ಕೋರವಾರ ಶ್ರೀ ಅಣವೀರಭದ್ರೇಶ್ವರ ದೇವಾಲಯದ ಚರಿತ್ರೆ, ಕರ್ನಾಟಕದ ಇತರೆ ದೇವಾಲಯಗಳಂತೆ ಮಹತ್ವವನ್ನು ಕೊಡುವಂತಹ ಒಂದು ದೇವಾಲಯ ಅದುವೇ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀ ಅಣಿ ವೀರಭದ್ರೇಶ್ವರ ದೇವಾಲಯ ಅಂತೆಯೆ ಬಹುದೂರಿನ ನರೆಯ ರಾಜ್ಯದ ಆಂಧ್ರ, ಮಹಾರಾಷ್ಟ ಕರ್ನಾಟಕ ಪ್ರಾಂತೀಯ ಜನ ದೇವರ ದರ್ಶನಕ್ಕಾಗಿ ಭಾವುಕರಾಗಿ ಬಂದು ಹೋಗುವದನ್ನು ಕಾಣುತ್ತೆವೆ.ಪೂರ್ವ ವೃತ್ತಾಂತ : ಭೂಮಂಡಲದಲ್ಲಿ ಯುಗ ಯುಗಾಂತರವಾಗಿ ಶಿವನ ಅಪ್ಪಣೆಯ ಮೆರೆಗೆ ಅವತಾರ ತಾಳುತ್ತಾ ದುಷ್ಟ ಶಿಕ್ಷಕನಾಗಿ, ಶಿಷ್ಟರಕ್ಷಕನಾಗಿ ಬಂದು ಧರ್ಮೋದ್ದಾರ, ಸಮಾಜೋದ್ಧಾರ, ಜನೋದ್ಧಾರ, ಭಕ್ತೋದ್ಧಾರ ಕಾರ್ಯ ಮಾಡುತ್ತಾ ಬಂದಿರುವುದು ಹಿಂದಿನ ವೃತ್ತಾಂತಗಳ ಚರಿತ್ರೆಗಳ ಪುರಾಣ ಪುಣ್ಯ ಕಥೆಗಳ ಮೂಲಕ ನಮ್ಮ ಗಮನಕ್ಕೆ ಬಂದರೆ ಇಲ್ಲಿ ಸ್ವಲ್ಪ ರಾಕ್ಷಸರ ಕಾಲಮಾನ ರಾವಣಾಸುರ ಕುಂಭಕರ್ಣ ವಿಭೀಷಣ ಮುಂತಾದ ರಾಕ್ಷಸ ವೃತ್ತಾಂತ ಕಥೆಗಳಾಗಲೀ...