...